ಮಂಗಳೂರು/ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ವರುಣನ ಆರ್ಭಟ ಜೋರಾಗಿದ್ದು, ನೇತ್ರಾವತಿ, ಕುಮಾರಧಾರೆ ಸೇರಿ ದಂತೆ ಬಹುತೇಕ ಎಲ್ಲ ನದಿ ಗಳು ಅಪಾಯದ ಮಟ್ಟ ಮೀರಿವೆ. ನದಿ ತೀರದ ಬಹಳಷ್ಟು ಕಡೆಗಳ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.
ನೇತ್ರಾವತಿ ನದಿ ತೀರದಲ್ಲಿ ವಾಸಿಸುತ್ತಿರುವ ಎಲ್ಲ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ನದಿ ತೀರದ ಪ್ರಮುಖ ಸಂಭಾವ್ಯ ಅಪಾಯ ಸ್ಥಳಗಳಲ್ಲಿ ಅಧಿಕಾರಿಗಳು ಇದ್ದು ಯಾವುದೇ ಪರಿಸ್ಥಿತ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಚಾರ್ಮಾಡಿ ಮುಖೇನ ತೆರಳುವ ಬಸ್‌ಗಳು ಕೊಕ್ಕಡ, ಗುಂಡ್ಯ ಶಿರಾಡಿ ಘಾಟಿ ಮುಖೇನ ಬೆಂಗಳೂರಿಗೆ ಸಂಚರಿಸಿದವು. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಮುಂಬಯಿ, ಕೊಲ್ಲಾಪುರ, ಪುಣೆ ಸಂಚಾರ ರದ್ದು ಗೊಂಡಿದೆ. ಅಂಕೋಲಾ, ಯಲ್ಲಾಪುರ ಕಡೆ ತೆರಳುವ ಬಸ್ ಸಂಚಾರವೂ ಮೊಟಕುಗೊಂಡಿದೆ.
Advertisement
ಶುಕ್ರವಾರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಎರಡೂ ನದಿ ಸಂಗಮವಾಗಿದೆ. ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿರುವುದರಿಂದ ಪಾಣೆ ಮಂಗಳೂರು ಪೇಟೆ, ಆಲಡ್ಕ ಸೇರಿ ದಂತೆ ಹಲವು ಕಡೆ ಮನೆಗಳು ಜಲಾವೃತವಾಗಿದ್ದು, ರಾತ್ರಿಯೂ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇನ್ನಷ್ಟು ಜನವಾಸ ಪ್ರದೇಶಗಳಿಗೆ ನೀರು ನುಗ್ಗುವ ಅಪಾಯವಿದೆ.
ಕೇರಳ, ಚೆನ್ನೈರೈಲು ಸ್ಥಗಿತ
ಮಂಗಳೂರು ರೈಲ್ವೇ ನಿಲ್ದಾಣದಿಂದ ಕೇರಳ, ಚೆನ್ನೆ ೖಗೆ ತೆರಳುವ ಎಲ್ಲ ರೈಲು ಸಂಚಾರ ರದ್ದುಗೊಂಡಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿದವರಿಗೆ ಟಿಕೆಟ್ ದರ ಹಿಂದಿರುಗಿಸಲಾಗುತ್ತದೆ ಎಂದು ರೈಲ್ವೇ ತಿಳಿಸಿದೆ. ಕೇರಳ-ಮುಂಬಯಿಗೆ ರೈಲು ಸಂಚಾರ ಸ್ಥಗಿತಗೊಂಡಿದೆ. 12617 ಎರ್ನಾಕುಲಂ-ನಿಜಾಮುದ್ದೀನ್ ಎಕ್ಸ್‌ಪ್ರೆಸ್, 16346 ತಿರುವಂತಪುರಂ- ಕುರ್ಲಾ ನೇತ್ರಾವತಿ ಎಕ್ಸ್‌ಪ್ರೆಸ್, 22659 ಕೋಚುವೆಲಿ- ಡೆಹ್ರಾಡೂನ್‌ಗೆ ಡೆಹರಾಡೂನ್ ಎಕ್ಸ್‌ಪ್ರೆಸ್ (ವಾರಾಂತ್ಯ ರೈಲು), 19331 ಕೋಚುವೆಲಿ- ಇಂದೋರ್ ಇಂದೋರ್ (ವಾರಾಂತ್ಯ ರೈಲು) ಎಕ್ಸ್‌ಪ್ರೆಸ್ ರದ್ದುಗೊಂಡಿವೆ. 17311 ಚೆನ್ನೈಯಿಂದ ವಾಸ್ಕೋ-ಡ-ಗಾಮಕ್ಕೆ ತೆರಳುವ ವಾರಾಂತ್ಯ ರೈಲು ಸಂಚಾರ ರದ್ದುಗೊಂಡಿದೆ. 12620 ಮತ್ಸ್ಯಗಂಧ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಶುಕ್ರವಾರ 2.25ಕ್ಕೆ ಹೊರಟಿದೆ. ಸಾವಂತ್‌ವಾಡಿ ರಸ್ತೆ/ವಾಸ್ಕೋ-ಡ- ಗಾಮ/ಮಡ್ಗಾನ್-ವೆಲಂಕಣಿ-,ಮಡ್ಗಾನ್/ವಾಸ್ಕೋ-ಡ-ಗಾಮ/ಸಾವಂತ್‌ವಾಡಿ ರಸ್ತೆ ವಿಶೇಷ ಸಾಪ್ತಾಹಿಕ ರೈಲಿಗೆ (00107/07315 ಮತ್ತು 00108) ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು ಮತ್ತು ಕುಂದಾಪುರದಲ್ಲಿ ನಿಲುಗಡೆ ನೀಡಲಾಗಿದೆ.