Advertisement
ತಡ ರಾತ್ರಿ 11ರ ಸುಮಾರು ಆರಂಭವಾಗಿ ಬೆಳಗಿನ ಜಾವದ ವರೆಗೆ ನಡೆದ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ, ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ ಸಾವಿರಾರು ಜನರು ಪಾಲ್ಗೊಂಡಿದ್ದರು.
ಹಾಗೂ ಇನ್ನಿತರರು ಭಾಗವಹಿಸಿದ್ದರು. ಶುಕ್ರವಾರ ರಾತ್ರಿ ಸಂದಲ್ (ಗಂಧದ) ಮೆರವಣಿಗೆ ನಡೆದರೆ, ಶನಿವಾರ ಕೋಟೆಯಿಂದ ಮುಖ್ಯ ರಸ್ತೆಯ ಮಾರ್ಗವಾಗಿ ದರ್ಗಾದ ವರೆಗೆ ಝೇಲಾ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಮಧ್ಯ ರಾತ್ರಿಯಿಂದ ಬೆಳಗಿನ ವರೆಗೆ ನಡೆದ ಮೆರವಣಿಗೆಯಲ್ಲಿ ಯುವಕರಿಂದ ನಡೆದ ನೃತ್ಯ ಗಮನ ಸೆಳೆಯಿತು.
Related Articles
Advertisement
ನಗರದ ರಸ್ತೆಗಳು ಹದಗೆಟ್ಟಿವೆ. ನಡೆಯಲು ಬಾರದ ಸ್ಥಿತಿ ಹಲವೆಡೆ ನಿರ್ಮಾಣವಾಗಿದೆ. ಇದೆಲ್ಲವೂ ತಮ್ಮ ಗಮನದಲ್ಲಿದೆ. ರಸ್ತೆ ನಿರ್ಮಾಣ, ಶುದ್ಧವಾದ ಕುಡಿಯುವ ನೀರು ಸೇರಿದಂತೆ ಎಲ್ಲ ಕೆಲಸಗಳನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ನಗರದ ಕೋಟೆ ಪ್ರದೇಶದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಝೇಲಾ ಕಮೀಟಿಯಿಂದ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಾಸಕರು, ಆಸ್ಪತ್ರೆ ನಿರ್ಮಾಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಝೇಲಾ ಕಮೀಟಿ ಕಚೇರಿ ನಿರ್ಮಾಣಕ್ಕೆ ಅಗತ್ಯ ಅನುದಾನಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಝೇಲಾ ಕಮೀಟಿ ಅಧ್ಯಕ್ಷ ಆಶೀಫ್ ಹಾಜಿ ಸೇರಿದಂತೆ ಪ್ರಮುಖರು ಇದ್ದರು.