Advertisement

ಮಳೆ ನಕ್ಷತ್ರದಲ್ಲೂ ಮಳೆಯ ಪ್ರಮಾಣ ಇಳಿಕೆ!

03:40 AM Jul 16, 2017 | |

ಪುತ್ತೂರು: ಬೇಸಗೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಪುತ್ತೂರು ತಾಲೂಕು ವ್ಯಾಪ್ತಿಯ ಜನರಿಗೆ ಈ ವರ್ಷವೂ ಇದುವರೆಗೆ ನಿರೀಕ್ಷೆಯ ಬಿರುಸಿನ ಮಳೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಮಳೆಯ ನಕ್ಷತ್ರ ಪುನರ್ವಸು ಜು. 18ಕ್ಕೆ ಕೊನೆಗೊಳ್ಳಲಿದ್ದು, ಜು. 19ರಿಂದ ಮತ್ತೂಂದು ಮಳೆಯ ನಕ್ಷತ್ರ ಪುಷ್ಯ ಆರಂಭವಾಗಲಿದೆ. ನಾಗರಪಂಚಮಿ ಅವಧಿಯಲ್ಲಿ ಸಹಜವಾಗಿ ಮಳೆ ಬಿರುಸುಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಮಳೆ ಇನ್ನಷ್ಟು ಚೇತರಿಕೆ ಕಾಣುವ ಭರವಸೆಯನ್ನು ಹವಾಮಾನ ಇಲಾಖೆಯೂ ನೀಡಿದೆ.

Advertisement

ಈ ಸಾಲಿನಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದರೂ ಬಿರುಸಿನ ಮಳೆ ಇನ್ನೂ ಆರಂಭವಾಗಿಲ್ಲ. ನದಿ ಮೂಲಗಳು ಇನ್ನೂ ತುಂಬಿ ಹರಿಯುತ್ತಿಲ್ಲ. ಈ ಬಾರಿ ಜ. 1ರಿಂದ ಈವರೆಗೆ ಸುಮಾರು 1,283 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,430 ಮಿ.ಮೀ. ಮಳೆಯಾಗಿತ್ತು. ಇದನ್ನು ಸಮೀಕರಿಸಿದಾಗ ಈ ಬಾರಿ 147 ಮಿ.ಮೀ. ಕಡಿಮೆ ಮಳೆ ಸುರಿದಿದೆ.

2015ರಲ್ಲಿ ಜನವರಿ 1ರಿಂದ ಜುಲೈ ಎರಡನೇ ವಾರದ ತನಕ 1,245 ಮಿ.ಮೀ., 2014ರಲ್ಲಿ 1,259 ಮಿ.ಮೀ., 2013ರಲ್ಲಿ 1934 ಮಿ.ಮೀ., 2012ರಲ್ಲಿ 1,162 ಮಿ.ಮೀ. ಮಳೆ ಸುರಿದಿದೆ. ಈ ವರ್ಷ ಜುಲೈ 1ರಿಂದ 13ರ ತನಕ 275 ಮಿ.ಮೀ. ಮಳೆಯಾದರೆ ಕಳೆದ ವರ್ಷ 217 ಮಿ.ಮೀ. ಮಳೆಯಾಗಿತ್ತು. ಶುಕ್ರವಾರ ಹಾಗೂ ಶನಿವಾರವೂ ತಾಲೂಕಿನಾದ್ಯಂತ ಮಳೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 30 ಮಿ.ಮೀ. ಮಳೆಯಾಗಿದೆ. ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಮಳೆ ಪ್ರಮಾಣ
ಕ‌ಳೆದ 24 ಗಂಟೆಗಳಲ್ಲಿ ತಾಲೂಕಿನಲ್ಲಿ  43.9 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನದಂದು 45.8 ಮಿ.ಮೀ. ಮಳೆಯಾಗಿತ್ತು.

ಜುಲೈ ಆರಂಭದಿಂದ ಇದುವರೆಗೆ 401.2 ಮಿ.ಮೀ. ಮಳೆಯಾಗಿದ್ದರೆ ಕಳೆದ ಬಾರಿ ಇದೇ ದಿನಾಂಕಕ್ಕೆ 511.8 ಮಿ.ಮೀ. ಮಳೆ ಬಂದಿದೆ. 

Advertisement

ಜನವರಿಯಿಂದ ಇದುವರೆಗೆ  ತಾಲೂಕಿನಲ್ಲಿ ಒಟ್ಟು 1,362.8 ಮಿ.ಮೀ. ಮಳೆಯಾಗಿದೆ. ಕಳೆದ ಬಾರಿ ಇದೇ ದಿನನದ ವರೆಗೆ 1,512.6 ಮಿ.ಮೀ. ಮಳೆ ದಾಖಲಾಗಿತ್ತು.

ಮಳೆ ಕಡಿಮೆ, ಮೋಡ ವಾತಾವರಣ
ಸುಳ್ಯ ತಾಲೂಕಿನಲ್ಲಿ ಶನಿವಾರ ಬೆಳಗ್ಗಿನ ಅವಧಿಯಲ್ಲಿ ಮೋಡಕವಿದ ವಾತಾವರಣದೊಂದಿಗೆ ಹನಿ ಮಳೆಯಾಯಿತು. ಮಧ್ಯಾಹ್ನ ವೇಳೆ ಮಳೆ ದೂರವಾಗಿದ್ದರೂ ಸಂಜೆಯ ವರೆಗೂ ಮೋಡ ಕವಿದ ವಾತಾವರಣ ಮುಂದುವರಿದಿಯಿತು. ಶುಕ್ರವಾರ ರಾತ್ರಿ ಮಳೆಯ ಪ್ರಮಾಣ ಎಂದಿಗಿಂತ ಅಧಿಕವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next