Advertisement

ಮಳೆಯೇ ಮಂತ್ರಾಲಯ

04:21 PM Jun 30, 2018 | Team Udayavani |

ಮಳೆಯಿಂದ ಸೌಂದರ್ಯ ಸೃಷ್ಟಿಯಾಗುತ್ತೆ ಎನ್ನುವುದು ನಿಸರ್ಗ ನಿಯಮ. ಪುಟ್ಟ ತೊರೆ, ಬೆಳೊ°ರೆಯ ಜಲಪಾತ, ಉಕ್ಕುವ ನದಿ, ಕಣ್ಣುಕುಕ್ಕುವ ಹಸಿರು… ಇವೆಲ್ಲ ಮಳೆ ಬಿಡಿಸುವ ಚಿತ್ರಗಳು. ಆದರೆ, ಬೆಂಗಳೂರಿನಲ್ಲಿ ಎಷ್ಟೇ ಮಳೆ ಸುರಿದರೂ ಇಂಥ ರಮ್ಯ ಕಲಾಕೃತಿ ಅರಳುವುದೇ ಇಲ್ಲ. ಬೆಂಗಳೂರು ಎನ್ನುವುದು ಮಳೆಯ ಪಾಲಿಗೆ ಹಬ್ಬವೇ ಅಲ್ಲ. ಮಲೆನಾಡಿನಿಂದ ಬಂದವರಿಗೆ ಇಲ್ಲಿ ಹಬ್ಬದ ವಾತಾವರಣವೂ ಕಣ್ಣಿಗೆಟಕುವುದಿಲ್ಲ. ಅದಕ್ಕಾಗಿ ಇಲ್ಲಿನ ಒಂದಿಷ್ಟು ನಿಸರ್ಗಪ್ರಿಯರಿಗೆ ಮಳೆಯ ಹೊತ್ತಿನಲ್ಲಿ ಕಾಡು ನೆನಪಾಗುತ್ತೆ, ಮಲೆನಾಡಿನ ಮಳೆಯ ಹನಿಗಳು ಹೃದಯದಲ್ಲಿ ತಟಪಟ ಎನ್ನುತ್ತಾ ಹಳ್ಳಿಯಗೂಡನ್ನು ನೆನಪಿಸುತ್ತೆ.

Advertisement

 ಹೀಗೆ ಮೈಮನಗಳಲ್ಲಿ ಮಳೆಯೇ ಗುಂಗಾದಾಗ ಇವರೆಲ್ಲ ಈ ಬೆಂಗಳೂರಿನಲ್ಲಿ ಇರುವುದೇ ಇಲ್ಲ. ತತ್‌ಕ್ಷಣ ಜಾಗ ಖಾಲಿ ಮಾಡ್ತಾರೆ. ದೂರದ ಮಲೆನಾಡಿನ ಯಾವುದಾದರೂ ಬೆಟ್ಟದ ತಪ್ಪಲನ್ನು ಸೇರಿ, “ಮಳೆಹಬ್ಬ’ಕ್ಕೆ ಸಾಕ್ಷಿಯಾಗುತ್ತಾರೆ. ಇವರೊಂದಿಗೆ ರಾಜ್ಯದ ನಾನಾ ಭಾಗದ ಮಳೆಪ್ರಿಯರೂ ಒಟ್ಟುಗೂಡುತ್ತಾರೆ. ಬೆಂಗಳೂರಿನ ನಾಗರಾಜ್‌ ವೈದ್ಯ ಅವರು ಆಯೋಜಿಸುವ “ಮಳೆಹಬ್ಬ’ ಈ ಬಾರಿ ಶಿರಸಿಯಲ್ಲಿ ಜುಲೈ 7, 8 ರಂದು ಹಸಿರುಗಟ್ಟಲಿದೆ.

ಪರಿಕಲ್ಪನೆ ಹುಟ್ಟಿದ್ಹೇಗೆ?
“ಮಳೆಗಾಲದಲ್ಲಿ ವೇಳೆ ಮಲೆನಾಡಿನ ಇಂಚಿಂಚು ಜಾಗವೂ ಕಣ್ಣಿಗೆ ಹಬ್ಬ. ಮಲೆನಾಡಿಗರ ಪ್ರೀತಿ, ಉಪಚಾರಗಳೂ ಈ ಮಳೆಯೊಟ್ಟಿಗೇ ಬೆರೆತು ಮಲೆನಾಡು ಇನ್ನಷ್ಟು ಸೌಂದರ್ಯ ತುಂಬಿಕೊಳ್ಳುತ್ತದೆ. ಈ ಶ್ರೀಮಂತಿಕೆ ಹೊರಗಿನವರಿಗೂ  ಪರಿಚಯವಾಗಬೇಕು. ಜತೆಗೆ ಮಳೆ ಪ್ರವಾಸಕ್ಕೆ ಒಂದಷ್ಟು ಹೊಸ ಪರಿಕಲ್ಪನೆಯನ್ನು ಒದಗಿಸಬೇಕು ಎಂದು ಯೋಚಿಸಿದಾಗ ಮಳೆಹಬ್ಬದ ರೂಪುರೇಷೆ ಸಿದ್ಧವಾಯಿತು. ಕಳೆದವರ್ಷ ಸಣ್ಣ ಪ್ರಮಾಣದಲ್ಲಿ ನಮ್ಮ ಮನೆಯನ್ನೇ ಕೇಂದ್ರವಾಗಿರಿಸಿಕೊಂಡು ಹಬ್ಬ ಆಚರಿಸಿದ್ದೆವು. ಕ್ಲಿಕ್‌ ಆಯಿತು’ ಎನ್ನುತ್ತಾರೆ ನಾಗರಾಜ್‌ ವೈದ್ಯ.

