ಕಾರ್ಕಳ: ಪ್ರಾಧ್ಯಾಪಕರ ತರಬೇತಿ ಶಿಬಿರಗಳಿಂದ ಅನೇಕ ವಿಚಾರ ಗಳನ್ನು ತಿಳಿದುಕೊಳ್ಳಲು ಸಹಕಾರಿ. ಹೊಸತನ, ಹೊಸ ವಿಚಾರ ಅರಿಯಲು ಅನುಕೂಲ ಎಂದು ಬೆಂಗಳೂರಿನ ಸಿ.ಎಂ.ಆರ್. ಯುನಿವರ್ಸಿ ಟಿಯ ಸ್ಕೂಲ್ ಆಫ್ ಎಂಜಿನಿಯರಿಂಗ್ ಟೆಕ್ನಾಲಜಿಯ ಸೀನಿಯರ್ ಪ್ರೊ| ಡಾ| ನಾಗರಾಜ್ ಎಂ. ಕೆ. ಅಭಿಪ್ರಾಯಪಟ್ಟರು.
ನಿಟ್ಟೆಯಲ್ಲಿ ಎನ್.ಎಂ.ಎ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ವಿಭಾಗವು ಹಮ್ಮಿಕೊಂಡಿರುವ “ಇಂಟಗ್ರೇಟೆಡ್ ವಾಟರ್ ರಿಸೋರ್ಸ್ ಮ್ಯಾನೇಜೆ¾ಂಟ್’ ಎಂಬ 5 ದಿನಗಳ ಪ್ರಾಧ್ಯಾಪಕರ ಜ್ಞಾನಾಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನೀರಿನ ಸದ್ಬಳಕೆಯ ಬಗೆಗೆ ಚಿಂತನೆ ಅಗತ್ಯ. ಪ್ರತಿ ವರ್ಷವೂ ಬರದ ನೆರಳು ನಮ್ಮನ್ನು ಕಾಣತೊಡಗಿದೆ. ನೀರಿನ ರಕ್ಷಣೆ ಹಾಗೂ ಬಳಕೆಯ ಬಗೆಗೆ ಅರಿವು ಮೂಡಿಸುವ ಕೆಲಸ ನಡೆಯಬೇಕಿದೆ. ಮಳೆಕೊಯ್ಲು ಮುಂತಾದ ಯೋಜನೆಗಳ ಮೂಲಕ ಮಳೆನೀರನ್ನು ಭೂಮಿಗೆ ಇಂಗಿಸುವ ಕೆಲಸ ನಡೆಯಬೇಕು ಎಂದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ| ಐ.ಆರ್. ಮಿತ್ತಂತಾಯ ಮಾತನಾಡಿ, ನೀರಿನ ಸಂರಕ್ಷಣೆ ಕಾರ್ಯ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು ಎಂದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್. ಚಿಪ್ಳೂಣRರ್ ಅಧ್ಯಕ್ಷತೆ ವಹಿಸಿ ಮಾತ ನಾಡಿ, ನೀರಿನ ಬರವನ್ನೇ ಕಾಣದ ಉಡುಪಿಯಂತಹ ಪ್ರದೇಶದಲ್ಲಿ ನೀರಿಗಾಗಿ ಪರದಾಟ ಎಂಬ ವಿಚಾರ ಕೇಳುವ ಸಂದರ್ಭ ಬಂದೊದಗಿರುವುದು ವಿಪರ್ಯಾಸ. ಭೂಮಿಗೆ ಬೀಳುತ್ತಿರುವ ಮಳೆ ನೀರು ಸಂಗ್ರಹ ಅಥವಾ ಇಂಗಿಸುವತ್ತ ಯೋಜನೆ ರೂಪಿಸಿಕೊಳ್ಳದಿದ್ದಲ್ಲಿ ಮುಂದೊಂದು ದಿನ ಭೀಕರ ಬರಗಾಲ ಎದುರಿಸಬೇಕಾಗ ಬಹುದು ಎಂದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ಮುಖ್ಯಸ್ಥ ಡಾ| ಮಹಾದೇವೇ ಗೌಡ ಸ್ವಾಗತಿಸಿ, ಶಿಬಿರ ಸಂಯೋಜಕ ಡಾ| ಭೋಜರಾಜ್ ಪ್ರಾಸ್ತಾವಿಸಿದರು. ಸಹಪ್ರಾಧ್ಯಾಪಕ ಜನಕರಾಜ್ ಕಾರ್ಯಕ್ರಮ ನಿರೂಪಿಸಿ, ಸಹಸಂಯೋಜಕ ತುಷಾರ್ ಶೆಟ್ಟಿ ವಂದಿಸಿದರು.