Advertisement

ನನ್ನ ಮನ ಆನಂದದೆಡೆಗೆ

05:44 PM Jun 13, 2021 | Team Udayavani |

ಮುಂಗಾರಿನ ಮಳೆಯು ಝೇಂಕರಿಸಿದಾಗ,

Advertisement

ಕಾರ್ಮೋಡಗಳು ಘರ್ಷಿಸಿದಾಗ,

ಮೈ ಜುಂ ಎನಿಸುವ ಮಿಂಚು,

ಹೃದಯ ನಡುಗಿಸುವ ಗುಡುಗು,

ಆಗಸದಿ  ರಂಗು ರಂಗಿನ ಕಾಮನಬಿಲ್ಲು,

Advertisement

ಹಾಲ್ಗಡಲು  ಮೈದುಂಬಿ ಹರಿದು,

ಜಲಧಾರೆಯು ಭೋರ್ಗರೆದು,

ಪ್ರಕೃತಿಯ ಸೌಂದರ್ಯ ಬೆಸೆದು,

ವರ್ಷ ಧಾರೆಯು ಇಳೆಗೆ ತಂಪೆರೆದು,

ತರು ಲತೆಗಳು ಚಿಗುರೊಡೆದು,

ಗಿಡ ಮರಗಳು ಮೈನೆರೆದು,

ರೈತನ ಮೊಗ ಸಂತಸದಿ ಬಿರಿದು,

ತಂಪಾಗಿ ಸುರಿದ ಮಳೆಗೆ,

ಇಳೆಯ  ದಾಹ ಅಂತ್ಯದೆಡೆಗೆ,

ಮನೋಹರ ಪ್ರಕೃತಿಯ ಈ ಬೆಸುಗೆ

ನನ್ನ ಮನ ಆನಂದದೆಡೆಗೆ……

 

ಸುಶ್ಮಿತಾ ಕೆ.

ಭಂಡಾರ್‌ ಕಾರ್ಸ್‌ ಕಾಲೇಜು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next