ಮುಂಬೈ: ಐಪಿಎಲ್ ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಐಪಿಎಲ್ ಆರಂಭಕ್ಕೆ ಎರಡು ದಿನ ಇರುವಂತೆ ಧೋನಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಸಿಎಸ್ ಕೆ ತಂಡಕ್ಕೆ ನೂತನ ನಾಯಕನನ್ನಾಗಿ ರವೀಂದ್ರ ಜಡೇಜಾ ಅವರನ್ನು ನೇಮಿಸಲಾಗಿದೆ.
ಜಡೇಜಾ ಹೊಸ ಜವಾಬ್ದಾರಿಗೆ ಮತ್ತು ಧೋನಿ ನಾಯಕತ್ವದ ನಿರ್ಗಮನಕ್ಕೆ ಹಲವರು ಟ್ವೀಟ್ ಮಾಡಿದ್ದಾರೆ. ಆರ್ ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಅವರು ಟ್ವೀಟ್ ಮಾಡಿ,” ಹಳದಿ ಜೆರ್ಸಿಯಲ್ಲಿ ದಿಗ್ಗಜ ನಾಯಕತ್ವ.ಈ ಅಧ್ಯಾಯವನ್ನು ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ” ಎಂದು ಧೋನಿ ನಾಯಕತ್ವವನ್ನು ಕೊಂಡಾಡಿದ್ದಾರೆ.
ಇದನ್ನೂ ಓದಿ:ಹೋಮ್ ಮಿನಿಸ್ಟರ್ ಟ್ರೇಲರ್ ಹಿಟ್ ಲಿಸ್ಟ್ ಗೆ; ಏ.01ರಂದು ಉಪ್ಪಿ ಚಿತ್ರ ಬಿಡುಗಡೆ
ಆದರೆ ಮಾಜಿ ಸಿಎಸ್ ಕೆ ಆಟಗಾರ ಸುರೇಶ್ ರೈನಾ ಟ್ವೀಟ್ ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ರವೀಂದ್ರ ಜಡೇಜಾಗೆ ಸಿಎಸ್ ಕೆ ನಾಯಕತ್ವ ವಹಿಸಿದ ವಿಚಾರಕ್ಕೆ ಟ್ವೀಟ್ ಮಾಡಿರುವ ರೈನಾ, “ನನ್ನ ಸಹೋದರನಿಗೆ ಖುಷಿಯಾಗುತ್ತಿದೆ. ನಾವಿಬ್ಬರೂ ಬೆಳೆದ ಫ್ರಾಂಚೈಸಿಯ ನಾಯಕತ್ವವನ್ನು ವಹಿಸಿಕೊಳ್ಳಲು ನಾನು ಬೇರೆ ಯಾರೂ ಉತ್ತಮ ಎಂದು ಯೋಚಿಸುವುದಿಲ್ಲ. ಆಲ್ ದಿ ಬೆಸ್ಟ್ ರವೀಂದ್ರ ಜಡೇಜಾ” ಎಂದು ರೈನಾ ಟ್ವೀಟ್ ಮಾಡಿದ್ದಾರೆ.
Related Articles
ಜಡೇಜಾಗಾಗಿ ಟ್ವೀಟ್ ಮಾಡಿದ ರೈನಾ, ಗೆಳೆಯ ಧೋನಿಯನ್ನೇ ಮರೆತಿದ್ದಾರೆ ಎಂದು ಅಭಿಮಾನಿಗಳು ಟೀಕೆ ಮಾಡಿದ್ದಾರೆ.
ರೈನಾ ಮತ್ತು ಧೋನಿ ಇಬ್ಬರು ಆತ್ಮೀಯರಾಗಿದ್ದರು. ಧೋನಿ ನಿವೃತ್ತಿಯಾದ ದಿನವೇ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಈ ವರ್ಷದ ಐಪಿಎಲ್ ಮೆಗಾ ಹರಾಜಿನಲ್ಲಿ ಸುರೇಶ್ ರೈನಾ ಅವರನ್ನು ಸಿಎಸ್ ಕೆ ಖರೀದಿ ಮಾಡಿಲ್ಲ. ರೈನಾ ಅನ್ ಸೋಲ್ಡ್ ಆಗಿದ್ದರು.