Advertisement
ಈ ಬಾರಿ ರಾಜ್ಯ ಕರಾವಳಿ ತೀರಕ್ಕೆ ಮುಂಗಾರು ವಿಳಂಬವಾಗಿ ಜೂ. 8ರಂದು ಆಗಮಿಸಿದ್ದು, ಆರಂಭದ ಒಂದೆರಡು ದಿನ ಭಾರೀ ಮಳೆಯಾಗಿ ಬಳಿಕ ಕ್ಷೀಣಿಸತೊಡಗಿತ್ತು. ಮತ್ತೆ ಕಳೆದ ತಿಂಗಳಾಂತ್ಯಕ್ಕೆ ಬಿರುಸಿನ ಮಳೆಯಾಗಿ ಕಳೆದ ಒಂದು ವಾರದಿಂದ ಸೆಕೆಯ ವಾತಾವರಣ ಇದೆ.
ಕರಾವಳಿ ಭಾಗದಲ್ಲಿ ಮಳೆ ದುರ್ಬಲಗೊಂಡಿದ್ದು, ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಾಣುತ್ತಿದೆ. ದಿನವಿಡೀ ಸೆಕೆಯ ವಾತಾವರಣ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ದಿನವಿಡೀ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವಾರಣ ಇತ್ತು. ಕೆಲವು ಕಡೆ ಬೆಳಗ್ಗೆ ಮಂಜಿನಿಂದ ಕೂಡಿತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಆ. 15ರ ಬಳಿಕ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ 30.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ, ವಾಡಿಕೆಗಿಂತ 2 ಡಿ.ಸೆ. ಹೆಚ್ಚು ಇತ್ತು. 24.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ 1 ಡಿ.ಸೆ. ವಾಡಿಕೆಗಿಂತ ಹೆಚ್ಚು ಇತ್ತು.