Advertisement

ಮಳೆ ನೀರಿನ ಕೊಯ್ಲು ಅನಿವಾರ್ಯ: ಡಿಸಿ ಜಗದೀಶ್‌

11:18 PM Nov 13, 2019 | Sriram |

ಬ್ರಹ್ಮಾವರ: ಯುವಕರು ಕಡಿಮೆ ಅಂದರೂ ವರ್ಷಕ್ಕೆ 5 ಗಿಡಗಳನ್ನಾದರೂ ನೆಟ್ಟು ಅವುಗಳ ಪೋಷಣೆ ಮಾಡುವುದು ಇಂದು ಅನಿವಾರ್ಯವಾಗಿದೆ. ಹೀಗೆ ಮಾಡುವುದರಿಂದ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮಿಂದಲೇ ನಾಶವಾಗುತ್ತಿರುವ ಕಾಡನ್ನು ಪುನರ್‌ ರಚಿಸಲು ಮಹತ್ವದ ಹೆಜ್ಜೆಯನ್ನು ಇಟ್ಟಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

Advertisement

ಅವರು ಜಿಲ್ಲಾ ಆಡಳಿತ ಮತ್ತು ಜಿ.ಪಂ., ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜು, ಮಿಲಾಗ್ರಿಸ್‌ ಪ.ಪೂ. ಕಾಲೇಜು, ಬೈಂದೂರು ಗಂಗನಾಡು ಯುವಕ ವೃಂದದ ಸಹಯೋಗದಲ್ಲಿ ಉಡುಪಿ ನೆಹರೂ ಯುವ ಕೇಂದ್ರದವರು ಮಿಲಾಗ್ರಿಸ್‌ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ಮಳೆ ನೀರಿನ ಕೊಯ್ಲು ಮತ್ತು ನೀರಿನ ಸಂರಕ್ಷಣೆ ಹಾಗೂ ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು, ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಎಂಬ ವಿಷಯಗಳ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮನೆಯಲ್ಲಿ ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಮಾಡಿ ಅದರಿಂದ ಉತ್ಪತ್ತಿಯಾದ ಸಾವಯವ ಗೊಬ್ಬರವನ್ನು ತಮ್ಮ ಮನೆಯ ಕೈ ತೋಟಕ್ಕೆ, ಗಿಡ ಮರಗಳಿಗೆ ಉಪಯೋಗಿಸಬಹುದು ಎಂದರು.

ತಮ್ಮ ಮನೆಯ ಹಸಿ ಕಸವನ್ನು ತಮ್ಮ ಮನೆಯಲ್ಲಿಯೇ ಸಮರ್ಪಕವಾಗಿ ವಿಲೇವಾರಿ ಮಾಡುವ ವಿಧಾನವನ್ನು ಅಳವಡಿಸಿಕೊಂಡಿದ್ದು, ಸಾರ್ವಜನಿಕರು ವೀಕ್ಷಿಸಬಹುದು ಎಂದು ಜಿಲ್ಲಾಧಿ ಕಾರಿ ತಿಳಿಸಿದರು.

ಉಡುಪಿಯನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಿಕೊಂಡು ಬರುವಲ್ಲಿ ನೀಲ ನಕ್ಷೆಯ ತಯಾರಿ ಈಗಾಗಲೆ ನಡೆದಿದ್ದು, ಪರಿಣಿತರೊಂದಿಗೆ ಚರ್ಚಿಸಿ ಮಹತ್ವದ ನಿರ್ಧಾರವನ್ನೂ ಪ್ರಕಟಿಸಲಾಗುವುದು ಎಂದರು.

Advertisement

ಒತ್ತುವರಿ ಸಲ್ಲದು
ಕೆರೆ ಒತ್ತುವರಿಗೆ ಸಂಬಂ ಧಿಸಿದ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾ ಧಿಕಾರಿ ಅವರ ಗಮನಕ್ಕೆ ತರುವ ಜವಾಬ್ದಾರಿಯನ್ನು ಸ್ಥಳೀಯ ನಾಗರಿಕರು ವಹಿಸಬೇಕೆಂದು ಕೋರಿದರು. ಈ ವರ್ಷದ ಅತ್ಯುತ್ತಮ ಯುವಕ ಮಂಡಳ ಪ್ರಶಸ್ತಿಗೆ ಆಯ್ಕೆಯಾದ ಕಾಪು ತಾಲೂಕು ಹೆಜಮಾಡಿ ಯುವಕ/ಯುವತಿ ವೃಂದಕ್ಕೆ ಜಿಲ್ಲಾಧಿ ಕಾರಿ ಪ್ರಶಸ್ತಿ ಪ್ರದಾನ ಮಾಡಿದರು.

ಮಿಲಾಗ್ರಿಸ್‌ ಸಮೂಹ ಸಂಸ್ಥೆಗಳ ಸಂಚಾಲಕ ಡಾ| ಲಾರೆನ್ಸ್‌ ಸಿ. ಡಿ’ಸೋಜಾ, ಅವರು ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ ರಾಜ್‌ ಅವರು ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಮತ್ತು ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿಯ ಬಗ್ಗೆ ತಿಳಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೋಸೆಫ್‌ ಜಿ.ಎಂ. ರೆಬೆಲ್ಲೊ ಮಳೆ ನೀರಿನ ಕೊಯ್ಲು ಮತ್ತು ನೀರಿನ ಸಂರಕ್ಷಣೆ ವಿಚಾರದಲ್ಲಿ ದೃಶ್ಯ ಶ್ರಾವ್ಯಗಳ ಮೂಲಕ ಯುವಜನರಿಗೆ ಕಾರ್ಯಾಗಾರದ ಮಾಹಿತಿಯನ್ನು ನೀಡಿದರು. ಮಿಲಾಗ್ರಿಸ್‌ ಕಾಲೇಜಿನ ಪದವಿ ಮತ್ತು ಪ.ಪೂ. ಪ್ರಾಂಶುಪಾಲರಾದ ಡಾ| ವಿನ್ಸೆಂಟ್‌ ಆಳ್ವ ಹಾಗೂ ಸವಿತಾ ಕುಮಾರಿ ಉಪಸ್ಥಿತರಿದ್ದರು.

ಸಮನ್ವಯ ಅಧಿಕಾರಿ ವಿಲೆøಡ್‌ ಡಿ’ಸೋಜಾ ಪ್ರಸ್ತಾವನೆಗೈದು, ರವಿನಂದನ್‌ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

ಸಂವಾದ
ಜಲ ಸಂರಕ್ಷಣೆಯನ್ನು ಸಾರಿ ಹೇಳುವ ಮಳೆ ನೀರಿನೊಂದಿಗೆ ಅನುಸಂಧಾನ ಎಂಬ ಚಿನ್ನೆ/ಲಾಂಛನವನ್ನು ಅನಾವರಣಗೊಳಿಸಿ ಮಾತಾನಾಡಿದ ಜಿಲ್ಲಾಧಿಕಾರಿ, ಮಳೆ ನೀರಿನ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತಾ, ಕಳೆದ ವರ್ಷ ಉಡುಪಿ ಜಿಲ್ಲೆ ಅನುಭವಿಸಿದ ನೀರಿನ ಬರಗಾಲ, ಜನತೆ ಅನುಭವಿಸಿದ ಭವಣೆ, ಇದಕ್ಕೆಲ್ಲಾ ಏನು ಕಾರಣ ಎಂಬ ವಿಷಯದ ಬಗ್ಗೆ ಯುವಜನರೊಂದಿಗೆ ಸಂವಾದ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next