Advertisement
ಅದರಂತೆ ಕಾಟಿಪಳ್ಳ ಸರಕಾರಿ ಪಪೂ ಕಾಲೇಜು ಪ್ರೌಢಶಾಲೆಯಲ್ಲಿ ‘ಉದಯವಾಣಿ’ ಸಹಯೋಗದಲ್ಲಿ ‘ಮನೆಮನೆಗೆ ಮಳೆಕೊಯ್ಲು’ ಕಾರ್ಯಾಗಾರವು ಶುಕ್ರವಾರ ಜರಗಿತ್ತು.
Related Articles
Advertisement
ಶಿಕ್ಷಕರಾದ ನಿತಿನ್ ಕುಮಾರ್, ಮಂಜುನಾಥ್ ನಾಯ್ಕ, ಪ್ರಿಯಾ ಎ., ಶ್ವೇತಾ ಹಳದೀಪುರ, ರಫೀಕ್ ಉಪಸ್ಥಿತರಿದ್ದರು. ಇಕೋ ಕ್ಲಬ್ ಸಂಯೋಜಕಿ ಪ್ರವೀಣಾ ನಿರೂಪಿಸಿದರು.
ಮನೆಯಲ್ಲಿ ಅಳವಡಿಸಿದರು; ಪಕ್ಕದ ಮನೆಗೂ ಪ್ರೇರಣೆಯಾದರುಮೂಲ್ಕಿ ಕಾರ್ನಾಡ್‌ನ ಕ್ರಿಸ್ಟಿ ಸೋನ್ಸ್ ಅವರು ತಮ್ಮ ಮನೆಯಲ್ಲಿ ವಾರದ ಹಿಂದೆ ಮಳೆಕೊಯ್ಲು ವಿಧಾನವನ್ನು ಅಳವಡಿಸಿದ್ದಾರೆ. ‘ನಮ್ಮ ಮನೆಯಲ್ಲಿ ನೀರಿನ ಸಮಸ್ಯೆ ಈವರೆಗೆ ಕಾಣಿಸಿಲ್ಲ. ಆದರೆ ‘ಉದಯವಾಣಿ’ಯಲ್ಲಿ ಮಳೆಕೊಯ್ಲು ಅಭಿಯಾನ ನೋಡಿದ ಬಳಿಕ ಮಳೆಕೊಯ್ಲು ಅಳವಡಿಸುವ ಯೋಚನೆಯಾಯಿತು. ಹಾಗಾಗಿ ಯೂಟ್ಯೂಬ್ ನೋಡಿಕೊಂಡು ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಕ್ರಿಸ್ಟಿ ಸೋನ್ಸ್ ಪತ್ನಿ ಮೇವಿಸ್ ಸೋನ್ಸ್. ಇಳೆಗೆ ಮಳೆ ಅಪರೂಪವಾಗುತ್ತಿರುವ ಸಂದರ್ಭ ಯಾವುದೇ ರೀತಿಯಲ್ಲೂ ಮಳೆಯ ನೀರು ವ್ಯರ್ಥವಾಗಬಾರದು ಎನ್ನುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಮುಂದೆ ನೀರಿನ ಸಮಸ್ಯೆ ಎದುರಾಗದು ಎಂಬ ವಿಶ್ವಾಸವಿದೆ. ನಮ್ಮ ಮನೆಗೆ ಅಳವಡಿಸಿದ ಬಳಿಕ ಪಕ್ಕದ ಮನೆಯವರೂ ಅಳವಡಿಸಿದ್ದಾರೆ. ಅದೇ ರೀತಿ ಎಲ್ಲರೂ ಈ ವಿಧಾನ ಅಳವಡಿಸಲಿ ಎನ್ನುತ್ತಾರೆ ಅವರು. ಮಳೆಯ ನೀರು ಮನೆಯ ಟೆರೇಸ್‌ನಲ್ಲಿರುವ ಪ್ಲಾಸ್ಟಿಕ್ ಡ್ರಮ್‌ಗೆ ಬೀಳುವಂತೆ ಮಾಡಲಾಗಿದ್ದು, ಇದರಲ್ಲಿ ಮರಳು, ಜಲ್ಲಿ, ಇದ್ದಿಲು ಹಾಕಲಾಗಿದೆ. ಇದಕ್ಕೆ ಫಿಲ್ಟರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಲ್ಲಿಂದ ನೇರವಾಗಿ ಪೈಪ್ ಮೂಲಕ ಮನೆಯ ಬಾವಿಗೆ ನೀರನ್ನು ಹರಿಸಲಾಗುತ್ತದೆ. ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ.ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000
ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ
ಪ್ರಶಂಸನೀಯ ಅಭಿಯಾನ
ಕಳೆದ ಮಳೆಗಾಲದಲ್ಲಿ ಸಾಕಷ್ಟು ಮಳೆ ಬಂದಿದ್ದರೂ ನಾವು ಈ ಬಾರಿಯ ಬೇಸಗೆಯಲ್ಲಿ ನಿರಂತರ ನೀರಿಗೆ ಹಾಹಾಕಾರ ಪಟ್ಟಿದ್ದೇವೆ. ಈ ಬಾರಿ ಮಳೆ ತುಂಬಾ ಕಡಿಮೆ ಬಂದಿದ್ದು, ಜಲಕ್ಷಾಮಕ್ಕೆ ಮುನ್ಸೂಚನೆಯಂತಿದೆ. ಜನರಲ್ಲಿ ಜಲಜಾಗೃತಿ ಮೂಡಿಸಲು ‘ಉದಯವಾಣಿ’ಯ ಮಳೆಕೊಯ್ಲು ಅಭಿಯಾನ ತುಂಬಾ ಉಪಯುಕ್ತ. ಪ್ರಶಂಸನೀಯ ಅಭಿಯಾನವನ್ನು ನಿರಂತರವಾಗಿ ನಡೆಸಬೇಕು.
-ಜಯಕಲಾ ಜೆ. ಶೆಟ್ಟಿ, ಬಿಜೈ
ಮೇಲ್ಪಂಕ್ತಿ ಹಾಕಿಕೊಟ್ಟ ‘ಉದಯವಾಣಿ’
ಮಳೆಕೊಯ್ಲು ಬಗ್ಗೆ ಕೇಳಿ ಬರುತ್ತಿರುವುದು ನಿನ್ನೆ ಮೊನ್ನೆಯಿಂದಲ್ಲ. ಆದರೆ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅಭಿಯಾನವಾಗಿ ಜನರ ಪಾಲ್ಗೊಳ್ಳುವಿಕೆಗೆ ಪ್ರೇರೇಪಿಸಿದ್ದು ಉದಯವಾಣಿ. ಕಟ್ಟಡದ ಟೆರೇಸ್‌ನಿಂದ ಬೀಳುವ ನೀರು, ಭೂಮಿಯ ಮೇಲ್ಮೈಯಲ್ಲಿ ಹರಿಯುವ ಮಳೆ ನೀರನ್ನು ಕೆರೆ, ಬಾವಿ, ತಗ್ಗಾದ ಪ್ರದೇಶದಲ್ಲಿ ಶೇಖರಣೆ ಮಾಡುವ ಮೂಲಕ ಜನರು ಕಾರ್ಯಪ್ರವೃತ್ತರಾಗಿರುವುದು ಈ ಅಭಿಯಾನದ ಯಶಸ್ಸೇ ಸರಿ.
-ಸಾಂತಪ್ಪ ಯು., ಬಾಬುಗುಡ್ಡ, ಅತ್ತಾವರ
-ಸಾಂತಪ್ಪ ಯು., ಬಾಬುಗುಡ್ಡ, ಅತ್ತಾವರ