Advertisement

Rain Water Harvesting: ಜೀವ ಜಲದ ಉಳಿವಿಗೊಂದು ಸಣ್ಣ ಪ್ರಯತ್ನ

05:24 PM Jun 26, 2024 | Team Udayavani |

ಇದೀಗ ಮಳೆಗಾಲ ಪ್ರಾರಂಭವಾಗಿದೆ. ಜೊತೆಗೆ ವರುಣ ದೇವನ ಕೃಪೆಯಿಂದ ರೈತನ ಮೊಗದಲ್ಲಿ ಸಂತಸ ಮನೆಮಾಡಿದೆ. ಬೇಸಿಗೆಯ ಬವಣೆಯನ್ನು ನೀಗಿಸಿಕೊಳ್ಳಲು ಮಳೆರಾಯ ನಮಗೊಂದು ಅವಕಾಶವನ್ನು ನೀಡಿದ್ದಾನೆ.

Advertisement

ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳುವುದು ನಮ್ಮೆಲರ ಜವಾಬ್ದಾರಿಯಾಗಿದೆ. ಹೇಗೆ ಈ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನೇರವೆರಿಸುವುದು ಎನ್ನುವ ವಿಚಾರಕ್ಕೆ ಬಂದಾಗ ತಟ್ಟನೇ ನೆನಪಾಗುವುದು ಮಳೆ ನೀರಿನ ಕೊಯ್ಲು. ಹೌದು ಈ ಮಳೆ ನೀರಿನ ಕೊಯ್ಲು ಮರು ವರ್ಷದ ಬೆಸಿಗೆಯಲ್ಲಿ ಉಂಟಾಗುವ ನೀರಿನ ಆಹಾಕಾರವನ್ನು ನೀಗಿಸುವಲ್ಲಿ ಕೊಂಚ ಮಟ್ಟಿಗೆ ಸಹಕಾರಿಯಾಗಲಿದೆ.

ಏನಿದು ಮಳೆ ನೀರಿನ ಕೊಯ್ಲು?

ಮಳೆಗಾಲದಲ್ಲಿ ಅಥವಾ ಮಳೆ ಬೀಳುವ ಸಮಯದಲ್ಲಿ ಭೂಮಿಗೆ ಬಿದ್ದ ನೀರನ್ನು ಶುದ್ಧಿಕರಿಸಿ ಸಂಗ್ರಹಣೆ ಮಾಡುವುದನ್ನು ಒಳಗೊಂಡಿದೆ. ಜೊತೆಗೆ ಭೂಮಿಯ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಮಳೆ ರೂಪದಲ್ಲಿ ಭೂಮಿಗೆ ಬಿದ್ದ ನೀರನ್ನು ಭೂಮಿಯ ಒಡಲಾಳಕ್ಕೆ ಇಳಿಸುವ ವಿಧಾನವಾಗಿದೆ.

ಮಳೆ ನೀರನ್ನು ಸಂಗ್ರಹಿಸುವ ವಿಚಾರಕ್ಕೆ ಬಂದಾಗ ಕೃಷಿ ಹೊಂಡಗಳ ನಿರ್ಮಾಣ, ಮೇಲ್ಚಾವಣಿಯ ಮೇಲೆ ಬಿದ್ದ ಮಳೆ ನೀರಿನ ಸಂಗ್ರಹಣೆಗಳಂತಹ ಅಂಶಗಳು ಗಮನಾರ್ಹವಾಗಿವೆ.

Advertisement

ಮೇಲ್ಚಾವಣಿಯ ಮೇಲೆ ಬಿದ್ದ ಮಳೆ ನೀರಿನ ಸಂಗ್ರಹಣೆ

ಮನೆಯ ಮೇಲ್ಚಾವಣಿಯ ಮೇಲೆ ಮಳೆ ಬಂದಾಗ ಬಿದ್ದ ನೀರನ್ನು ಸಂಗ್ರಹಿಸಿ ದಿನ ನಿತ್ಯದ ಬಳಕೆಗೆ ಉಪಯೋಗಿಸುವುದು ಜೊತೆಗೆ ಹೆಚ್ಚುವರಿ ನೀರನ್ನು ಮಣ್ಣಿನೊಳಗೆ ಇಂಗುವಂತೆ ಮಾಡುವುದರ ಮೂಲಕ ಅಂತರ್ಜಲವನ್ನು ಹೆಚ್ಚಿಸುವುದು ಮಳೆ ನೀರಿನ ಕೊಯ್ಲಿನ ಒಂದು ವಿಧಾನವಾಗಿದೆ. ಹೀಗೆ ನೀರನ್ನು ಸಂಗ್ರಹಿಸುವಾಗ ನೀರನ್ನು ದಪ್ಪ ಕಲ್ಲು, ಜೆಲ್ಲಿ ಕಲ್ಲು, ಇದ್ದಿಲ್ಲು, ನೈಲಾನ…ಗಳನ್ನು ಬಳಸಿ ಶುದ್ಧಿಕರಿಸುವುದು ಉತ್ತಮ. ನುರಿತ ತಜ್ಞರ ಸಲಹೆಯ ಮೇರೆಗೆ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಒಳ್ಳಯದು.

ಅಂತರ್ಜಲ ವೃದ್ಧಿಸುವುದು ಮಳೆನೀರಿನ ಕೊಯ್ಲಿನ ಪ್ರಮುಖ ಅಂಶವೇಂದರೆ ತಪ್ಪಾಗಲಾರದು. ಇವುಗಳಲ್ಲಿ ಹಲವು ಬಗೆಗಳನ್ನು ನಾವು ಕಾಣಬಹುದಾಗಿದೆ.

