Advertisement

ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ

06:46 AM Jun 10, 2020 | Lakshmi GovindaRaj |

ಚನ್ನರಾಯಪಟ್ಟಣ: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್‌ 19 ವೈರಸ್‌ ನಿಯಂತ್ರಿಸಲು ಈ ವರೆಗೆ ಹೋರಾಟ ಮಾಡಿದಷ್ಟು ಮುಂದಿನ ದಿನಗಳು ಸುಲಭ ವಾಗಿಲ್ಲ. ಇದನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸವಾಲಾಗಿ  ಸ್ವೀಕರಿಸಬೇಕು ಎಂದು ಜಿಲ್ಲಾ ಮಂತ್ರಿ ಕೆ.ಗೋಪಾಲಯ್ಯ ಹೇಳಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆದ ಕೋವಿಡ್‌ -19 ಮೇಲ್ವಿಚಾರಣಾ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ ವೇಳೆ  ಹೊರಗಿ ನಿಂದ ಯಾರೂ ತಾಲೂಕಿಗೆ ಪ್ರವೇಶ ಮಾಡು ತ್ತಿರಲಿಲ್ಲ. ಈಗ ರೈಲು ಬಸ್‌ ಸಂಚಾರ ಪ್ರಾರಂಭ ವಾಗಿದೆ. ಈ ವೇಳೆಯಲ್ಲಿ ಅಧಿಕಾರಿಗಳು ಎಚ್ಚರ ತಪ್ಪಿದರೆ ಸಾರ್ವಜನಿಕರು ಸಂಕಷ್ಟ ಎದುರಿಸ ಬೇಕಾಗುತ್ತಿದೆ. ಕೋವಿಡ್‌ 19  ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿ ಸುವ ಜವಾಬ್ದಾರಿ ನಿಮ್ಮದಾಗಿದೆ ಎಂದರು.

ಕುಡಿಯುವ ನೀರಿಗೆ ಅನುದಾನ ಕೊಡಿ: ಶಾಸಕ ಸಿ.ಎನ್‌.ಬಾಲಕೃಷ್ಣ ಮಾತನಾಡಿ, ಪಟ್ಟಣ ದಿನೇ ದಿನೆ ಬೆಳೆಯುತ್ತಿದೆ. ಈಗಾಗಲೆ ಮೂರನೇ ಹಂತದ ಕುಡಿಯುವ ನೀರಿನ ಯೋಜನೆ ಇದ್ದರೂ ಕೆಲ ಬಡಾವಣೆಗೆ ಪೈಪ್‌ ಲೈನ್‌ ಮಾಡಲು  ಅನುದಾನವಿಲ್ಲ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಎಸ್‌ಎಫ್ಸಿ ಅನುದಾನ ಕೊಡಿ: ಎಸ್‌ಎಫ್ಸಿ ಅನುದಾನವನ್ನು ಸರ್ಕಾರ ಹಿಂಪಡೆದಿದೆ. ಅದನ್ನು ಪುನಃ ಕೊಡಿಸಲು ಮಂತ್ರಿಗಳು ಮುಂದಾಗಬೇಕು. ಪಂಚಾಯತ್‌ ರಾಜ್‌ ಇಲಾಖೆಯ 12 ಕೋಟಿ ರೂ. ಹಣವನ್ನು ಖಜಾನೆಯಿಂದ ಸರ್ಕಾರ  ಹಿಂಪಡೆದಿದೆ. ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಕೊಡಿಸಬೇಕಾಗಿದೆ ಎಂದರು.

ಆಶ್ರಯ ಮನೆ ಅನುದಾನ 20 ಕೋಟಿ ಬಾಕಿ ಇದೆ. 65 ಕೋಟಿ ರೂ. ನೀರಾವರಿ ಇಲಾಖೆ ಹಣ ವಾಪಸಾಗಿದೆ. ದಯಮಾಡಿ ಈ ಎಲ್ಲಾ ಅನುದಾನ ಕೊಡಿಸಲು  ಮುಂದಾಗ ಬೇಕು. 53.76 ಕೋಟಿ ರೂ. ವೆಚ್ಚದಲ್ಲಿ ನರೇಗಾ ಕಾಮಗಾರಿ ಮಾಡಿಸಲಾಗುತ್ತಿದೆ. ನಫೆಡ್‌ ನಿಂದ ಕೊಬ್ಬರಿ ಖರೀದಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

Advertisement

ಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ,  ಜಿಲ್ಲೆ ಹಾಗೂ ತಾಲೂಕಿನ ಏತ ನೀರಾವರಿ ಯೋಜನೆಗೆ ಕೃಷಿ ಭೂಮಿ ಕಳೆದುಕೊಂಡಿರುವ ಸಾಕಷ್ಟು ರೈತರಿಗೆ ಇನ್ನೂ ಪರಿಹಾರದ ಹಣ ದೊರೆತಿಲ್ಲ. ಕೂಡಲೇ ಪರಿಹಾರ ಬಿಡುಗಡೆ ಮಾಡಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಏತನೀರಾವರಿ  ಯೋಜನೆ ಕಾಮಗಾರಿ ಚುರುಕುಗೊಳಿಸಲು ಅಧಿಕಾರಿಗಳ ಸಭೆ ನಡೆಸಬೇಕು ಎಂದರು. ಡೀಸಿ ಆರ್‌.ಗಿರೀಶ್‌, ಎಸಿ ಡಾ. ನವೀನ್‌ ಭಟ್‌, ಜಿಪಂ ಸಿಇಒ ಪರಮೇಶ್ವರ್‌, ಎಸ್‌ಪಿ ಶ್ರೀನಿವಾಸ್‌ಗೌಡ, ತಹಶೀಲ್ದಾರ್‌ ಮಾರುತಿ, ಮೊದಲಾದವರು  ಇದ್ದರು.

ಹಾಳಾಗಿರುವ ಬೆಳೆ ಸಮೀಕ್ಷೆ ಮಾಡಿ: ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೇ ಗ್ರಾಮಗಳಿಗೆ ತೆರಳಿ ಕೋವಿಡ್‌ 19 ವೇಳೆ ಹಾಳಾಗಿರುವ ಹೂವು, ತರಕಾರಿ ಬೆಳೆ ಸಮೀಕ್ಷೆ ಮಾಡಬೇಕು. ನಷ್ಟಕ್ಕೊಳಗಾದ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಲು ವರದಿ ಸಿದಟಛಿಪಡಿಸ ಬೇಕು ಎಂದು ಸಚಿವ ಗೋಪಾಲಯ್ಯ ಹೇಳಿದರು. ಮುಂಗಾರು ಆರಂಭ ವಾಗುತ್ತಿರುವುದರಿಂದ ಬಿತ್ತನೆ ಬೀಜ ಗೊಬ್ಬರ ಸಮಸ್ಯೆಯಾಗದಂತೆ ನೋಡಿಕೊಳ್ಳ ಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next