Advertisement
ಬರಗು ಪೊಂಗಲ್ಬೇಕಾಗುವ ಸಾಮಗ್ರಿ: ಬರಗು – ಒಂದು ಕಪ್, ಬೆಳ್ತಿಗೆ ಅಕ್ಕಿ – ಅರ್ಧ ಕಪ್, ಹೆಸರುಬೇಳೆ – ಅರ್ಧ ಕಪ್, ಹಾಲು – ಎರಡು ಕಪ್, ಬಾದಾಮಿ, ಗೋಡಂಬಿ, ದ್ರಾಕ್ಷಿ – ತಲಾ ನಾಲ್ಕು ಚಮಚ, ಕ್ಯಾರೆಟ್ ತುರಿ – ಆರು ಚಮಚ, ಬೆಲ್ಲದ ಪುಡಿ – ಆರು ಚಮಚ, ಶುಂಠಿ – ಅರ್ಧ ಇಂಚು, ಕಾಳುಮೆಣಸಿನ ಪುಡಿ – ಒಂದು ಚಮಚ, ಜೀರಿಗೆ- ನಾಲ್ಕು ಚಮಚ, ತೆಂಗಿನ ತುರಿ – ಎಂಟು ಚಮಚ, ಹಸಿಮೆಣಸು – ಎರಡು, ಏಲಕ್ಕಿ ಪುಡಿ – ಸುವಾಸನೆಗಾಗಿ, ಉಪ್ಪು ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಬರಗನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ಹೆಸರುಬೇಳೆ ಮತ್ತು ಅಕ್ಕಿಯನ್ನು ಸ್ವಲ್ಪ$ಬೆಚ್ಚಗೆ ಮಾಡಿ. ಇದಕ್ಕೆ ನೆನೆಸಿದ ಬರಗನ್ನು ಸೇರಿಸಿ ಕುಕ್ಕರ್‌ನಲ್ಲಿ ಎರಡು ಕಪ್ ಹಾಲು ಮತ್ತು ಎರಡೂವರೆ ಕಪ್ ನೀರು ಸೇರಿಸಿ ಬೇಯಲು ಇಡಿ. ಒಂದು ವಿಶಲ್ ಬಂದ ಮೇಲೆ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಬೆಲ್ಲಕ್ಕೆ ಸ್ವಲ್ಪ$ನೀರು ಸೇರಿಸಿ ಪಾಕ ಮಾಡಿ. ಇದಕ್ಕೆ ಕಾಯಿತುರಿ, ಕಾಳುಮೆಣಸಿನ ಪುಡಿ, ಶುಂಠಿತುರಿ ಮತ್ತು ಏಲಕ್ಕಿ ಪುಡಿ ಹಾಕಿ, ಕುದಿಸಿ ಇದಕ್ಕೆ ಬೇಕಷ್ಟು ಬೇಯಿಸಿಟ್ಟುಕೊಂಡ ಬರಗುವನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ ಇಳಿಸಿ. ನಂತರ ತುಪ್ಪದಲ್ಲಿ ಹುರಿದ ಬಾದಾಮಿ ತರಿ, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಸೇರಿಸಿ ಮಿಶ್ರಮಾಡಿ ಸರ್ವ್ ಮಾಡಬಹುದು. ಖಾರ ಪೊಂಗಲ್
ತಯಾರಿಸುವ ವಿಧಾನ: ಬಾಣಲೆಗೆ ತುಪ್ಪಹಾಕಿಕೊಂಡು ಇದರಲ್ಲಿ ಕೆಂಪುಮೆಣಸು, ಸಾಸಿವೆ, ಜೀರಿಗೆ, ಕರಿಬೇವು ಸಿಡಿಸಿ. ನಂತರ ಇದಕ್ಕೆ ಹೆಚ್ಚಿದ ಹಸಿ ಮೆಣಸಿನಕಾಯಿ, ಶುಂಠಿ ತರಿ, ಕಾಳುಮೆಣಸಿನ ಪುಡಿ, ತುರಿದ ಕ್ಯಾರೆಟ್ ಮತ್ತು ರುಚಿಗೆ ಬೇಕಷ್ಟು ಉಪ್ಪು$ಸೇರಿಸಿ, ಬಾಡಿಸಿ, ಬೇಯಿಸಿಟ್ಟುಕೊಂಡ ಬರಗು ಸೇರಿಸಿ ಮಿಶ್ರಮಾಡಿ ಸರ್ವ್ ಮಾಡಬಹುದು.
Related Articles
ಬೇಕಾಗುವ ಸಾಮಗ್ರಿ: ಬರಗು- ಎರಡು ಕಪ್, ಸಬ್ಬಕ್ಕಿ – ಕಾಲು ಕಪ್, ತೆಂಗಿನ ತುರಿ- ಅರ್ಧ ಕಪ್, ಮೊಸರು- ಎರಡು ಕಪ್, ಕಾಳುಮೆಣಸು – ಒಂದು ಚಮಚ, ಕ್ಯಾರೆಟ್ ತುರಿ – ಅರ್ಧ ಕಪ್, ಉಪ್ಪು ರುಚಿಗೆ ಬೇಕಷ್ಟು.
