Advertisement
ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಮಳೆ ಪ್ರಮಾಣ ಗಮನಿಸಿದರೆ 2012 ವರ್ಷ ಹೊರತು ಪಡಿಸಿ2010ರಿಂದ 2020ರವರೆಗೆ ಸರಾಸರಿ 600 ಮಿ.ಮೀಗಿಂತ ಅಧಿಕ ಮಳೆ ಆಗಿದೆ. ಮಳೆ ಪ್ರಮಾಣದಲ್ಲಿ ನಾವು ಅದೃಷ್ಟವಂತರೆ ಆದರೆ, ಈ ರೀತಿ ಸಮೃದ್ಧವಾಗಿ ಬಿದ್ದಮಳೆಯನ್ನು ಸಂಗ್ರಹಿಸಿಕೊಳ್ಳುವುದು ಮಾತ್ರ ಆಗಿಲ್ಲ. ಮಳೆ ನೀರು ಸಂಗ್ರಹ ಮಾಡುವುದಕ್ಕೆ ಹಲವು ಮಾರ್ಗಗಳಿವೆ. ಇಚ್ಛಾಶಕ್ತಿಯ ಕೊರತೆಯಿಂದಾಗಿ ಆದ್ಯತೆ ಸಿಗುತ್ತಿಲ್ಲ. ಇದರ ಪರಿಣಾಮ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿಗೆ ಕಾರಣ ಎನ್ನುತ್ತಾರೆ ತಜ್ಞರು.
Related Articles
Advertisement
ನಗರದಲ್ಲಿ ನೀರು ಉಳಿಸಿಕೊಳ್ಳಲು ಸಾಕಷ್ಟು ಅವಕಾಶ ಇದೆ. ಈಗಾಗಲೇ ವಾಬಸಂದ್ರ, ಗವಿಕೆರೆ, ಕ್ಯಾಲಸನಹಳ್ಳಿ, ಬಂಡೆನೆಲಸಂದ್ರ ಸೇರಿದಂತೆ 13ಕ್ಕೂ ಹೆಚ್ಚು ಕೆರೆಗಳನ್ನುಅಭಿವೃದ್ಧಿಪಡಿಸಲಾಗಿದ್ದು, ಇವುಗಳಲ್ಲಿ ಬೇಸಿಗೆಯಲ್ಲೂನೀರು ಸಿಗುತ್ತಿದೆ ಎನ್ನುತ್ತಾರೆ ಕೆರೆಗಳ ಸಂರಕ್ಷಕ ಆನಂದ ಮಲ್ಲಿಗವಾಡ ಹೇಳುತ್ತಾರೆ.
ಕೆರೆಗಳನ್ನು ಅಭಿವೃದ್ಧಿ ಮಾಡುವುದರ ಜೊತೆಗೆ ಕೆರೆ ಮತ್ತು ಸಾರ್ವಜನಿಕರ ನಡುವೆ ಬಾಂಧವ್ಯ ವೃದ್ಧಿ ಮಾಡುವುದಕ್ಕೂ ಯೋಜನೆ ರೂಪಿಸಿಕೊಳ್ಳಲಾಗಿದೆ. ಅಲ್ಲದೆ, ಯಾವುದೇ ಕೆರೆ ಅಭಿವೃದ್ಧಿ ಮಾಡಿದರೂ ಕೆರೆಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಜೀವ ವೈವಿಧ್ಯತೆಗೆ ಪೂರಕವಾದ ಹಣ್ಣು ಬಿಡುವ ಸಸಿಗಳು ಸೇರಿದಂತೆ ಮಣ್ಣು ಸಡಿಲಿಕೆ ತಡೆಯುವ ಸಸಿಗಳನ್ನು ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಡಲಾಗುತ್ತಿದೆ ಎಂದು ಮಾಹಿತಿ ನೀಡುತ್ತಾರೆ. ನಗರದ ಅಂತರ್ಜಲ ಪ್ರಮಾಣ: ನಗರದಲ್ಲಿ ಕಳೆದ ಐದು ವರ್ಷಗಳ ಅಂತರ್ಜಲ ಪ್ರಮಾಣದಲ್ಲಿ ಏರುಪೇರಾಗಿದೆ. 2020ರಲ್ಲಿ ನಗರದಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆ ಆಗಿರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕೆಲವು ಕಡೆ ವೃದ್ಧಿಸಿರುವುದು ಅಂತರ್ಜಲ ನಿರ್ದೇಶನಾಲಯ ನೀಡಿರುವ ಅಂಕಿ- ಅಂಶದಲ್ಲಿ ಬೆಳಕಿಗೆ ಬಂದಿದೆ.
2020ರಲ್ಲಿ ಬೆಂಗಳೂರು ಪೂರ್ವದಲ್ಲಿ ಅಂತರ್ಜಲ (ಭೂಮಿಯ ಆಳದಲ್ಲಿ ನೀರು ವೃದ್ಧಿಸಿರುವ ಪ್ರಮಾಣ)ಮಟ್ಟ ವೃದ್ಧಿಸಿದೆ. 2019ರಲ್ಲಿ 28.17ರಲ್ಲಿ, 2020ರಲ್ಲಿ 45.75 ಪ್ರಮಾಣದಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಆಗಿದೆ. ಆದರೆ, ಇದೇ ಸಂದರ್ಭದಲ್ಲಿ ನಗರದ ವಿವಿಧೆಡೆ ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದು ಸಹ ವರದಿ ಆಗಿದೆ.
–ಹಿತೇಶ್ ವೈ