ಗುಳೇದಗುಡ್ಡ: ಮಂಗಳವಾರ ಸಂಜೆ ಬೀಸಿದ ಗಾಳಿ- ಗುಡುಗು ಸಿಡಿಲು ಸಮೇತ ಸುರಿದ ಮಳೆಗೆ ಕೊಂಕಣಕೊಪ್ಪ ಗ್ರಾಮದಲ್ಲಿ ಸುಮಾರು 15 ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ.
ಗ್ರಾಮದಲ್ಲಿ ಬೀಸಿದ ಗಾಳಿಯ ರಭಸಕ್ಕೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿನ, ಓಣಿಗಳಲ್ಲಿನ ಸುಮಾರು 15 ವಿದ್ಯುತ್ ಕಂಬಗಳು, ಗ್ರಾಮದಲ್ಲಿ 20ಕ್ಕೂ ಹೆಚ್ಚು ಮರಗಿಡಗಳು ಬಿದ್ದಿವೆ. ಗ್ರಾಮದ ಶಾಲೆಯ ಶೌಚಾಲಯದ ತಗಡುಗಳು, ಕಲ್ಮೇಶ್ವರ ದೇವಸ್ಥಾನದ ಕಳಸವು ಗೋಪುರದ ಸಮೇತ ಕೆಳಗೆ ಬಿದ್ದಿದೆ.
ಗ್ರಾಮದಲ್ಲಿ ಅನೇಕ ಮನೆಗಳ ತಗಡುಗಳು ಹಾರಿ ಹೋಗಿವೆ. ಗ್ರಾಮದಲ್ಲಿ ಬೀಸಿದ ಗಾಳಿ, ಮಳೆಯಿಂದ ಯಾವುದೇ ಜೀವ ಹಾನಿಯಾಗಿಲ್ಲ. ಗ್ರಾಮದಲ್ಲಿ ಬೀಸಿದ ಗಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.
ಗಾಳಿ-ಮಳೆಯಿಂದ ಹಾನಿಯಾದ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಎಂ.ಎಸ್.ತೊಟಗೇರಿ ಭೇಟಿ ನೀಡಿ, ಹಾನಿಯಾದ ಮಾಹಿತಿ ಪಡೆದುಕೊಂಡರು. ಹೆಸ್ಕಾಂ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿಡಿಲು ಬಡಿದು ತೆಂಗಿನ ಮರಕ್ಕೆ ಹಾನಿ
ಗುಳೇದಗುಡ್ಡ: ಕೊಂಕಣಕೊಪ್ಪ ಗ್ರಾಮದಲ್ಲಿ ಬೀಸಿದ ಗಾಳಿಗೆ ಬಿದ್ದಿರುವ ಮನೆಯ ತಗಡುಗಳು.