  1. ಇಂಗು ಕೊಳಗಳ ನಿರ್ಮಾಣ

ಪ್ರಾಕೃತಿಕವಾಗಿ ಹರಿದು ಹೋಗುವ ನೀರಿನ ತೆರೆಗಳಿಗೆ ಅಡ್ಡಲಾಗಿ ಹೆಚ್ಚು ಆಳವಿಲ್ಲದಂತಹ ಗುಂಡಿಗಳನ್ನು ನಿರ್ಮಿಸಿ ಅಲ್ಲಿಯೇ ನೀರು ಇಂಗುವಂತೆ ಮಾಡುವುದನ್ನು ಇದು ಒಳಗೊಂಡಿದೆ.

  1. ಕೊಳವೆ ಬಾವಿಯ ಮರುಪೂರಣ

ಇದು ಕೊಡ ಒಂದು ರೀತಿಯ ಇಂಗು ಗುಂಡಿಯ ರೀತಿಯಲ್ಲಿಯೇ ಕಾರ್ಯವನ್ನು ನಿರ್ವಹಿಸುತ್ತದೆ. ಬಾವಿಗಳ ಅಥವಾ ಕೊಳವೆ ಬಾವಿಗಳ ಸುತ್ತಲು ಗುಂಡಿಗಳನ್ನು ನಿರ್ಮಿಸಿ ಈ ಮುಂಚೆ ತಿಳಿಸಿದಂತೆ ದಪ್ಪ ಕಲ್ಲು, ಜೆಲ್ಲಿ ಕಲ್ಲು, ಇದ್ದಿಲ್ಲು, ನೈಲಾನ…ಗಳನ್ನು ಅಗತ್ಯ ಕ್ರಮದಲ್ಲಿ ಬಳಸಿಕೊಳ್ಳುವ ಮೂಲಕ ಬಾವಿಯ ಮೂಲಕ ಬರುವ ಹೆಚ್ಚುವರಿ ನೀರು ಅಥವಾ ಮಳೆ ರೂಪದಲ್ಲಿ ಭೂಮಿಯನ್ನು ಸೇರುವ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡುವ ಮೂಲಕ ಕೊಳವೆ ಬಾವಿಗಳ ಮರುಪೂರಣ ಮಾಡಬಹುದು.

ಇವಷ್ಟೇ ಅಲ್ಲದೆ, ಉಸುಕಿನ ಚೀಲಗಳ ಅಣೆಗಳ ನಿರ್ಮಾಣ, ಸಣ್ಣಗೆ ಹರಿದು ಹೋಗುವ ನೀರಿನ ತೊರೆಗಳಿಗೆ ಸ್ಥಳೀಯವಾಗಿ ದೊರೆಯುವ ಕಾಡುಕಲ್ಲು ಹಾಗೂ ಕಬ್ಬಿಣದ ಜಾಲರಿ ಬಳಸಿ ನೀರಿನ ಹರಿಯುವಿಕೆಯನ್ನು ತಡೆಯುವುದು, ಒಣಕಲ್ಲಿನ ತಡೆ ಅಣೆಗಳ ನಿರ್ಮಾಣಗಳಂತಹ ಹಲವು ವಿಧಾನಗಳನ್ನು ಬಳಸಿಕೊಂಡು ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುವ ಮೂಲಕ ಕಲಿಯುಗದ ಅಮೃತವಾದ ಜೀವಜಲದ ಸಬ್ದಳಕೆ ಮಾಡಬೇಕಿದೆ.

ಕೃಷಿ ಹೊಂಡಗಳ ನಿರ್ಮಾಣ

ಹೊಂಡಗಳನ್ನು ನಿರ್ಮಿಸಿ ಕೃಷಿ ಪ್ರದೇಶಗಳಲ್ಲಿ ಬೀಳುವ ನೀರು ಸರಾಗವಾಗಿ ಹರಿದು ಈ ಹೊಂಡಗಳನ್ನು ಸೇರುವಂತೆ ಒಳ ಹರಿವಿನ ಮಾರ್ಗವನ್ನು ಹಾಗೂ ಹೊಂಡ ತುಂಬಿ ಹೆಚ್ಚಾದ ನೀರಿನ ಹೊರ ಹರಿವಿಗಾಗಿ ಮಾರ್ಗವನ್ನು ನಿರ್ಮಿಸುವುದು ಉತ್ತಮ. ಈ ರೀತಿಯಾಗಿ ಸಂಗ್ರಹಿಸಿದ ನೀರನ್ನು ಅಲ್ಪಾವಧಿ ತರಕಾರಿ ಬೆಳೆ, ತೋಟಗಾರಿಕೆ ಬೆಳೆಗಳಿಗೂ ಕೊಡ ಬಳಕೆ ಮಾಡಬಹುದಾಗಿದೆ. ಜೊತೆಗೆ ಈ ನೀರನ್ನು ಆರು ತಿಂಗಳ ವರೆಗೆ ಸಂಗ್ರಹಿಸಬಹುದಾದಲ್ಲಿ ಮೀನು ಸಾಕಾಣಿಕೆಯನ್ನು ಸಹ ಕೈಗೊಳ್ಳಬಹುದು.

- ಲಕ್ಷ್ಮೀ ಶಿವಣ್ಣ

ಮಹಿಳಾ ವಿವಿ ವಿಜಯಪುರ

 

Advertisement

Udayavani is now on Telegram. Click here to join our channel and stay updated with the latest news.

Next