ವ್ಯಾಪಕ ಮಳೆಯಾಗಿದೆ. ದಕ್ಷಿಣದಲ್ಲಿ ಅದರಲ್ಲೂ ಕೊಡಗು ಸುತ್ತಲಿನ ಪ್ರದೇಶಗಳಲ್ಲಿ ಟ್ರಫ್ ಕಂಡು ಬಂದಿದೆ. ಅದೇ ರೀತಿ, ಉತ್ತರ ಭಾಗದಲ್ಲಿ ಮೇಲ್ಮೆ„ ಸುಳಿಗಾಳಿ ಹಾದು ಹೋಗಿದ್ದು, ಇದು ಮಳೆ ಸುರಿಸುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. ಬಿಸಿಲಿನ ತೀವ್ರತೆ ಹೆಚ್ಚಿದಾಗ, ಕಡಿಮೆ ಒತ್ತಡದ ತಗ್ಗು ಉಂಟಾಗಿ ಮಳೆ ಬೀಳುವುದು ಸಾಮಾನ್ಯ ವಾಗಿದೆ. ಇದು ಇನ್ನೂ ಎರಡು ದಿನಗಳು ಮುಂದುವರಿಯಲಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement