Advertisement

Mangaluru: ತುಂಬೆ ಡ್ಯಾಂ ಗೇಟುಗಳು ಈಗಲೇ ಬಂದ್‌!

11:28 AM Sep 01, 2023 | Team Udayavani |

ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ನೀರು ಪೂರೈಸುವ ನೇತ್ರಾವತಿ ನದಿಯ ತುಂಬೆ ಅಣೆಕಟ್ಟಿನಲ್ಲಿ ಮಳೆಗಾಲದ ಈ ಸಮಯದಲ್ಲಿ ನೀರಿನ ಒಳ ಹರಿವು ಹೆಚ್ಚಿರುವ ಕಾರಣ 7-8 ಅಥವಾ ಅದಕ್ಕಿಂತಲೂ ಹೆಚ್ಚಿನ ಗೇಟ್‌ಗಳನ್ನು ತೆರೆದಿಡುವುದು ವಾಡಿಕೆ. ಆದರೆ ಈ ಬಾರಿ 30 ಗೇಟ್‌ಗಳ ಪೈಕಿ ಒಂದನ್ನು ಮಾತ್ರ ತೆರೆದಿಡಲಾಗಿದೆ!

Advertisement

ಪ್ರಸ್ತುತ 5 ಮೀ. ವರೆಗೆ ನೀರು ಸಂಗ್ರಹಿಸಲಾಗಿದೆ. ಮುಂದಿನ ಒಂದು ತಿಂಗಳವರೆಗೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಷ್ಟ ಎನ್ನುತ್ತಾರೆ ಅಧಿಕಾರಿಗಳು. ಹಾಲಿ ಇರುವ ನೀರಿನ ಪ್ರಮಾಣ ಜನವರಿ-ಫೆಬ್ರವರಿ ವರೆಗೆ ಸಾಕಾದೀತು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಹೇಗಿತ್ತು?
ತುಂಬೆಯಲ್ಲಿ ಕಳೆದ ವರ್ಷ ಈ ಸಮಯದಲ್ಲಿ ಸುಮಾರು 6 ಗೇಟ್‌ಗಳ ಮೂಲಕ ನೀರು ಹೊರ ಹೋಗುತ್ತಿತ್ತು. 4 ಮೀ. ನೀರು ಸಂಗ್ರಹಿಸಲಾಗಿತ್ತು. ಆದರೆ ಈ ಬಾರಿ ಒಳ ಹರಿವು ಕುಸಿದಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೇಲ್ಭಾಗದಲ್ಲಿರುವ ಎಎಂಆರ್‌ ಸೇರಿದಂತೆ ವಿವಿಧ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸುತ್ತಿದ್ದಾರೆ. ಮತ್ತೆ ಮಳೆ ಬಿರುಸಾದರೆ ಮಾತ್ರ ಆತಂಕ ದೂರವಾಗಬಹುದು.
ನದಿಗಳಲ್ಲಿ ತಿಳಿ ನೀರು ಮಳೆಯ ಅಬ್ಬರಕ್ಕೆ ಕೆಂಬಣ್ಣದ ನೀರು ಹರಿಯ ಬೇಕಿದ್ದ ನದಿಗಳಲ್ಲಿ ಸದ್ಯ ಕಾಣುತ್ತಿರುವುದು ಶುಭ್ರವಾದ ತಿಳಿ ನೀರು. ಅಣೆಕಟ್ಟಿನಲ್ಲೂ ಸರೋವರದಂತೆ ಶುಭ್ರ ನೀರಿನ ಸಂಗ್ರಹವಿದೆ. ಸುಮಾರು 10-15 ದಿನಗಳಿಂದ ಜಿಲ್ಲೆಯ ಘಟ್ಟ ಪ್ರದೇಶವೂ ಸೇರಿದಂತೆ ನದಿಪಾತ್ರದ ಎಲ್ಲೂ ಬಿರುಸಿನ ಮಳೆಯೇ ಸುರಿದಿಲ್ಲ.

ಅಡ್ಯಾರ್‌ ಅಣೆಕಟ್ಟಿನಲ್ಲಿ ನೀರು ಸಂಗ್ರಹವಿಲ್ಲ
ಅಡ್ಯಾರ್‌- ಹರೇಕಳ ಪಾವೂರು ನಡುವೆ ನೇತ್ರಾವತಿ ನದಿಗೆ ನಿರ್ಮಿಸಿರುವ ಅಣೆಕಟ್ಟಿನ ಎಲ್ಲ ಗೇಟ್‌ಗಳನ್ನು ತೆಗೆದು ನೀರು ಹೊರಕ್ಕೆ ಹರಿಯಬಿಡಲಾಗುತ್ತಿದೆ. ಇದರಿಂದಾಗಿ ಅಣೆಕಟ್ಟಿನ ಒಳಭಾಗದಲ್ಲಿ ನೀರಿನ ಮಟ್ಟ ಕುಸಿದಿದೆ. ನೀರು ಪೂರೈಕೆಗೆ ಬೇಕಾದ ವ್ಯವಸ್ಥೆ ಮಾಡದಿರುವ ಕಾರಣ ನೀರು ಸಂಗ್ರಹಿಸುತ್ತಿಲ್ಲ ಎನ್ನುವುದು ಅಧಿಕಾರಿಗಳ ಮಾತು.

ಈ ಬಾರಿ ಮಳೆಯ ಪ್ರಮಾಣದಲ್ಲಿ ತೀವ್ರ ಕುಸಿತ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಈಗಲೇ ಅಂದಾಜಿಸುವುದು ಕಷ್ಟ. ಸದ್ಯ ನದಿಯಲ್ಲಿ ನೀರಿನ ಹರಿ ವಿನ ಪ್ರಮಾಣದ ಮೇಲೆ ನಿಗಾ ಅಗತ್ಯ. ಮುಂದಿನ ದಿನಗಳಲ್ಲಿ ಪಾಲಿಕೆಯು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
-ಪ್ರೇಮಾನಂದ ಶೆಟ್ಟಿ, ಮನಪಾ ಮುಖ್ಯ ಸಚೇತಕ

Advertisement

ಇದನ್ನೂ ಓದಿ: BL Santhosh ಮೊದಲು ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲಿ: ಜಗದೀಶ ಶೆಟ್ಟರ್

Advertisement

Udayavani is now on Telegram. Click here to join our channel and stay updated with the latest news.

Next