Advertisement

Rain ಕರಾವಳಿಯಲ್ಲಿ ಬಿಡುವು ನೀಡಿದ ಮಳೆ

01:13 AM Jun 30, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಳೆ ಬಿಡುವು ನೀಡಿದೆ. ಮಂಗಳೂರು ಸಹಿತ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.

Advertisement

ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂ.30 ಮತ್ತು ಜು.1 ರಂದು ಕರಾವಳಿ ಭಾಗದಲ್ಲಿ “ಎಲ್ಲೋ ಅಲರ್ಟ್‌’ ಘೋಷಿಸಲಾಗಿದೆ.

ಈ ವೇಳೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಬಿಡುವು ನೀಡುತ್ತಿದ್ದಂತೆ ಜಿಲ್ಲಾದ್ಯಂತ ಗರಿಷ್ಠ ಉಷ್ಣಾಂಶ ಏರಿಕೆ ಕಂಡಿದ್ದು, ಸೆಕೆಯ ವಾತಾವರಣ ಇತ್ತು. ಮಂಗಳೂರಿನಲ್ಲಿ 30.2 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1 ಡಿ.ಸೆ. ಮತ್ತು 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.7 ಡಿ.ಸೆ. ನಷ್ಟು ತಾಪಮಾನ ಏರಿಕೆ ಕಂಡಿತ್ತು.

ಪುತ್ತೂರು -ಪಾಣಾಜೆ ರಸ್ತೆಯ ದೇವಸ್ಯ ದಿಂದ ಚೆಲ್ಯಡ್ಕ ಮೂಲಕ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಮುಂದಿನ ಆದೇಶದವರೆಗೆ ಘನವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪುತ್ತೂರು ದೇವಸ್ಯ ಕಡೆಯಿಂದ ಪಾಣಾಜೆ ಕಡೆಗೆ ಸಂಚರಿಸುವ ಘನ ವಾಹನಗಳು ಚೆಲ್ಯಡ್ಕವರೆಗೆ ಸಂಚರಿಸಬಹುದು. ಪುತ್ತೂರು ಆರ್ಯಾಪು, ಸಂಪ್ಯ, ಸಂಟ್ಯಾರ್‌, ಬೆಟ್ಟಂಪಾಡಿ ಮುಖ್ಯ ರಸ್ತೆಯ ಮೂಲಕ ಪಾಣಾಜೆ ಕಡೆಗೆ ಘನ ವಾಹನಗಳು ಸಂಚರಿಸುವಂತೆ ಜಿಲ್ಲಾಧಿಕಾರಿ ಮುಲ್ಲೆ ç ಮುಗಿಲನ್‌ ಎಂ.ಪಿ ಅವರು ಆದೇಶಿಸಿದ್ದಾರೆ.

Advertisement

ಉಡುಪಿಯಲ್ಲಿ ಮೋಡ ಕವಿದ ವಾತಾವರಣ
ಉಡುಪಿ: ಜಿಲ್ಲಾದ್ಯಂತ ಶನಿವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನದ ವೇಳೆ ತುಸು ಮಳೆ ಸುರಿಯಿತಾದರೂ ಬಳಿಕ ಇಳಿಮುಖವಾಯಿತು. ಮಧ್ಯಾಹ್ನದ ಬಳಿಕ ಮಳೆ ಸುರಿಯಲಿಲ್ಲ. ಸಂಜೆ ಮೋಡ ಕವಿದ ವಾತಾವರಣ ಇತ್ತು.

2.45 ಲ.ರೂ.ಹಾನಿ
ಉಡುಪಿ ತಾಲೂಕಿನ ತೆಂಕನಿಡಿಯೂರಿನಲ್ಲಿ ಸುಂದರ ಪೂಜಾರಿ ಹಾಗೂ ವೈಲೆಟ್‌ ವಾಜ್‌ ಅವರ ಮನೆಗೆ ಮರಬಿದ್ದು 45 ಸಾವಿರ ರೂ.ನಷ್ಟ ಉಂಟಾಗಿದೆ. ಕುಂದಾಪುರದ ಕೊರ್ಗಿ ಮೂಡುಬೆಟ್ಟಿನ ಸುಶೀಲಾ ಆಚಾರಿ ಹಾಗೂ ಕನಕ ಕುಲಾಲ್‌ ಅವರ ಮನೆ ಹಾಗೂ ಅಡಿಕೆ ತೋಟಕ್ಕೆ ಸಿಡಿಲು ಬಡಿದು 90 ಸಾವಿರ ರೂ.ನಷ್ಟ ಉಂಟಾಗಿದೆ. ಕಾಪು ಪಡು ಇಲ್ಲಿನ ಜಾವೇದ್‌ ಅವರ ವಾಸ್ತವ್ಯದ ಮನೆಗೆ ಮರಬಿದ್ದು 80 ಸಾವಿರ ರೂ.ನಷ್ಟ ಉಂಟಾಗಿದೆ. ಬ್ರಹ್ಮಾವರ ಹೊಸೂರಿನ ರಮೇಶ್‌ ಆಚಾರ್ಯ ಅವರ ಮನೆ ಗಾಳಿ ಮಳೆಗೆ ಹಾನಿಯಾಗಿ 30 ಸಾವಿರ ರೂ.ನಷ್ಟವಾಗಿದೆ. ಹೀಗೆ ಜಿಲ್ಲೆಯಲ್ಲಿ ಒಟ್ಟು 2.45 ಲ.ರೂ.ನಷ್ಟ ಉಂಟಾಗಿದೆ.

ಕಾರ್ಕಳದಲ್ಲಿ 32.3, ಕುಂದಾಪುರ 51.7, ಉಡುಪಿ 28.8, ಬೈಂದೂರು 35.6, ಬ್ರಹ್ಮಾವರ 34.6, ಕಾಪು 23.5, ಹೆಬ್ರಿ 44.8 ಮಿ.ಮೀ. ಸಹಿತ ಜಿಲ್ಲೆಯಲ್ಲಿ ಒಟ್ಟು 35.9 ಮಿ.ಮೀ.ಸರಾಸರಿ ಮಳೆ ಸುರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next