Advertisement

ವಯನಾಡಿನಲ್ಲಿ ಮಳೆ ಕಬಿನಿ ಜಲಾಶಯಕ್ಕೆ ಭಾರೀ ನೀರು

09:48 AM Jun 20, 2021 | Team Udayavani |

ಹುಣಸೂರು: ಕಬಿನಿ ಜಲಾಶಯದ ಒಳ ಹರಿವು 16ಸಾವಿರ ಕ್ಯೂಸೆಕ್ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ 4ಕ್ರಸ್ಡ್ ಗೇಟ್ ಗಳ ಮೂಲಕ 5ಸಾವಿರ ಕ್ಯೂಸೆಕ್ ನೀರು ಹೊರ ಹರಿಯ ಬಿಡಲಾಗಿದೆ.

Advertisement

ನದಿಪಾತ್ರದ ತಗ್ಗು ಪ್ರದೇಶದಲ್ಲಿರುವ ಜನ ಜಾನುವಾರುಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಕಬಿನಿ ಜಲಾಶಯದ ಕಾರ್ಯಪಾಲಕ ಅಭಿಯಂತೆ ಸುರೇಶ್ ಬಾಬು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಕೇರಳ ರಾಜ್ಯದವೈನಾಡಿನಲ್ಲಿ ನಿರಂತರ ಮುಂಗಾರು ಮಳೆ ಜೊತೆಗೆ ಚಂಡಮಾರುತ ಆರಂಭಗೊಂಡಿರುವುದರಿಂದ ಜಲಾಶಯದ ಒಳಹರಿವು ಕಳೆದ ನಾಲ್ಕೈದು ದಿನಗಳಿಂದ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಒಳ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗಲಿರುವುದರಿಂದ ಸುರಕ್ಷತಾ ದೃಷ್ಟಿಯಿಂದ ಮುನ್ನೆಚ್ಚರಿಕೆ ನೀಡಲಾಗಿದೆ.

ನದಿ ತಗ್ಗು ಪ್ರದೇಶದಲ್ಲಿ ವಾಸಿಸುವ ಜನ ಜಾನುವಾರುಗಳ ಹಿತಾದೃಷ್ಟಿಹಿಂದ ಜನ ಸುರಕ್ಷತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಜಲಾಶಯಗ ಗರಿಷ್ಠ ನೀರಿನ ಮಟ್ಟ 2284 ಅಡಿಗಳಿದ್ದು ಇಂದಿನ ನೀರಿನ ಶೇರಣೆ 2275 ಅಡಿ ತಲುಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next