Advertisement
ತಯಾರಿಸುವ ವಿಧಾನ: ಮಿಕ್ಸಿಯಲ್ಲಿ ಬರಗು ಮತ್ತು ಸಬ್ಬಕ್ಕಿಯನ್ನು ಸಣ್ಣ ತರಿಯಾಗಿಸಿಕೊಂಡು ಮಿಕ್ಸಿಂಗ್ ಬೌಲ್‌ಗೆ ಹಾಕಿ. ಬಾಣಲೆಯಲ್ಲಿ ಸಾಸಿವೆ, ಕರಿಬೇವಿನ ಒಗ್ಗರಣೆ ಸಿಡಿಸಿ ಇದಕ್ಕೆ ಕಾಳುಮೆಣಸು ತರಿ ಮತ್ತು ಕ್ಯಾರೆಟ್ ತುರಿ ಸೇರಿಸಿ ಬಾಡಿಸಿಕೊಂಡು ಮಿಕ್ಸಿಂಗ್ ಬೌಲ್‌ಗೆ ಸೇರಿಸಿ. ನಂತರ ಇದಕ್ಕೆ ಮೊಸರು, ಕಾಯಿತುರಿ, ಉಪ್ಪು ಸೇರಿಸಿ ಬೇಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಇಪ್ಪತ್ತು ನಿಮಿಷ ಇಡಿ. ನಂತರ ಇಡ್ಲಿ ಸ್ಟಾಂಡ್‌ಗೆ ಎಣ್ಣೆ ಹಚ್ಚಿ ಹಿಟ್ಟು ಹಾಕಿ ಆವಿಯಲ್ಲಿ ಹತ್ತು ನಿಮಿಷ ಬೇಯಿಸಿ. ಕಾಯಿಚಟ್ನಿಯೊಂದಿಗೆ ಸರ್ವ್ ಮಾಡಬಹುದು.
ಖೀಚಡಿ ಬೇಕಾಗುವ ಸಾಮಗ್ರಿ: ಬರಗು – ಒಂದು ಕಪ್, ಬೆಳ್ತಿಗೆ ಅಕ್ಕಿ- ಅರ್ಧ ಕಪ್, ಹೆಸರುಬೇಳೆ – ಕಾಲು ಕಪ್, ಹೆಚ್ಚಿದ ಬೀನ್ಸ್, ಕ್ಯಾರೆಟ್, ಆಲೂಗಡ್ಡೆ, ನೆನೆಸಿದ ಬಟಾಣಿ – ತಲಾ ಕಾಲು ಕಪ್, ಜೀರಿಗೆಪುಡಿ – ಒಂದು ಚಮಚ, ಕಾಳುಮೆಣಸಿನ ಪುಡಿ- ಒಂದು ಚಮಚ, ಕೆಂಪುಮೆಣಸಿನ ಪುಡಿ – ಒಂದು ಚಮಚ, ಸಾರಿನ ಪುಡಿ – ಎರಡು ಚಮಚ, ಶುಂಠಿ – ಅರ್ಧ ಇಂಚು, ಹೆಚ್ಚಿದ ಈರುಳ್ಳಿ ಮತ್ತು ಟೊಮೆಟೋ – ಒಂದು, ಉಪ್ಪು ರುಚಿಗೆ ಬೇಕಷ್ಟು. ತಯಾರಿಸುವ ವಿಧಾನ: ಕುಕ್ಕರ್‌ನಲ್ಲಿ ಎರಡು ಚಮಚ ತುಪ್ಪಹಾಗೂ ಎಣ್ಣೆ ಹಾಕಿ ನೀರುಳ್ಳಿ , ಟೊಮೆಟೋ, ಹಸಿಮೆಣಸು ಇತ್ಯಾದಿಗಳನ್ನು ಬಾಡಿಸಿಕೊಂಡು ಇದಕ್ಕೆ ಚಿಟಿಕಿ ಹಳದಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಗೂ ಮೇಲೆ ತಿಳಿಸಿದ ತರಕಾರಿಗಳು ಮತ್ತು ಪುಡಿಗಳನ್ನು ಸೇರಿಸಿ ಮಿಶ್ರಮಾಡಿ. ನಂತರ ಇದಕ್ಕೆ ಬರಗು, ಅಕ್ಕಿ, ಹೆಸರು ಬೇಳೆಗಳನ್ನು ಸೇರಿಸಿ ನಾಲ್ಕು ಕಪ್ ನೀರು ಸೇರಿಸಿ ಬೇಯಿಸಿ. ಒಂದು ವಿಶಲ್ ಕೂಗಿಸಿ ಹತ್ತು ನಿಮಿಷ ಬೇಯಿಸಿ. ನಂತರ ಮೇಲಿನಿಂದ ಕಾಯಿತುರಿ ಮತ್ತು ಕೊತ್ತಂಬರಿಸೊಪ್ಪು$ಹರಡಿ ಸರ್ವ್ ಮಾಡಬಹುದು. ಗೀತಸದಾ