Advertisement
ಕಳೆದೆರಡು ವರ್ಷಗಳಿಂದ ಹವಮಾನ ವೈಪರೀತ್ಯ ದಿಂದ ಮಳೆ ಸುರಿಯುವುದರಲ್ಲಿ ವ್ಯತ್ಯಾಸವಾಗು ತ್ತಿರುವುದು ಕಂಡು ಬಂದಿದ್ದರೂ, ಈ ವರ್ಷದಷ್ಟು ಗಂಭೀರ ಪರಿಸ್ಥಿತಿ ಕಂಡು ಬಂದಿರಲಿಲ್ಲ. ಸಾಮಾನ್ಯವಾಗಿ ಅಕ್ಟೋಬರ್ ಹಾಗೂ ನವೆಂಬರ್ ಮಾಹೆಯಲ್ಲಿ ಅರೇ ಬಿಕಾ ಕಾಫಿ ಕೊಯ್ಲು ಬರುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಮಳೆ ನಿರಂತರವಾಗಿ ಸುರಿಯು ತ್ತಿರುವುದರಿಂದ ಈಗಾಗಲೆ ಶೇ.25ರಷ್ಟು ಅರೇಬಿಕಾ ಕಾಫಿ ನೆಲದ ಪಾಲಾಗಿದೆ. ಬಾಕಿ ಉಳಿದ ಕಾಫಿ ಯನ್ನು ಕೊಯ್ಲು ಮಾಡಲು ಬೆಳೆಗಾರರು ಆತಂಕ ಎದುರಿಸುತ್ತಿದ್ದಾರೆ.
Related Articles
Advertisement
ಸಣ್ಣ-ಮಧ್ಯಮ ವರ್ಗಕ್ಕೆ ತೊಂದರೆ: ಅಲ್ಪಪ್ರಮಾಣ ದಲ್ಲಿ ಕೊಯ್ಲಿಗೆ ಬರುವ ಅರೇಬಿಕ ಕಾಫಿ ಹಣ್ಣನ್ನು ಒಣಗಿಸಲು ಸ್ಥಿತಿವಂತ ಕಾಫಿ ಬೆಳೆಗಾರರು ಡ್ರೈಯರ್ ಆಳವಡಿಸಿಕೊಂಡಿದ್ದಾರೆ. ಆದರೆ ಬೆರಳೆಣಿಯಷ್ಟು ದೊಡ್ಡ ಬೆಳೆಗಾರರು ಡ್ರೈಯರ್ ಅಳವಡಿಸಿಕೊಂಡಿದ್ದು ಸಣ್ಣ ಮತ್ತು ಮಧ್ಯಮ ವರ್ಗದ ಕಾಫಿ ಬೆಳೆಗಾರರು ಏನು ಮಾಡಲಾಗದೆ ಮೂಕಪ್ರೇಕ್ಷಕರಾಗಿದ್ದಾರೆ.
ಕಳೆದ 2 ವರ್ಷಗಳಿಂದ ರೋಬಾಸ್ಟ್ ಕಾಫಿ ಕೊಯ್ಲು ಮಾಡುವ ಸಮಯದಲ್ಲಿ ಬಿದ್ದ ಒಂದೆರಡು ಮಳೆಗೆ ಕಾಫಿ ಬೆಳೆಗಾರರು ತತ್ತರಿಸಿದ್ದು, ಮಳೆ ನಿರಂತರ ವಾಗಿ ಬಂದಲ್ಲಿ ಬೆಳೆಗಾರರು ಬೀದಿ ಪಾಲಾಗು ವುದರಲ್ಲಿ ಅನುಮಾನವಿಲ್ಲ. ಈ ಸ್ಥಿತಿಯನ್ನು ಎದುರಿಸಲು ಕಾಫಿ ಮಂಡಳಿ ಯಾವುದೆ ತಂತ್ರಜ್ಞಾನ ಹಾಗೂ ಯೋಜನೆಗಳನ್ನು ರೂಪಿಸ ದಿರುವುದು ಕಾಫಿ ಬೆಳೆ ಗಾರರಿಗೆ ತೊಡಕಾಗಿದೆ. ಹವಾಮಾನ ವೈಪರೀತ್ಯದಿಂದ ಮಳೆ ನಿರಂತರವಾಗಿ ಸುರಿಯುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೆ ಅರೇಬಿಕಾ ಕಾಫಿ ಬೆಳೆಗಾರರು ತೀವ್ರ ಪೆಟ್ಟು ತಿಂದಿದ್ದಾರೆ. ಕಾಫಿ ಮಂಡಳಿ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳು ಬೆಳೆಗಾರರ ನೆರವಿಗೆ ಧಾವಿಸಬೇಕು. ●ಡಾ.ಮೋಹನ್ ಕುಮಾರ್, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ
ಅಕಾಲಿಕ ಮಳೆಯಿಂದಾಗಿ ಕಟಾವು ಮಾಡಿದ ಕಾಫಿ ಯನ್ನು ಕಣದಲ್ಲಿ ಒಣಗಿಸಲಾಗದೆ ಗೋದಾಮಿನಲ್ಲಿ ಹರಿವಿದ್ದೇನೆ. ಕಾಫಿ ಬೆಳೆಗಾರನ ಬದುಕು ತುಂಬಾ ಕಷ್ಟಕರವಾಗಿದೆ. ●ಧರಣೇಶ್, ಇಬ್ಬಡಿ ಗ್ರಾಮದ ಕಾಫಿ ಬೆಳೆಗಾರ