ಈ ಸಲ ಎಲ್ಲಿ?
ಎಲ್ಲಿ ಎನ್ನುವುದಕ್ಕಿಂತ ಯಾರು ಜತೆಗಿರ್ತಾರೆ ಅನ್ನೋದು ತುಂಬಾ ಮುಖ್ಯ. ಈ ಸಲ “ಮಳೆಹಬ್ಬ’ ಶಿರಸಿ ಸಮೀಪದ ವಾನಳ್ಳಿಯಲ್ಲಿರುವ “ತವರು ಮನೆ’ ಹೋಂ ಸ್ಟೇನಲ್ಲಿ ನಡೆಯುತ್ತಿದೆ. ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ, ಗೋವಾ ಮುಂತಾದೆಡೆಯಿಂದ ಮಳೆಪ್ರಿಯರು ಬರುತ್ತಾರೆ. ಐಟಿ ಉದ್ಯೋಗಿಗಳು, ಪತ್ರಕರ್ತರು, ವ್ಯಾಪಾರಸ್ಥರು, ಉಪನ್ಯಾಸಕರು, ಕಿರುತೆರೆ ನಟರು, ತಂತ್ರಜ್ಞರು, ವಿದ್ಯಾರ್ಥಿಗಳು ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಜನರನ್ನು ಈ ಹಬ್ಬ ಒಂದೆಡೆ ಸೇರಿಸುತ್ತಿದೆ.

ಏನ್‌ ವಿಶೇಷ?
ಹೊಟ್ಟೆಪಾಡಿಗಾಗಿ ಮೆಟ್ರೋ ಪಾಲಿಟಿನ್‌ ಸಿಟಿ ಸೇರಿದವರು ತಮ್ಮ ಮೂಲಬೇರನ್ನು ಮರೆಯುತ್ತಿದ್ದಾರೆ. ಪುನಃ ಹಳ್ಳಿ ಜೀವನಕ್ಕೆ ಮರಳುವ ಆಸೆಯಿದ್ದರೂ ಅದು ಕೈಗೂಡದ ಕನಸು. ಇಂಥವರಿಗೆಲ್ಲ ಮಲೆನಾಡು ಮತ್ತೆ ಮತ್ತೆ ಕಾಡಬೇಕು. ನೇಗಿಲು ಕಟ್ಟಿ ಗದ್ದೆ ಉಳುಮೆ, ರೈತರ ಜೊತೆಗೆ ಕಷ್ಟ- ಸುಖ ಮಾತಾಡುವುದು, ಕೆಸರು ಗ¨ªೆಯಲ್ಲಿ ಕಬಡ್ಡಿ, ಕಂಬಳಿಕೊಪ್ಪೆ ಧರಿಸಿ ಚಾರಣ, ಜಲಪಾತ ವೀಕ್ಷಣೆ, ರಾತ್ರಿ ಹೊಡಸಲು ಒಟ್ಟಿ, ಗೇರುಬೀಜ, ಹಲಸಿನ ಬೇಳೆಗಳನ್ನ ಬೇಯಿಸಿ ತಿನ್ನುವುದು… ಹೀಗೆ ಮಲೆನಾಡಿನ ಬಾಲ್ಯದ ಭಾವನಾತ್ಮಕ ಸನ್ನಿವೇಶಗಳನ್ನು ಮತ್ತೆ ಕಣ್ಮುಂದೆ ತರುವುದು ಇದರ ಉದ್ದೇಶ.
 ಸಂಪರ್ಕ: ಮೊ. 8762329546

Advertisement

ನಾನು ಬೆಂಗಳೂರಿನಲ್ಲಿದ್ದರೂ ಮಲೆನಾಡಿನ ಕಡೆಯವನಾದ್ದರಿಂದ ಆಗಾಗ ಚಾರಣಕ್ಕೆ ಹೋಗುತ್ತಿರುತ್ತೇನೆ. ಒಬ್ಬನೇ ಹೋಗುವುದಕ್ಕಿಂತ ಸಮಾನ ಮನಸ್ಕರ ಜೊತೆ ಹೋದರೆ ಖುಷಿ ಹೆಚ್ಚು. “ಮಳೆಹಬ್ಬ’ ಪರಿಕಲ್ಪನೆ ಈ ಕಾರಣದಿಂದ ಹುಟ್ಟಿತು.
 ● ನಾಗರಾಜ ವೈದ್ಯ, ಆಯೋಜಕರು

Advertisement

Udayavani is now on Telegram. Click here to join our channel and stay updated with the latest news.

Next