Advertisement

38 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ ಪತಿ ರಾಜ್ ಕುಂದ್ರಾ

09:26 PM Feb 04, 2022 | Team Udayavani |

ಮುಂಬೈ: ಮುಂಬೈನ ಜುಹುನ ಓಷಿಯಾನ್‌ ವ್ಯೂ ಎಂಬ ಅಪಾರ್ಟ್‌ಮೆಂಟ್‌ನಲ್ಲಿರುವ ಐದು ಫ್ಲಾಟ್‌ಗಳನ್ನು ಉದ್ಯಮಿ ರಾಜ್‌ ಕುಂದ್ರಾ, ತಮ್ಮ ಶಿಲ್ಪಾ ಶೆಟ್ಟಿಯವರ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ.

Advertisement

38.5 ಕೋಟಿ ರೂ. ಮೌಲ್ಯದ ಈ ಐದೂ ಫ್ಲಾಟ್‌ಗಳು ಹಾಗೂ ಈ ಅಪಾರ್ಟ್‌ಮೆಂಟ್‌ ಕೆಳಗಿನ ಬೇಸ್‌ಮೆಂಟ್‌ ಜಾಗ ಕೂಡ ಶಿಲ್ಪಾರ ಹೆಸರಿಗೆ ನೋಂದಾವಣಿಯಾಗಿದ್ದು, ನೋಂದಾವಣಿ ವೇಳೆ, 1.92 ಕೋಟಿ ರೂ.ಗಳನ್ನು ಕಂದಾಯ ರೂಪದಲ್ಲಿ ಕುಂದ್ರಾ ನೀಡಿದ್ದಾರೆ.

ಈ ದಂಪತಿ, ತಮ್ಮೆಲ್ಲಾ ವ್ಯವಹಾರಗಳಲ್ಲಿ ಇದೇ ಫ್ಲಾಟ್‌ಗಳನ್ನೇ ತಮ್ಮ ಅಧಿಕೃತ ವಿಳಾಸವೆಂದು ಉಲ್ಲೇಖೀಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಉತ್ತರ ಕನ್ನಡದ ಭಾಸ್ಕರ ಪಟಗಾರ ಕಾಂಗ್ರೆಸ್ ಸೇರ್ಪಡೆ: ಇನ್ನೂ ಹಲವರು ಬರಲಿದ್ದಾರೆ; ಡಿಕೆಶಿ

ಕಳೆದ ವರ್ಷ ಕುಂದ್ರಾ ಅವರು ಅಶ್ಲೀಲ ಚಿತ್ರಗಳ ತಯಾರಿಕೆ ಪ್ರಕರಣದಲ್ಲಿ ಸಿಲುಕಿ ಬಂಧನಕ್ಕೊಳಗಾಗಿದ್ದ ಬೆನ್ನಲ್ಲೇ ಶಿಲ್ಪಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

Advertisement

ವಿಚ್ಛೇದನ ಹಿನ್ನೆಲೆಯಲ್ಲಿ ಶಿಲ್ಪಾರಿಗೆ ಕುಂದ್ರಾರವರು ತಮ್ಮ ಆಸ್ತಿಯನ್ನು ಜೀವನಾಂಶ ರೂಪದಲ್ಲಿ ನೀಡಿರಬಹುದೇ ಎಂಬ ಅನುಮಾನಗಳು ಹುಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next