ಪೇಶಾವರ: ಖ್ಯಾತ ನಿರ್ಮಾಪಕ, ನಟ ರಾಜ್ ಕಪೂರ್ ಅವರ 100ನೇ ಜನ್ಮದಿನವನ್ನು ಪಾಕಿಸ್ಥಾನದ ಪೇಶಾವರದಲ್ಲಿರುವ ಕಪೂರ್‌ಹೌಸ್‌ನಲ್ಲಿ ಸಿನಿಪ್ರೇಮಿಗಳು ಶನಿವಾರ ಕೇಕ್ ಕತ್ತರಿಸಿ ಅದ್ದೂರಿಯಾಗಿ ಆಚರಿಸಿದರು.
ಭಾರತೀಯ ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ರಾಜ್ ಕಪೂರ್ ಅವರ ಜನ್ಮ ಶತಮಾನೋತ್ಸವ ಆಚರಣೆಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.
ಈ ವೇಳೆ ಕಿಸ್ಸಾ ಖ್ವಾನಿ ಬಜಾರ್‌ನಲ್ಲಿರುವ ಬಾಲಿವುಡ್ ದಂತಕತೆಗಳಾದ ರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಪೂರ್ವಜರ ಮನೆಗಳ ಪುನಃಸ್ಥಾಪನೆಗಾಗಿ ತಲಾ 10 ಕೋಟಿ ಪಾಕ್ ರೂ.ಗಳನ್ನು ಮೀಸಲಿಡುವ ಬಗ್ಗೆ ವಿಶ್ವಬ್ಯಾಂಕ್ ಮಾಡಿರುವ ಘೋಷಣೆಯನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ.
ಭಾರತೀಯ ಚಲನಚಿತ್ರೋದ್ಯಮದ ಪ್ರಸಿದ್ಧ ಬರಹಗಾರ ಮತ್ತು ಸಂಶೋಧಕ ಇಬ್ರಾಹಿಂ ಜಿಯಾ ಈ ವೇಳೆ ರಾಜ್ ಕಪೂರ್ ಅವರ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶಿಸಿದರು.
ಪೇಶಾವರದ ಧಾಕಿ ನಲ್ಬಂದಿಯಲ್ಲಿ 1924ರ ಡಿ.14ರಂದು ರಾಜ್ ಜನಿಸಿದ್ದರು. “ಆವಾರಾ”, “ಬರ್ಸಾತ್’, “ಶ್ರೀ 420”, “ಮೇರಾ ನಾಮ್ ಜೋಕರ್’ನಂತಹ ಶ್ರೇಷ್ಠ ಚಿತ್ರಗಳನ್ನು ನಿರ್ಮಿಸಿದ್ದಾರೆ. 1988ರಲ್ಲಿ ಅವರು ನಿಧನ ಹೊಂದಿದರು.