Advertisement

ಬಿಎಸ್‌ಎನ್‌ಎಲ್‌ಗಾಗಿ ಮರಗೋಡು ಗ್ರಾಮಸ್ಥರಿಂದ ಹಣ ಸಂಗ್ರಹ

11:46 PM Jun 15, 2019 | Team Udayavani |

ಮರಗೋಡು : ದಿನದಿಂದ ದಿನಕ್ಕೆ ಗ್ರಾಹಕರಿಂದ ದೂರವಾಗುತ್ತಿರುವ ಕೇಂದ್ರ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ವಿರುದ್ಧ ಮರಗೋಡು ಗ್ರಾಮಸ್ಥರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಬಿಎಸ್‌ಎನ್‌ಎಲ್‌ ಕೇಂದ್ರದ ಜನರೇಟರ್‌ಗಾಗಿ ಮರಗೋಡು ಗ್ರಾಮ ಸ್ಥರೆ ಭಿಕ್ಷೆ ಬೇಡಿ ಬಂದ ಹಣದಿಂದ ಡೀಸೆಲ್‌ ಖರೀದಿಸಿ ನೀಡಿದ್ದಾರೆ.

Advertisement

ಮರಗೋಡು ಗ್ರಾಮ ಪಂಚಾಯತ್‌ ಕಟ್ಟಡದಲ್ಲಿರುವ ಬಿಎಸ್‌ಎನ್‌ಎಲ್‌ ಕೇಂದ್ರ, ವಿದ್ಯುತ್‌ ಕೈಕೊಟ್ಟಾಗಲೆಲ್ಲಾ ತನ್ನ ಸೇವೆ ಸ್ಥಗಿತಗೊಳಿಸುತ್ತದೆ. ಈ ಸಂದರ್ಭ ಪರ್ಯಾಯ ವ್ಯವಸ್ಥೆಯಾಗಿ ಜನರೇಟರ್‌ ಇದ್ದರೂ ಸಹ ಇದಕ್ಕೆ ಡೀಸೆಲ್‌ ಪೂರೈಸಲು ಅಧಿಕಾರಿಗಳಿಂದ ಹಣ ದೊರಕುತ್ತಿಲ್ಲವಂತೆ. ಮರಗೋಡು ಗ್ರಾಮದಲ್ಲಿ ಕಳೆದ ನಾಲ್ಕೆçದು ದಿನಗಳಿಂದ ವಿದ್ಯುತ್‌ ಕೈಕೊಟ್ಟಿದ್ದು ಬಿಎಸ್‌ಎನ್‌ಎಲ್‌ ಸೇವೆ ಆಗಿಂದ್ದಾಗೆ ಸ್ಥಗಿತವಾಗುತ್ತಿದೆ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಶುಕ್ರವಾರದಂದು ಬೆಳಗ್ಗೆ ಗ್ರಾಮ ಕೇಂದ್ರದಲ್ಲಿ ಸೇರಿ ಸಾರ್ವಜನಿಕರಿಂದ, ವಾಹನ ಚಾಲಕರಿಂದ ಮತ್ತು ಅಂಗಡಿ ಮಳಿಗೆಗಳಿಂದ ಹಣ ಸಂಗ್ರಹಿಸಿ , ಸಂಗ್ರಹವಾದ 2800 ರೂಪಾ ಯಿಗಳಿಗೆ 35 ಲೀಟರ್‌ ಡೀಸೆಲ್‌ ಖರೀದಿಸಿ ಗ್ರಾಮಸ್ಥರು ಬಿಎಸ್‌ಎನ್‌ಎಲ್‌ ಕೇಂದ್ರಕ್ಕೆ ನೀಡಿದ್ದಾರೆ.

ಈ ಸಂದರ್ಭ ಮಾತನಾಡಿದ ಆಟೋ ಚಾಲಕರ ಸಂಘದ ಅಧ್ಯಕ್ಷ ತಮ್ಮುಣಿ, ಮರಗೋಡಿನಲ್ಲಿ 30 ಆಟೋ ರಿûಾಗಳಿದ್ದು ತುರ್ತು ಸಂದರ್ಭದಲ್ಲಿ ಗ್ರಾಹಕರು ಕರೆ ಮಾಡಿದರೂ ತಮಗೆ ಸಂಪರ್ಕ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷಿ¾àಪತಿ, ನಮ್ಮಿಂದ ದುಬಾರಿ ದರ ಪಡೆಯುವ ಬಿಎಸ್‌ಎನ್‌ಎಲ್‌ ಅದೇ ಮಟ್ಟದ ಸೇವೆ ನೀಡುವಲ್ಲಿ ವಿಫ‌ಲವಾಗುತ್ತಿದೆ ಎಂದು ದೂರಿದರು. ಮರಗೋಡು ವಿಎಸ್‌ಎಸ್‌ಎನ್‌ ಬ್ಯಾಂಕ್‌ ಅಧ್ಯಕ್ಷ ಬಾಳೆಕಜೆ ಯೋಗೇಂದ್ರ, ವೈಷ್ಣವಿ, ಫ‌ುಟ್ಬಾಲ್‌ ಕ್ಲಬ್‌ನ ಅಧ್ಯಕ್ಷ ಪಾಣತ್ತಲೆ ಜಗದೀಶ್‌ ಮಂದಪ್ಪ, ಕಾಫಿ ಬೆಳಗಾರ ಮಂಡೇಪಂಡ ಗಣಪತಿ, ಕಲಾವಿದ ಐಮಂಡ ರೂಪೇಶ್‌ ನಾಣಯ್ಯ, ನ್ಪೋರ್ಟ್‌ ಆ್ಯಂಡ್‌ ರಿಕ್ರಿಯೇಷನ್‌ ಕ್ಲಬ್‌ ಕಾರ್ಯದರ್ಶಿ ಕೋಚನ ಅನೂಪ್‌ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next