Advertisement

ಗ್ರಾಮಾಂತರ ಭಾಗದಲ್ಲಿ ಮಳೆ ಕೊರತೆ

11:00 PM May 29, 2019 | Team Udayavani |

ಪುತ್ತೂರು: ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಿಂದ ಸುರಿಯುವ ಮುಂಗಾರು ಪೂರ್ವ ಮಳೆಯ ಕೊರತೆ ಪುತ್ತೂರು ತಾಲೂಕು ವ್ಯಾಪ್ತಿಯ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಕಾಡಿದೆ. ಮೇ 25ರ ತನಕ 36.1 ಮಿ.ಮೀ. ಸರಾಸರಿ ಮಳೆಯಷ್ಟೇ ಸುರಿದಿದೆ.

Advertisement

ಜನವರಿಯಿಂದ ಮೇ ತನಕ ಹಾಲಿ ಕಡಬ ತಾಲೂಕನ್ನೂ ಸೇರಿಕೊಂಡಿರುವ ಅವಿಭಜಿತ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 2017ನೇ ಸಾಲಿನಲ್ಲಿ ಒಟ್ಟು 415.22 ಮಿ.ಮೀ. ಸರಾಸರಿ, 2018ನೇ ಸಾಲಿನಲ್ಲಿ 432.3 ಮಿ.ಮೀ. ಸರಾಸರಿ ಮಳೆ ಸುರಿದಿದೆ. ಆದರೆ 2019ನೇ ಸಾಲಿನಲ್ಲಿ ಮೇ 25ರ ತನಕ ಕೇವಲ 36.1 ಮಿ.ಮೀ. ಸರಾಸರಿ ಮಾತ್ರ ಮಳೆ ಸುರಿದಿದೆ.

ವಾಡಿಕೆಯ ಮಳೆಯೇ ಇಲ್ಲ
ವಾಡಿಕೆಯ ಮಳೆ ಜನವರಿ ತಿಂಗಳಲ್ಲಿ 2.0 ಮಿ.ಮೀ. ಫೆಬ್ರವರಿ ತಿಂಗಳಲ್ಲಿ 1.0 ಮಿ.ಮೀ., ಮಾರ್ಚ್‌ ತಿಂಗಳಲ್ಲಿ 7.0 ಮಿ.ಮೀ., ಎಪ್ರಿಲ್ ತಿಂಗಳಲ್ಲಿ 46.0 ಮಿ.ಮೀ., ಮೇ ತಿಂಗಳಲ್ಲಿ 46.0 ಮಿ.ಮೀ., ಜೂನ್‌ ತಿಂಗಳಲ್ಲಿ 966.0 ಮಿ.ಮೀ. ಸರಾಸರಿ ಮಳೆ ಸುರಿಯಬೇಕಿತ್ತು. ಆದರೆ ಈ ಬಾರಿ ಜನವರಿ, ಫೆಬ್ರವರಿ, ಮಾರ್ಚ್‌ ತಿಂಗಳುಗಳಲ್ಲಿ ಮಳೆಯೇ ಸುರಿದಿಲ್ಲ. ಎಪ್ರಿಲ್ ತಿಂಗಳಲ್ಲಿ 23.9 ಮಿ.ಮೀ. , ಮೇ ತಿಂಗಳಲ್ಲಿ 12.2 ಮಿ.ಮೀ. ಸರಾಸರಿ ಮಳೆಯಾಗಿದೆ. ಈ ಎರಡು ತಿಂಗಳಲ್ಲಿ ವಾಡಿಕೆಯ ಮಳೆ 46.0 ಮಿ.ಮೀ. ಸರಾಸರಿ ಸುರಿಯಬೇಕಿತ್ತು.

ಒಂದಷ್ಟು ನಿರೀಕ್ಷೆ
ಶುಕ್ರವಾರ ಹಾಗೂ ಶನಿವಾರ ತಾಲೂಕಿನಾದ್ಯಂತ ರಾತ್ರಿ ಹೊತ್ತಿನಲ್ಲಿ ಮಳೆ ಸುರಿದಿದೆ. ಶುಕ್ರವಾರ ಸುರಿದ ಮಳೆಗಿಂತಲೂ ಶನಿವಾರ ರಾತ್ರಿ ಸುರಿದ ಮಳೆ ಬಿರುಸು ಪಡೆದುಕೊಂಡಿರುವುದು ಒಂದಷ್ಟು ತಂಪಿನ ವಾತಾವರಣದ ಜತೆಗೆ ನಿರಂತರತೆಯನ್ನು ಕಾಯ್ದುಕೊಳ್ಳುವ ನಿರೀಕ್ಷೆ ಮೂಡಿಸಿದೆ. ವಾರ ಕಳೆದರೆ ಮುಂಗಾರು ಮಳೆ ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಇದೆ.

ಹಿಂದಿನ 2 ವರ್ಷಗಳಲ್ಲಿ ಮಳೆ ಸುರಿದ ಕ್ರಮ ಸರಿಯಾಗಿತ್ತು. ಅದರಲ್ಲೂ 2018ರ ಮಾರ್ಚ್‌ ತಿಂಗಳಲ್ಲಿ ಯುಗಾದಿಯ ಸಮಯದಿಂದ ಆರಂಭಗೊಂಡು ಸಾಧಾರಣ ಪ್ರಮಾಣದ ಮಳೆ ನಿರಂತರತೆಯನ್ನು ಕಾಯ್ದುಕೊಂಡು ಸಮಸ್ಯೆಗಳನ್ನು ಕಡಿಮೆ ಮಾಡಿತ್ತು. ಈ ಬಾರಿ ವಾಡಿಕೆಯ ಮಳೆಯೇ ಆಗಿಲ್ಲ. ಎರಡು ದಿನಗಳಿಂದ ಮಳೆ ಆರಂಭಗೊಂಡಿರುವುದು ಒಂದಷ್ಟು ಖುಷಿ ನೀಡಿದೆ.
– ಜಯಲಕ್ಷ್ಮೀ ಶಿಕ್ಷಕರು, ಪುತ್ತೂರು

Advertisement

-ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next