Advertisement

ಕರಾವಳಿಯಲ್ಲಿ ಮಂಜಿನಿಂದ ಕೂಡಿದ ವಾತಾವರಣ! ಕೆಲವೆಡೆ ಗುಡುಗು ಸಹಿತ ಮಳೆ

10:59 AM Nov 04, 2020 | sudhir |

ಮಂಗಳೂರು/ಉಡುಪಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಜಿನಿಂದ ಕೂಡಿದ ವಾತಾವರಣ ಇತ್ತು. ಜಿಲ್ಲೆಯ ಕೆಲವು ಕಡೆ ಮಂಗಳವಾರ ತಡ ರಾತ್ರಿ ಮಳೆಯಾಗಿದೆ. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.
ಮಂಗಳೂರು ನಗರದಲ್ಲಿಯೂ ಬೆಳಗ್ಗೆ ಮಂಜಿನಿಂದ ಕೂಡಿದ ವಾತಾವರಣ ಇತ್ತು. ಉಡುಪಿ ಜಿಲ್ಲೆಯ ಹಾಲಾಡಿಯಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗಿದೆ.

Advertisement

ಸುಳ್ಯದಲ್ಲಿ ಗುಡುಗು ಮಳೆ
ಸುಳ್ಯ: ಕಡಬ, ಪುತ್ತೂರು ಸುಳ್ಯ, ತಾಲೂಕಿನ ಹಲವೆಡೆ ಸೋಮವಾರ ರಾತ್ರಿ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಬಳ್ಪದಲ್ಲಿ ಗರಿಷ್ಠ 43 ಮಿ.ಮೀ., ಮಡಪ್ಪಾಡಿ 40, ಕಲ್ಲಾಜೆ 38, ಕಡಬ 37, ಮೆಟ್ಟಿನಡ್ಕ 36, ಸುಬ್ರಹ್ಮಣ್ಯ 32, ಅಯ್ಯನಕಟ್ಟೆ, ಬಾಳಿಲ, ಹಾಲೆಮಜಲು ತಲಾ 30, ಕೊಳ್ತಿಗೆ-ಎಕ್ಕಡ್ಕ 23, ವಾಲ್ತಾಜೆ- ಕಂದ್ರಪ್ಪಾಡಿ 20, ಕಲ್ಮಡ್ಕ 18, ಹರಿಹರ- ಮಲ್ಲಾರ 17, ಕೋಡಿಂಬಾಳ-ತೆಕ್ಕಡ್ಕ 12, ಚೊಕ್ಕಾಡಿ, ಎಣ್ಮೂರು ತಲಾ 10, ಕಲ್ಲಕಟ್ಟ 09, ಶಾಂತಿಗೋಡು ತಲಾ 06, ಮುಂಡೂರು 05, ಕೊಲ್ಲಮೊಗ್ರ 03, ಮುಳ್ಯ-ಅಜ್ಜಾವರ, ತೊಡಿಕಾನ ತಲಾ 02, ದೊಡ್ಡತೋಟ, ಬಲಾ°ಡು, 01 ಮಿ.ಮೀ.ನಷ್ಟು ಮಳೆ ದಾಖಲಾಗಿದೆ.

ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ, ಹಿಂಗಾರು ವೇಳೆ, ಚಳಿ ಆಗಮನದ ವೇಳೆ ಈ ರೀತಿ ಮಂಜಿನಿಂದ ಕೂಡಿದ ವಾತಾವರಣ ಇರುವುದು ಸಹಜ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next