Advertisement

ಶೀಘ್ರವೇ  ರೈತ ಶಕ್ತಿ ಯೋಜನೆಗೆ ಚಾಲನೆ: ಸಚಿವ ಬಿ.ಸಿ.ಪಾಟೀಲ್‌

08:46 PM Aug 26, 2022 | Team Udayavani |

ಬೆಂಗಳೂರು: ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕೃಷಿ ಇಲಾಖೆ ಮುಂದಾಗಿದ್ದು, ಕೃಷಿಕರ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ಬಜೆಟ್‌ನಲ್ಲಿ ಘೋಷಿಸಿದಂತೆ ರೈತ ಶಕ್ತಿ ಯೋಜನೆಗೆ ಸೆಪ್ಟೆಂಬರ್‌ನಲ್ಲೇ ಚಾಲನೆ ಸಿಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ.

Advertisement

ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನದ ವೆಚ್ಚದ ಹೊರೆ ತಗ್ಗಿಸಲು  ಕರ್ನಾಟಕ ರಾಜ್ಯದಲ್ಲಿಯೇ  ಮೊದಲ ಬಾರಿಗೆ ಈ ರೈತ ಶಕ್ತಿ ಯೋಜನೆ ಜಾರಿಯಾಗಲಿದೆ.

ಪ್ರತಿ ಎಕರೆಗೆ ರೂ .250 ಗಳಂತೆ ಗರಿಷ್ಠ ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್‌ಗೆ ಸಹಾಯಧನವನ್ನು ನೀಡಲು ರೈತ ಶಕ್ತಿ  ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು, ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next