ಪಾವಗಡ: ಮಾದಿಗ ಜನಾಂಗದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸ ಬೇಕು ಎಂದು ಆದಿ ಜಾಂಬವ ಮಠ ಕೋಡಿಹಳ್ಳಿ ಪೀಠಾಧಿಪತಿ ಶ್ರೀ ಮಾರ್ಕಂಡೇಯ ಮುನಿಸ್ವಾಮೀಜಿ ಹೇಳಿದರು.
ಪಟ್ಟಣದ ಆದರ್ಶ ನಗರದಲ್ಲಿ ಕರ್ನಾಟಕ ಮಾದಿಗರ ಸಂಘ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಹೇಳಿರುವಂತೆ ಶಿಕ್ಷಣ, ಸಂಘಟನೆ ಮೂಲಕ ಸೌಲಭ್ಯ ಬಳಸಿಕೊಳ್ಳಬೇಕು. ಹೀಗಾಗಿ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡಿಸ ಬೇಕು ಎಂದು ಹೇಳಿದರು.
ಸಂಸದ ಎ.ನಾರಾಯಣಸ್ವಾಮಿ ಮಾತ ನಾಡಿ, ರಾಜ್ಯದಲ್ಲಿ ಮಾದಿಗ ಸಂಘಟನೆಗಳು ಹಲವು ಇದ್ದು, ರಾಜ್ಯಕ್ಕೆ ಒಂದೇ ಸಂಘಟನೆ ಸ್ಥಾಪನೆ ಮಾಡುತ್ತೇನೆ ಎಂದು ಹೇಳಿದರು. ಮಾದಿಗ ಸಮುದಾಯ ವಿದ್ಯಾಭ್ಯಾಸಕ್ಕೆ ಒತ್ತು ಕೊಡುವ ಅಗತ್ಯವಿದೆ. ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಸಮುದಾಯ ಹಿಂದಿದೆ. ಸೌಲಭ್ಯ ತಿಳಿದುಕೊಂಡು ಸದುಪ ಯೋಗಪಡಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಮಾದಿಗ ಸಮಾಜದ ಒಗ್ಗಟ್ಟು ತೋರಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಉಗ್ರನರಸಿಂಹಪ್ಪ, ರಾಜ್ಯಾಧ್ಯಕ್ಷ ದೇವರಾಜು ಅರಸ್ ಮಾದಿಗ, ಉಪಾಧ್ಯಕ್ಷರಾದ ಹನುಮಂತ, ಸಂಘಟನಾ ಕಾರ್ಯದರ್ಶಿ ನರಸಿಂಹರಾಜು, ಜಿಲ್ಲಾಧ್ಯಕ್ಷ ರಾಮಮೂರ್ತಿ, ವಿಭಾಗೀಯ ಅಧ್ಯಕ್ಷ ರಾಜಕುಮಾರ್, ಮಾಜಿ ಸಿಂಡಿಕೇಟ್ ಸದಸ್ಯ ಕೋರ್ಟ್‌ನರಸಪ್ಪ, ಬಿಜೆಪಿ ಮುಖಂಡ ಶಿವಕುಮಾರ್ ಸಾಕೇಲ್, ನೂತನ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ಇತರರಿದ್ದರು.