Advertisement
ಕರಾವಳಿಯಲ್ಲಿ ಜೂನ್ ತಿಂಗಳಿನಿಂದ ಸೆಪ್ಟಂಬರ್ ಅಂತ್ಯದ ವರೆಗೆ ಮುಂಗಾರು ಋತುವಿನಲ್ಲಿ 3,101 ಮಿ.ಮೀ. ಮಳೆಯಾಗಬೇಕು. ಆದರೆ ಆಗಸ್ಟ್ 9 ಆಗುವಷ್ಟರಲ್ಲೇ 2,939 ಮಿ.ಮೀ. ಮಳೆ ಸುರಿದಿದೆ. ಮುಂಗಾರು ಪೂರ್ಣಗೊಳ್ಳಲು ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ. ಸದ್ಯ ದ.ಕ. ಜಿಲ್ಲೆಯಲ್ಲಿ ಶೇ.17, ಉಡುಪಿಯಲ್ಲಿ ಶೇ.20 ಮತ್ತು ಉತ್ತರ ಕನ್ನಡದಲ್ಲಿ ವಾಡಿಕೆಗಿಂತ ಶೇ.42ರಷ್ಟು ಹೆಚ್ಚು ಮಳೆ ಸುರಿದಿದೆ. ಒಟ್ಟಾರೆ ಕರಾವಳಿ ಭಾಗದಲ್ಲಿ ಈ ವರೆಗೆ 2,268 ಮಿ.ಮೀ. ವಾಡಿಕೆ ಮಳೆಯಲ್ಲಿ 2939 ಮಿ.ಮೀ. ಮಳೆಯಾಗಿ ಶೇ.30ರಷ್ಟು ಅಧಿಕ ಸುರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ವಾಡಿಕೆಗಿಂತ ಶೇ.16ರಷ್ಟು ಹೆಚ್ಚಳ, ಬಂಟ್ವಾಳ-ಶೇ.10, ಮಂಗಳೂರು-ಶೇ.14, ಪುತ್ತೂರು-ಶೇ.2, ಸುಳ್ಯ-ಶೇ.25, ಮೂಡುಬಿದಿರೆ-ಶೇ.26, ಕಡಬ-ಶೇ.14, ಮೂಲ್ಕಿ-ಶೇ.14, ಉಳ್ಳಾಲ-ಶೇ.4, ಉಡುಪಿ ಜಿಲ್ಲೆಯ ಕಾರ್ಕಳ-ಶೇ.14, ಕುಂದಾಪುರ-ಶೇ.57, ಉಡುಪಿ-ಶೇ.19, ಬೈಂದೂರು-ಶೇ.26, ಬ್ರಹ್ಮಾವರ-ಶೇ.29 ಮತ್ತು ಹೆಬ್ರಿಯಲ್ಲಿ ಶೇ.17ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿದೆ.
Related Articles
ಕಳೆದ ವರ್ಷ ಕರಾವಳಿ ಭಾಗದಲ್ಲಿ ಮಳೆ ಕಡಿಮೆ ಇತ್ತು. ಒಟ್ಟಾರೆ ಋತುವಿನಲ್ಲಿ ಕರಾವಳಿಯಲ್ಲಿ ಶೇ.19ರಷ್ಟು ಮಳೆ ಕೊರತೆ ಉಂಟಾಗಿತ್ತು. 2023ರಲ್ಲಿ ಆ.9ರ ವರೆಗೆ ಶೇ.15ರಷ್ಟು ಮಳೆ ಕಡಿಮೆ ಸುರಿದಿತ್ತು. ಆದರೆ ಈ ಬಾರಿ ಶೇ.30ರಷ್ಟು ಹೆಚ್ಚಾಗಿದೆ.
Advertisement