Advertisement

ಮಳೆ ಹಾನಿ: ಕೇಂದ್ರ ಸರ್ಕಾರ 25 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಬೇಕು: ವಾಟಾಳ್ ಆಗ್ರಹ

03:22 PM Oct 16, 2020 | Mithun PG |

ಬೆಳಗಾವಿ:  ಮಳೆಯ ಅರ್ಭಟದಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ತತ್ತರಿಸಿ ಹೋಗಿದ್ದು ಪ್ರಧಾನಿ ನರೇಂದ್ರ ಮೋದಿ ಕೂಡಲೇ ಈ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. 25 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ಹಿರಿಯ ಕನ್ನಡಪರ ಹೋರಾಟಗಾರ, ವಾಟಾಳ್ ನಾಗರಾಜ್  ಶುಕ್ರವಾರ  ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಉತ್ತರ ಕರ್ನಾಟಕದಲ್ಲಿ ಪ್ರವಾಹ, ಮಳೆಯಿಂದ ಭಾರಿ ಹಾನಿಯಾಗಿದೆ.  ಈವರೆಗೂ ಮಳೆಯಿಂದ ಒಂದು ಲಕ್ಷ ಸಾವಿರ ಕೋಟಿ ನಷ್ಟವಾಗಿದೆ ಎಂದರು.

ಅನ್ಯ ರಾಜ್ಯಗಳಲ್ಲಿ ಪ್ರವಾಹ ಬಂದರೆ ಪ್ರಧಾನಿ ಮೋದಿ ಹೋಗುತ್ತಾರೆ ಪರಿಹಾರ ಘೋಷಣೆ ಮಾಡುತ್ತಾರೆ. ಆದರೆ ಕರ್ನಾಟಕ ಕ್ಕೆ ಮಾತ್ರ ಪ್ರಧಾನಿ ಮೋದಿ ಪರಿಹಾರ ನೀಡುತ್ತಿಲ್ಲ. ಇದರ ಬಗ್ಗೆ ಶಾಸಕರು, ಸಚಿವರು,ಸಂಸದರು ಧ್ವನಿ ಎತ್ತುತ್ತಿಲ್ಲ, ತಕ್ಷಣವೇ ಕೇಂದ್ರ ಸರ್ಕಾರ 25 ಸಾವಿರ ಕೋಟಿ ಪರಿಹಾರ ಘೋಷಿಸಬೇಕು, ಇಲ್ಲವಾದರೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು  ಆಗ್ರಹಿಸಿದರು.

ಇನ್ನೂ ವಿದ್ಯಾಗಮ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಬೇಕು. ಕೋವಿಡ್ ನಿಂದ ಮಕ್ಕಳು ಹಾಗೂ ಶಿಕ್ಷಕರು ಮೃತಪಟ್ಟರೆ ಸರ್ಕಾರ ತಲಾ ಒಂದೊಂದು ಕೋಟಿ ಪರಿಹಾರ ನೀಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next