Advertisement

ಗ್ರಾಮಾಂತರ ಪ್ರದೇಶದಲ್ಲಿ ಮಳೆ: ವಿವಿಧೆಡೆ ಹಾನಿ

08:53 PM Jun 12, 2019 | Sriram |

ಗುರುಪುರ: ಗುರುಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೂಳೂರು ಗ್ರಾಮದ ಬಳ್ಳಿಯಲ್ಲಿ ಬುಧವಾರ ಮಧ್ಯಾಹ್ನನ ಬೀಸಿದ ಭಾರೀ ಪ್ರಮಾಣದ ಗಾಳಿಯಿಂದ ಚಂದ್ರಶೇಖರ ಪೂಜಾರಿಯವರ ಮನೆ ಮೇಲೆ ಭಾರೀ ಗಾತ್ರದ ಆಲದ(ಗೋಳಿ) ಮರವೊಂದು ಬಿದ್ದು, ಮನೆ ಸಂಪೂರ್ಣ ಜಖಂಗೊಂ ಡಿದ್ದು, ಇದರಿಂದ ಅವರಿಗೆ ಸುಮಾರು ಐದು ಲಕ್ಷದಷ್ಟು ನಷ್ಟ ಸಂಭವಿಸಿದೆ.

Advertisement

ಘಟನೆ ನಡೆದ ಸಂದ ರ್ಭಮನೆಯಲ್ಲಿ ಚಂದ್ರಶೇಖರರ ಸಹೋದರಿ ಪುಷ್ಪಾ ಎಂಬವರು ಮಾತ್ರ ಇದ್ದರು. ಮನೆಗೆ ಮರ ಮುರಿದು ಬೀಳುತ್ತಲೇ ಅವರು ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ಮನೆಯ ಗೋಡೆ ಸಂಪೂರ್ಣ ಜಖಂಗೊಂಡಿದ್ದು ಎರಡು ಕೊಠಡಿಯ ಸೊತ್ತುಗಳು ಪುಡಿಯಾಗಿವೆ. ಸದ್ಯ ಮಳೆ ನೀರು ಮನೆಯೊಳಗೆ ಸುರಿಯುತ್ತಿದೆ. ಮರ ತೆರವುಗೊಳಿಸಿ, ಮನೆಗೆ ಟರ್ಪಾಲು ಹಾಸಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಬಿಜೆಪಿ ಮುಖಂಡ ರಾಜೇಶ್‌ ಸುವರ್ಣ, ಗ್ರಾಮ ಪಂಚಾ ಯತ್‌ ಪಿಡಿಒ ಹಾಗೂ ಇತರ ಸಿಬಂದಿ ಆಗಮಿಸಿ, ಪರಿಶೀಲಿಸಿದರು.

ರಾ.ಹೆದ್ದಾರಿಯಲ್ಲಿ ನಿಂತ ನೀರು
ಕೈಕಂಬದ ರಾ.ಹೆ. 169ರಲ್ಲಿ ಚರಂಡಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ ಹಿನ್ನೆಲೆ ಯಲ್ಲಿ ಬುಧ ವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದ ಮಳೆ ನೀರು ರಸ್ತೆ ಯಲ್ಲೇ ನಿಂತಿದೆ. ಸಮೀಪದ ವಿಕಾಸ್‌ನಗರ ಸಮೀಪದ ರಸ್ತೆಯಲ್ಲಿ ಮಳೆ ನೀರು ಕೊಳಚೆ ತ್ಯಾಜ್ಯದೊಂದಿಗೆ ರಸ್ತೆಯಲ್ಲೇ ಹರಿದಾಡಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ.

ಲೈಟ್‌ ಕಂಬದ ಮೇಲೆ ಬಿದ್ದ ಮರದ ಕೊಂಬೆ
ಕಿನ್ನಿಗೋಳಿ: ಕಿನ್ನಿಗೋಳಿ- ಮೂಲ್ಕಿ ರಾಜ್ಯ ಹೆದ್ದಾರಿಯಲ್ಲಿ ಹೊಸಕಾವೇರಿಯಲ್ಲಿ ಜೂ. 12 ರಂದು ಗಾಳಿಮಳೆಗೆ ಮರದ ದೊಡ್ಡ ಮರದ ಕೊಂಬೆ ಮುರಿದು ಕಿನ್ನಿಗೋಳಿ – ಕಟೀಲು ವಿದ್ಯುತ್‌ ಮೈನ್‌ ಲೈನ್‌ ಬಿದ್ದು ಕೆಲವು ಹೊತ್ತು ವಿದ್ಯುತ್‌ ವ್ಯತ್ಯಯ ಉಂಟಾಯಿತು. ಕಿನ್ನಿಗೋಳಿ ಮೆಸ್ಕಾಂ ಹಿರಿಯ ಅಧಿಕಾರಿಯ ಮುತುವರ್ಜಿಯಲ್ಲಿ ದುರಸ್ತಿ ಮಾಡಿ ವಿದ್ಯುತ್‌ ಸರಬರಾಜು ನೀಡಲಾಯಿತು.

Advertisement

ಕಾಮಗಾರಿ ವಿಳಂಬ; ಚರಂಡಿ ನೀರು ರಸ್ತೆಗೆ
ಮೂಲ್ಕಿ: ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ತಡವಾಗಿ ಆರಂಭವಾಗಿರುವ ಮುಂಗಾರು ಮಳೆಯಿಂದ ನಗರದ ಚರಂಡಿ ನೀರು ರಸ್ತೆಯಲ್ಲಿ ಹರಿದಾಡಿ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಯಿತು.

ನ.ಪಂ. ವ್ಯಾಪ್ತಿಯಲ್ಲಿ ಸುಮಾರು 80 ಕಿ.ಮೀ.ಶಾಶ್ವತ ಕುಡಿಯುವ ನೀರಿನ ಯೋಜನೆ ಕೊಳವೆ ಅಳವಡಿಸುವ ಕಾಮಗಾರಿಯೂ ಆಮೆಗತಿಯಾಗಿದ್ದ ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next