Advertisement

ಮೂರನೇ ಟೆಸ್ಟ್: ಸಿಡ್ನಿಯಲ್ಲಿ ಮಳೆ ಮತ್ತು ಭಾರತದ ಶುಭಾರಂಭ!

08:01 AM Jan 07, 2021 | Team Udayavani |

ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ ಮೂರನೇ ಪಂದ್ಯದ ಆರಂಭದಲ್ಲೇ ಮಳೆರಾಯನ ಕಾಟ ಎದುರಾಗಿದೆ. ಪಂದ್ಯ ಆರಂಭವಾಗಿ ಎಂಟನೇ ಓವರ್ ಗೆ ಮಳೆ ಅಡ್ಡಿಯಾಗಿ ಸದ್ಯ ಪಂದ್ಯ ಸ್ಥಗಿತವಾಗಿದೆ.

Advertisement

ಟಾಸ್ ಗೆದ್ದ ಆಸೀಸ್ ನಾಯಕ ಟಿಮ್ ಪೇನ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಆಸೀಸ್ ನ ಈ ಸರಣಿಯ ಹೊಸ ಆರಂಭಿಕರು ಉತ್ತಮ ಆರಂಭ ನೀಡಲಾಗಲಿಲ್ಲ. ಸರಣಿಯಲ್ಲಿ ಮೊದಲ ಪಂದ್ಯವಾಡುತ್ತಿರುವ ಡೇವಿಡ್ ವಾರ್ನರ್ ಕೇವಲ ಐದು ರನ್ ಗಳಿಸಿ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು.

7.1 ಓವರ್ ಗೆ ಪಂದ್ಯ ಸ್ಥಗಿತವಾಗಿದ್ದು, ಆರಂಭಿಕ ವಿಲ್ ಪುಕೊವಸ್ಕಿ 14 ರನ್ ಮತ್ತು ಲಬುಶೇನ್ ಎರಡು ರನ್ ಗಳಿಸಿ ಆಡುತ್ತಿದ್ದಾರೆ.

ಇದನ್ನೂ ಓದಿ:ನಿಮ್ಮ ಗ್ರಹಬಲ: ಇಂದು ಈ ರಾಶಿಯವರ ಎಣಿಕೆಯ ಕೆಲಸ ಕಾರ್ಯಗಳು ನಡೆಯಲಿವೆ

ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆದ್ದಿದ್ದು, ಸಮಬಲ ಸಾಧಿಸಿದೆ.

Advertisement

ಮಾಸ್ಕ್ ಕಡ್ಡಾಯ

ಭಾರತ-ಆಸ್ಟ್ರೇಲಿಯ ನಡುವಿನ ಮೆಲ್ಬರ್ನ್ ಟೆಸ್ಟ್‌ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಹಾಜರಿದ್ದ ವೀಕ್ಷಕನೊಬ್ಬನಿಗೆ ಕೊರೊನಾ ಪಾಸಿಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ಸಿಡ್ನಿ ಟೆಸ್ಟ್‌ ನಿಯಮಾವಳಿ ಯನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿ ಸಲಾಗಿದೆ. ವೀಕ್ಷಕರಿಗೆ ಮಮಾಸ್ಕ್ ಕಡ್ಡಾಯವೆಂದು ನ್ಯೂ ಸೌತ್‌ ವೇಲ್ಸ್‌ ಸರಕಾರ ಸೂಚಿಸಿದೆ. ಜತೆಗೆ ಮೆಲ್ಬರ್ನ್ ಟೆಸ್ಟ್‌ ವೀಕ್ಷಕರಿಗೆ ಸಿಡ್ನಿ ಟೆಸ್ಟ್‌ಗೆ ಹಾಜರಾಗದಂತೆಯೂ ಸೂಚಿಸಲಾಗಿದೆ.ಕೊರೊನಾ ಪಾಸಿಟಿವ್‌ ಕಂಡುಬಂದ ಆ ವೀಕ್ಷಕ ಮೆಲ್ಬರ್ನ್ ಟೆಸ್ಟ್‌ ಪಂದ್ಯದ ದ್ವಿತೀಯ ದಿನ (ಡಿ. 27) ಸ್ಟೇಡಿಯಂನಲ್ಲಿ ಹಾಜರಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.