ಕುದೂರು: ಗ್ರಾಮದ 5ನೇ ವಾರ್ಡ್‌ನ ಮಹಾತ್ಮ ನಗರದಲ್ಲಿರುವ ರಾಜಕಾಲುವೆ ಒತ್ತುವರಿ ಆಗಿದ್ದು, ಹೂಳು ತುಂಬಿಕೊಂಡು, ಗಿಡಗಂಟಿ ಬೆಳೆದು ಕೊಳಚೆ ನೀರು ಹರಿಯದೇ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ.
ಒಂದೆಡೆ ಬಿಸಿಲಿನ ತಾಪ, ಮತ್ತೂಂದೆಡೆ ದುರ್ವಾಸನೆ, ಗಾಳಿ ಬೀಸಿದ್ರೆ ಸಾಕು ಚರಂಡಿ ಅಕ್ಕಪಕ್ಕದಲ್ಲಿ ನಿಲ್ಲಲು ಆಗುವುದಿಲ್ಲ. ಹೊಟ್ಟೆಯ ನೋವು ಬರುವಮಟ್ಟಿಗೆ ದುರ್ವಾಸನೆ ಬರುತ್ತದೆ. ಸಂಜೆಯಾದ್ರೆ ಸಾಕು ಸೊಳ್ಳೆ ಗಳ ಕಾಟ ವಿಪರೀತ. ಕಾಲುವೆ ಅಕ್ಕಪಕ್ಕದ ನಿವಾಸಿ ಗಳು, ಅಂಗಡಿಯವರು, ಗ್ರಾಹಕರು ದುರ್ವಾ ಸನೆ, ಸೊಳ್ಳೆ ಕಚ್ಚಿಸಿಕೊಂಡು ರೋಗ ಭೀತಿ ಎದುರಿಸುತ್ತಿದ್ದಾರೆ.
ಕಾಲುವೆ ಪಕ್ಕದಲ್ಲಿ ಶಾಲೆ: ಈ ರಾಜ ಕಾಲುವೆಪಕ್ಕದಲ್ಲೇ ಸರ್ಕಾರಿ ಶಾಲೆ ಇದೆ. ಮಕ್ಕಳು, ದುರ್ವಾಸನೆ ಸೇವಿಸುತ್ತ ಪಾಠ ಕೇಳಬೇಕಿದೆ.ಮೊದಲೇ ಕೊರೊನಾ ದಿಂದ ಆತಂಕಗೊಂಡಿರುವಜನರು, ರಾಜಕಾಲುವೆ ಸ್ವತ್ಛಗೊಳಿಸಲು ಗ್ರಾಪಂ ಅಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಚರಂಡಿಗೆ ಮಾಂಸ, ಮದ್ಯದ ತ್ಯಾಜ್ಯ: ಚುನಾವಣೆ ವೇಳೆ ಭರವಸೆ ನೀಡಿದ್ದ ಜನಪ್ರತಿನಿ ಗಳು ಗೆದ್ದ ನಂತರನಿರ್ಲಕ್ಷ್ಯ ಮಾಡಿದ್ದಾರೆ. ಸ್ಥಳೀಯರು ಹಿಡಿಶಾಪ ಹಾಕಿಕೊಂಡು ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ರಾಜಕಾಲುವೆ ಪಕ್ಕದಲ್ಲಿ ವೈನ್ ಶಾಪ್, ಮಾಂಸ ದ ಅಂಗಡಿಗಳಿದ್ದು, ತ್ಯಾಜ್ಯವನ್ನು ಈ ಕಾಲುವೆಗೆ ಎಸೆಯಲಾಗುತ್ತಿದೆ. ಇದರಿಂದ ಚರಂಡಿ ನೀರು ಹರಿಯದೇ ಮಡುಗಟ್ಟಿ ನಿಂತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳಪೆ ಕಾಮಗಾರಿ: ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿರುವ ಚರಂಡಿ ಕಾಮಗಾರಿ ಅವೈಜಾನಿಕ, ಕಳಪೆ ಆಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕಮಿಷನ್ ಆಸೆಗೆ ಎಂಜಿನಿಯರ್‌ಗಳು,ಗ್ರಾಪಂ ಸದಸ್ಯರು ಮಾಡಿರುವ ಕಾಂಕ್ರೀಟ್ ರಸ್ತೆ,ಚರಂಡಿಗಳ ಗುಣಮಟ್ಟ ಪರೀಕ್ಷಿಸದೇ ಬಿಲ್‌ಪಾಸ್‌ಮಾಡುವುದರಿಂದ ನಾಗರಿಕರು ನಿತ್ಯ ಸಮಸ್ಯೆಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳುಇನ್ನು ಮುಂದಾದರೂ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ರಾಜಕಾಲುವೆ ಸ್ವತ್ಛಗೊಳಿಸಲು ನರೇಗಾ ದಲ್ಲಿ ಕಾರ್ಯಾದೇಶ ಮಾಡಲಾಗಿದೆ. 15 ದಿನಗಳ ಒಳಗೆ ಗುರುಕುಲ ಶಾಲೆಯವರೆಗೂಸ್ವಚ್ಛ ಮಾಡಲಾಗುತ್ತದೆ. ಮೊದಲು ಕೊಳಚೆನೀರು ಸರಾಗವಾಗಿ ಹರಿಯುವಂತೆ ಮಾಡಿ ನಂತರ ಒತ್ತುವರಿ ತೆರವುಗೊಳಿಸಲಾಗುವುದು.
● ಲೋಕೇಶ್, ಪಿಡಿಒ, ಕುದೂರು.
ಸುಮಾರು ದಿನಗಳಿಂದ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಕೊಳಚೆನೀರು ಸರಾಗವಾಗಿ ಹರಿಯುವಂತೆ ಮಾಡಿಎಂದು ಗ್ರಾಪಂಗೆ ಹಲವು ಬಾರಿ ಮನವಿಮಾಡಲಾಗಿದೆ. ಇದಕ್ಕೆ ಪಂಚಾಯ್ತಿ ಆಗಲಿ, ಸದಸ್ಯರಾಗಲಿ ಯಾರೂ ಸ್ಪಂದಿಸುತ್ತಿಲ್ಲ.ಸಂಬಂಧಪಟ್ಟವರು ಕೂಡಲೇ ನಮ್ಮ ಸಮಸ್ಯೆ ಬಗೆಹರಿಸಬೇಕು.
● ನಟರಾಜು, ಮಹಾತ್ಮ ನಗರ ನಿವಾಸಿ
– ಮಂಜುನಾಥ್ ಕುದೂರು