Advertisement

“ತಾವೂ ಮಳೆಕೊಯ್ಲು ಅಳವಡಿಸುತ್ತಿದ್ದಾರೆ; ಪಕ್ಕದವರನ್ನೂ ಪ್ರೇರೇಪಿಸುತ್ತಿದ್ದಾರೆ’

12:08 AM Jul 18, 2019 | sudhir |

ಮಹಾನಗರ: ಉದಯವಾಣಿ ಪತ್ರಿಕೆಯು ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದ ಪ್ರೇರಣೆಯಿಂದ ಇದೀಗ ನಗರ ಸಹಿತ ಜಿಲ್ಲೆಯ ಹಲವೆಡೆಯಿಂದ ಮಳೆಕೊಯ್ಲು ಅನುಷ್ಠಾನದ ಯಶೋಗಾಥೆಗಳು ಹರಿದು ಬರುತ್ತಿವೆ. ಇವುಗಳು ಇನ್ನು ಕೂಡ ಮಳೆಕೊಯ್ಲು ಅಳವಡಿಸುವುದಕ್ಕೆ ಹಿಂದೇಟು ಹಾಕುತ್ತಿರುವ ಜನರಿಗೆ ಆ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗುವುದಕ್ಕೆ ಸ್ಫೂರ್ತಿ ನೀಡುತ್ತಿವೆ.

Advertisement

“ಮನೆ ಮನೆಗೆ ಮಳೆಕೊಯ್ಲು’ ಅಭಿಯಾನ ಪ್ರಾರಂಭಗೊಂಡ ಬಳಿಕ ಅದರಿಂದ ಪ್ರೇರಿತರಾಗಿ ತಮ್ಮ ಮನೆಗಳಲ್ಲಿ ಮಳೆ ನೀರಿನ ಸಂರಕ್ಷಣೆಗೆ ಪೂರಕ ಕ್ರಮಗಳನ್ನು ಅಳವಡಿಸಿರುವವರ ಯಶೋಗಾಥೆಗಳನ್ನು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ.

ಬೋರ್‌ವೆಲ್‌ ಜಲಮರುಪೂರಣ
23 ವರ್ಷಗಳ ಹಿಂದೆ ಮನೆ ಸಮೀಪ ತೊಡಿದ ಬೋರ್‌ವೆಲ್‌ನಲ್ಲಿ ಉತ್ತಮ ನೀರಿತ್ತು. ಆದರೆ ಈ ಬಾರಿ ನೀರಿನ ಒತ್ತಡ ಕಡಿಮೆಯಾಗುತ್ತಾ ಬಂತು. ಹೀಗಾಗಿ ಬೋರ್‌ವೆಲ್‌ಗೆ ಜಲಮರುಪೂರಣ ವ್ಯವಸ್ಥೆ ಮಾಡಬೇಕಾಯಿತು ಎಂದು ಬಿಕರ್ಣ ಕಟ್ಟೆ, ಜಯಶ್ರೀ ಗೇಟ್‌ ನಿವಾಸಿ ಸುನಿಲ್‌ ಕುಂದರ್‌ ಹೇಳುತ್ತಾರೆ.

“ಉದಯವಾಣಿ’ಯ ಅಭಿಯಾನದಿಂದ ಪ್ರೇರಿತರಾಗಿ ನಿರ್ಮಿತಿ ಕೇಂದ್ರದ ರಾಜೇಂದ್ರ ಕಲಾºಬಿ ಅವರ ಮಾರ್ಗ ದರ್ಶನದಲ್ಲಿ ಜಲಮರುಪೂರಣ ವ್ಯವಸ್ಥೆ ಮಾಡಿದೆವು. ಬೋರ್‌ವೆಲ್‌ನ ಸುತ್ತ 8 ಫೀಟ್‌ ಗುಂಡಿ ತೆಗೆದು ಅದಕ್ಕೆ ಜಲ್ಲಿ, ಮರದ ಮಸಿ, ಹೊಗೆ ಹಾಕಿದೆವು. ಅದಕ್ಕೆ ಟೆರೇಸ್‌ನಿಂದ ಬೋರ್‌ವೆಲ್‌ ಗೆ ಪೈಪ್‌ ಮೂಲಕ ಮಳೆ ನೀರು ಬಿಡಲಾಯಿತು. ಯಾವುದೇ ತೊಂದರೆಯಾಗದಂತೆ ಅದರ ಮೇಲೆ ಇಂಟರ್‌ಲಾಕ್‌ ಬ್ಲಾಕ್‌ ಅಳವಡಿಸಿದ್ದೇವೆ. ಒಟ್ಟು 70,000 ರೂ. ಖರ್ಚು ತಗಲಿದೆ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಕಟ್ಟಡಗಳ ನಡುವೆ ನೀರಿನ ಅಭಾವದ ಭಯ
ಕೆಲವು ವರ್ಷಗಳ ಹಿಂದೆ ಮನೆ ಸಮೀಪ ಇಷ್ಟು ಬೋರ್‌ವೆಲ್‌, ಕಟ್ಟಡಗಳು ಇರಲಿಲ್ಲ. ಆದರೆ ಇತೀ¤ಚೆಗೆ ಆಕಾಶದೆತ್ತರಕ್ಕೆ ಕಟ್ಟಡಗಳು ಹಾಗೂ ಅಕ್ಕಪಕ್ಕಗಳ ಮನೆ ಗಳಲ್ಲಿ ಬೋರ್‌ವೆಲ್‌ಗ‌ಳು ಹೆಚ್ಚಾಗಿದೆ. ಅದರಿಂದ ಮನೆಯ ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ ಆ ಕಾರಣಕ್ಕಾಗಿ ಮಳೆಕೊಯ್ಲು ಅಳವಡಿಸಿದ್ದೇವೆ ಎಂದು ಹೇಳುತ್ತಾರೆ ಲೋಹಿತ್‌ ನಗರದ ಶೋಭಾ ಸುಂದರ್‌.
ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಆತಂಕದಲ್ಲಿ ನಾವಿದ್ದಾಗ ಉದಯವಾಣಿ ಪತ್ರಿಕೆಯಲ್ಲಿ ಮಳೆಕೊಯ್ಲು ಬಗ್ಗೆ ಅಭಿಯಾನ ಆರಂಭವಾಗಿತ್ತು. ಅದನ್ನು ಓದಿ ಬಳಿಕ ಮಳೆಕೊಯ್ಲು ಅಳವಡಿಸಿದೆವು. ನಮ್ಮ ಮನೆ 5 ಸೆಂಟ್ಸ್‌ ಜಾಗದಲ್ಲಿದ್ದು, ಅಲ್ಲಿನ ಟೆರೇಸ್‌ನಿಂದ ಪೈಪ್‌ ಮೂಲಕ ಫಿಲ್ಟರ್‌ ಆಗಿ ಮಳೆ ನೀರು ಬಾವಿಗೆ ಬೀಳುತ್ತದೆ. ಮುಂದಿನ ಬೇಸಗೆಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ನಿರೀಕ್ಷೆ ಇದೆ.

