Advertisement

ಮುಕ್ತಾಯದ ಹಂತದಲ್ಲಿ ಮಳೆಗಾಲದ ಯಕ್ಷಗಾನ ತಿರುಗಾಟ

10:56 PM Oct 17, 2019 | Sriram |

ವಿಶೇಷ ವರದಿಬಸ್ರೂರು: ಪ್ರತಿ ಬಾರಿಯಂತೆ ಈ ಬಾರಿಯೂ ಬಹುತೇಕ ಯಕ್ಷಗಾನ ಮೇಳಗಳು ಮಳೆಗಾಲದ ತಿರುಗಾಟ ನಡೆಸಿಯಾಗಿದೆ. ಮೇ ತಿಂಗಳಲ್ಲಿ ತಿರುಗಾಟದ ಕೊನೆಯ ದೇವರ ಸೇವೆಯಾಟದ ಅನಂತರ ವೃತ್ತಿ ಮೇಳಗಳಿಗೆ, ಹರಕೆಯಾಟದ ಮೇಳಗಳಿಗೆ ದೀರ್ಘ‌ಕಾಲ ರಜೆಯಿರುತ್ತದೆ,ಈ ರಜಾಕಾಲ ಅಂದರೆ ಜುಲೆ„ ತಿಂಗಳಲ್ಲೆ ಮಳೆಗಾಲದ ತಿರುಗಾಟ ಆರಂಭಗೊಳ್ಳುತ್ತದೆ.

Advertisement

ಬಡಗುತಿಟ್ಟಿನ ಶ್ರೀ ಸಾಲಿಗ್ರಾಮ ಹಾಗೂ ಶ್ರೀ ಪೆರ್ಡೂರು ಮೇಳಗಳು ಮಾತ್ರ ಮೇಳದ ವತಿಯಿಂದಲೇ ದೂರದ ಬೆಂಗಳೂರು, ಮುಂಬಯಿ, ಥಾಣೆ ಮುಂತಾದ ನಗರ ಪ್ರದೇಶಗಳಲ್ಲಿ ನೆಲೆಸಿರುವ ಉಡುಪಿ, ದ.ಕ. ಮತ್ತು ಉ.ಕ.ದ ಜನರೇ ಈ ಮಳೆಗಾಲದ ಪ್ರೇಕ್ಷಕರೂ ಹೌದು, ಸಂಘಟಕರೂ ಹೌದು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೇಳಗಳ ಸ್ಟಾರ್‌ ಕಲಾವಿದರಿಗೆ ಆದ್ಯತೆಯಿರುತ್ತದೆ. ಹೆಚ್ಚಾಗಿ ಜನಪ್ರಿಯರಾದ ಹಿಮ್ಮೇಳ-ಮುಮ್ಮೇಳದ ಕಲಾವಿದರೇ ಇಲ್ಲಿ ವಿಜೃಂಭಿಸುತ್ತಾರೆ. ಮಳೆಗಾಲದ ತಿರುಗಾಟದಲ್ಲೂ ಅತಿಥಿ ಕಲಾವಿದರಾಗಿ ವಿಜೃಂಭಿಸುವ ಕಲಾವಿದರೇ ಸಾಮಾನ್ಯ ಜನಪ್ರಿಯ ಕಲಾವಿದರಿಗಿಂತ ಹೆಚ್ಚು ಹಣ ಸಂಪಾದಿಸುತ್ತಾರೆ

ಈ ಮಳೆಗಾಲದ ತಿರುಗಾಟದಲ್ಲೆ ಮುಂದಿನ ತಿರುಗಾಟದ ಹೊಸ ಪ್ರಸಂಗಗಳನ್ನು ಪ್ರಯೋಗಿಸಿ ನೋಡುವ ಕ್ರಮವೂ ಇದೆ. ಅಲ್ಲಿ ಯಶಸ್ವಿಯಾದರೆ ಮುಂದಿನ ತಿರುಗಾಟದಲ್ಲಿ ಆಡುತ್ತಾರೆ. ಈ ಕಾಲದಲ್ಲಿ ಕಲಾವಿದ ಮೇಳಾಂತರವೂ ನಡೆಯುವುದಿದೆ. ಟೆಂಟ್‌ ಮೇಳಗಳ ಪೈಕಿ ಶ್ರೀ ಸಾಲಿಗ್ರಾಮ ಹಾಗೂ ಶ್ರೀ ಪೆರ್ಡೂರು ಮೇಳಗಳನ್ನು ಬಿಟ್ಟರೆ ಶ್ರೀ ಜಲವಳ್ಳಿ ಮೇಳದ ತಿರುಗಾಟ ಮುಂದಿನ ತಿರುಗಾಟದಲ್ಲಿ ಇರುವುದಿಲ್ಲ. ಕಾರಣ ತಿರುಗಾಟದಲ್ಲಾದ ನಷ್ಟ! ಅಂದರೆ ಬಡಗಿನಲ್ಲಿ ಎರಡೇ ಡೇರೆ ಮೇಳಗಳಿದ್ದರೆ ಬಯಲಾಟದ ಮೇಳಗಳಾಗಿ ಹರಕೆಯಾಟದ ಶ್ರೀ ಮಂದಾರ್ತಿ, ಶ್ರೀ ಮಾರಣಕಟ್ಟೆ, ಶ್ರೀ ಕಮಲಶಿಲೆ, ಶ್ರೀ ಅಮೃತೇಶ್ವರಿ, ಶ್ರೀ ಸೌಕೂರು, ಶ್ರೀ ಸಿಗಂದೂರು, ಶ್ರೀ ಮಡಾಮಕ್ಕಿ, ಶ್ರೀ ಹಿರಿಯಡಕ, ಶ್ರೀ ಗೋಳಿಗರಡಿ ಮಂತಾದ ಮೇಳಗಳು ಹರಕೆಯಾಟ ಮತ್ತು ಕಟ್ಟು ಕಟ್ಟಲೆಯಾಟದಲ್ಲೆ ತಿರುಗಾಟ ಮುಗಿಸುತ್ತವೆ. ಈ ಎಲ್ಲ ಮೇಳಗಳು ಹೊಸ ಪ್ರಸಂಗಗಳಂತೆ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸುತ್ತವೆ.

ಶ್ರೀ ಮಂದಾರ್ತಿ, ಶ್ರೀ ಮಾರಣಕಟ್ಟೆ, ಶ್ರೀ ಕಮಲಶಿಲೆ, ಶ್ರೀ ಅಮೃತೇಶ್ವರಿ ಮೇಳಗಳು ಪೌರಾಣಿಕ ಪ್ರಸಂಗಗಳನ್ನಷ್ಟೆ ಪ್ರದರ್ಶಿಸಿ ಸೆ„ ಎನಿಸಿಕೊಳ್ಳುತ್ತವೆ ಎನ್ನುವುದು ಗಮನಾರ್ಹ. ಶ್ರೀ ಮಂದಾರ್ತಿಯ ಎರಡು ಮೇಳಗಳು ಮಳೆಗಾಲದ ಪ್ರತಿದಿನವೂ ಶ್ರೀ ಕ್ಷೇತ್ರದಲ್ಲೇ ಪ್ರದರ್ಶನ ನೀಡುವ ಒತ್ತಡದಲ್ಲಿವೆ. ಉಳಿದಂತೆ ಮುಂದಿನ ಯಕ್ಷಗಾನ ಮೇಳಗಳ ತಿರುಗಾಟ ಹೇಗೆ ಎಂದು ಕಾದು ನೋಡುವ ಕಾಲ ಪ್ರೇಕ್ಷಕನದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next