Advertisement

ರಾಜಸ್ಥಾನ: 10,000 ಪೆಟ್ರೋಲ್‌ ಪಂಪ್‌ ಹಂಚಿಕೆ, ಹೈಕೋರ್ಟ್‌ ನೊಟೀಸ್‌

02:05 PM Jan 12, 2019 | Team Udayavani |

ಜೋಧಪುರ : ಹತ್ತು ಸಾವಿರ ಪೆಟ್ರೋಲ್‌ ಪಂಪ್‌ ಗಳ ಹಂಚಿಕೆಗೆ ತಡೆಯಾಜ್ಞೆ ನೀಡಿರುವ ರಾಜಸ್ಥಾನ ಹೈಕೋರ್ಟ್‌ ನಾಲ್ಕು ವಾರಗಳ ಒಳಗೆ ಉತ್ತರಿಸುವಂತೆ ಕೇಂದ್ರ, ರಾಜ್ಯ ಸರಕಾರಗಳು ಮತ್ತು ಮೂರು ತೈಲ ಕಂಪೆನಿಗಳಿಗೆ ನೋಟೀಸ್‌ ಜಾರಿ ಮಾಡಿದೆ. 

Advertisement

‘ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಒಂದೇ ಬಾರಿಗೆ ಪೆಟ್ರೋಲ್‌ ಪಂಪ್‌ ಹಂಚಿಕೆಯಾಗಿರುವುದರಲ್ಲಿ ಹಲವು ಅನುಮಾನಗಳು ಕಾಡುತ್ತಿವೆ; ಇದರಲ್ಲೇನೋ ಅಕ್ರಮ ವಾಸನೆ ಹೊಡೆಯುತ್ತಿದೆ; ಎಂದು ಆರೋಪಿಸಿ ಬೀರ್‌ಬಲ್‌ ರಾಮ್‌ ಎಂಬವರು ರಾಜಸ್ಥಾನ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ವಿಚಾರಣೆಗೆ ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಪ್ರದೀಪ್‌ ನಂದ್ರಜೋಗ್‌ಮತ್ತು ಜಸ್ಟಿಸ್‌ ಪಿ ಎಸ್‌ ಭಾಟಿ ಅವರನ್ನು ಒಳಗೊಂಡ ಪೀಠವು, ಭಾರತ್‌ ಪೆಟ್ರೋಲಿಯಂ, ಹಿಂದುಸ್ಥಾನ್‌ ಪೆಟ್ರೋಲಿಯಂ ಮತ್ತು ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಗೆ ಮಾತ್ರವಲ್ಲದೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನೊಟೀಸ್‌ ಜಾರಿ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next