Advertisement

ಮಹೇಶ್‌ಗೆ ಚಿತ್ರ ಮಾಡ್ತಾರಂತೆ ರಾಜಮೌಳಿ

12:06 PM Apr 20, 2020 | Suhan S |

ಯಾವುದೇ ಚಿತ್ರರಂಗವಿರಲಿ ಅಲ್ಲಿನ ಅಭಿಮಾನಿಗಳು ಒಂದು ಆಸೆಪಡುತ್ತಾರೆ. ಅದೇನೆಂದರೆ ಸ್ಟಾರ್‌ ನಟ ಹಾಗೂ ಸ್ಟಾರ್‌ ನಿರ್ದೇಶಕ ಒಟ್ಟಾಗಿ ಸಿನಿಮಾ ಮಾಡಬೇಕೆಂದು. ಈ ಮೂಲಕ ಆ ಚಿತ್ರರಂಗದ ಕ್ರೇಜ್‌ ಹೆಚ್ಚುವ ಜೊತೆಗೆ ಅಭಿಮಾನಿಗಳಿಗೆ ಹಬ್ಬವಾಗಿರುತ್ತದೆ.

Advertisement

ಖ್ಯಾತ ತೆಲುಗು ನಟ ಮಹೇಶ್‌ ಬಾಬು ಹಾಗೂ ಬಾಹುಬಲಿ ಖ್ಯಾತಿಯ ರಾಜಮೌಳಿ ಬಗ್ಗೆ ಅಭಿಮಾನಿಗಳು ಈ ತರಹದ ಒಂದು ಆಸೆ ವ್ಯಕ್ತಪಡಿಸಿದ್ದರು. ಅದೀಗ ಈಡೇರುತ್ತಿದೆ. ಅದೇನೆಂದರೆ ಮಹೇಶ್‌ ಬಾಬು ಹಾಗೂ ರಾಜಮೌಳಿ ಜೊತೆಯಾಗಿ ಸಿನಿಮಾ ಮಾಡುವುದು ಬಹುತೇಕ ಪಕ್ಕಾ ಆಗಿದೆ. ರಾಜಮೌಳಿ ಈಗ ಕೇವಲ ತೆಲುಗು ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ಅವರೀಗ ಭಾರತೀಯ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಸಿನಿಮಾದಿಂದ ಸಿನಿಮಾಕ್ಕೆ ಹೊಸ ಪ್ರಯೋಗ ಮಾಡುತ್ತಾ ಬರುತ್ತಿರುವ ರಾಜಮೌಳಿ ಈಗ ಆರ್‌ಆರ್‌ ಆರ್‌ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಳಿಕ ಯಾವ ಹೀರೋ ಜೊತೆ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲವಿತ್ತು. ಅದಕ್ಕೆ ಉತ್ತರ ಮಹೇಶ್‌ ಬಾಬು. ಮುಂದಿನ ವರ್ಷ ಮಹೇಶ್‌ ಬಾಬು ಜೊತೆ ರಾಜ್‌ ಮೌಳಿ ಸಿನಿಮಾ ಮಾಡುವುದು ಬಹುತೇಕ ಪಕ್ಕಾ ಆಗಿದೆ.

ಇಷ್ಟು ದಿನ ಆಕ್ಷನ್‌ ಹೀರೋ ಆಗಿ ಗುರುತಿಸಿಕೊಂಡಿದ್ದ ಮಹೇರ್ಶ ಬಾಬು ಅವರನ್ನು ರಾಜಮೌಳಿ ಹೊಸ ಗೆಟಪ್‌ನಲ್ಲಿ ತೋರಿಸಲಿದ್ದಾರಂತೆ. ಈ ಸುದ್ದಿ ಸಿನಿಮಾ ಪ್ರೇಮಿಗಳಿಗೆ ಖುಷಿ ನೀಡಿರೋದಂತೂ ಸುಳ್ಳಲ್ಲ. ಬಹುತೇಕ ಸ್ಟಾರ್‌ ನಟರು ಕೂಡಾ ರಾಜಮೌಳಿ ಚಿತ್ರದಲ್ಲಿ ನಟಿಸುವ ಆಸೆ ವ್ಯಕ್ತಪಡಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ ಮಲ್ಟಿಸ್ಟಾರ್‌ ಸಿನಿಮಾ ಮಾಡುವಲ್ಲಿ, ಇಬ್ಬರು ಸ್ಟಾರ್‌ ನಟರನ್ನು ನಿಭಾಹಿಸುವಲ್ಲಿ ರಾಜಮೌಳಿ ಎತ್ತಿದ ಕೈ

Advertisement

Udayavani is now on Telegram. Click here to join our channel and stay updated with the latest news.

Next