Advertisement

“ಮಳೆಕೊಯ್ಲು’ ಮಾಹಿತಿ
ಕದ್ರಿ ಪಾರ್ಕ್‌ ಬಳಿ ಮೇರಿಯನ್‌ ಪಾರ್ಕ್‌ ಬಿಲ್ಡಿಂಗ್‌ನಲ್ಲಿ ಉದಯವಾಣಿ ಸಹಯೋಗದೊಂದಿಗೆ “ಮನೆಮನೆಗೆ ಮಳೆಕೊಯ್ಲು’ ಮಾಹಿತಿ ಕಾರ್ಯಕ್ರಮ ಜು. 18ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲಾºವಿ ಮಾಹಿತಿ ನೀಡಲಿದ್ದಾರೆ. ಸುಮಾರು 55ಕ್ಕೂ ಹೆಚ್ಚು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಮೇರಿಯನ್‌ ಪ್ರಾಜೆಕ್ಟ್ ಪ್ರೈವೆಟ್‌ ಸಂಸ್ಥೆ ಮತ್ತು ಅಸೋಸಿಯೇಶನ್‌ ಆಫ್‌ ಕನ್ಸೆಲ್ಟಿಂಗ್‌ ಸಿವಿಲ್‌ ಎಂಜಿನಿಯರ್ ಆಫ್‌ ಇಂಡಿಯಾದ ಆಶ್ರಯದಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ಮೇರಿಯನ್‌ ಪ್ರಾಜೆಕ್ಟ್ ಪ್ರೈವೆಟ್‌ ಸಂಸ್ಥೆಯ ನಿರ್ದೇಶಕ (ಆಪರೇಶನ್‌) ಉಜ್ವಲ್‌ ಡಿ’ಸೋಜಾ ತಿಳಿಸಿದ್ದಾರೆ.

ಕಾಟಿಪಳ್ಳ : ಕಾರ್ಯಾಗಾರ
ಕಾಟಿಪಳ್ಳ ಸರಕಾರಿ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ “ಉದಯವಾಣಿ’ ಸಹಯೋಗದೊಂದಿಗೆ “ಮನೆಮನೆಗೆ ಮಳೆಕೊಯ್ಲು’ ಕಾರ್ಯಾಗಾರ ಜು. 19ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ನಿರ್ಮಿತಿ ಕೇಂದ್ರದ ಯೋಜನನಿರ್ದೇಶಕ ರಾಜೇಂದ್ರ ಕಲಾºವಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಮಕ್ಕಳಿಗೆ ಮತ್ತು ಹೆತ್ತವರಿಗಾಗಿ ಕಾರ್ಯಾಗಾರ ಆಯೋಜಿಸಲಾಗಿದೆ. ಸಾರ್ವಜನಿಕರಿಗೂ ಮುಕ್ತ ಅವಕಾಶವಿದೆ. ಶಾಲೆಯಲ್ಲಿ ಒಟ್ಟು 120 ಮಕ್ಕಳಿದ್ದು, ಪ್ರತಿಯೊಬ್ಬರ ಮನೆಯಲ್ಲೂ ಅಳವಡಿಸಲು ಮನವಿ ಮಾಡಲಾಗುವುದು ಎಂದು ಸ.ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ) ಉಪ ಪ್ರಾಂಶುಪಾಲ ಬಾಬು ಪಿ.ಎಂ. ತಿಳಿಸಿದ್ದಾರೆ.

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ.ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.

Advertisement

Udayavani is now on Telegram. Click here to join our channel and stay updated with the latest news.

Next