Advertisement

ಮಳೆ ನೀರು ಕೊಯ್ಲು ಕಡ್ಡಾಯ

10:58 PM May 18, 2019 | Lakshmi GovindaRaj |

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವತಿಯಿಂದ ಇನ್ಮುಂದೆ ನಿರ್ಮಿಸುವ ಎಲ್ಲ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಅಥವಾ ಜಲ ಮರುಪೂರಣ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವುದೇ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಸಿದ್ಧಪಡಿಸುವ ಅಂದಾಜು ಪಟ್ಟಿಯಲ್ಲಿಯೇ ಮಳೆ ನೀರು ಸಂಗ್ರಹಣೆ ಅಥವಾ ಜಲ ಮರುಪೂರಣ ವ್ಯವಸ್ಥೆ ಹಾಗೂ ಗಿಡ ನೆಡುವುದನ್ನು ಸೇರಿಸಿಯೇ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ಜತೆಗೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜು, ಹಾಸ್ಟೆಲ್‌ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಯನ್ನೂ ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದರು. ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಶೇ.1ರಷ್ಟು ಮೊತ್ತವನ್ನು ಗಿಡ ನೆಡಲು ಬಳಸಲು ತೀರ್ಮಾನ ಮಾಡಲಾಗಿದೆ.

ರಸ್ತೆ ನಿರ್ಮಾಣ/ಪುನರ್‌ ನಿರ್ಮಾಣ/ನವೀಕರಣದ ಕಾಮಗಾರಿಗಳಲ್ಲಿಯೂ ರಸ್ತೆಯ ಬದಿಗಳಲ್ಲಿ ಗಿಡ ನೆಡುವುದು ಕಡ್ಡಾಯ ಮಾಡಿ, ಅದನ್ನು ಅಂದಾಜು ಪಟ್ಟಿಯಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು. ಜೂನ್‌ 11ರಂದು ಜಲಾಮೃತ ಅಭಿಯಾನದಡಿ ಅಧಿಕೃತ ಆದೇಶ ಸಹ ಹೊರಡಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next