Advertisement

ಮೂಡುಬಿದಿರೆಯಲ್ಲಿ ಮಳೆ ಅವಾಂತರ: ಆಲದ ಮರ ಬಿದ್ದು ಹಣ್ಣಿನಂಗಡಿ ನೆಲಸಮ

10:19 AM Jul 08, 2022 | Team Udayavani |

ಮೂಡುಬಿದಿರೆ: ಇಲ್ಲಿನ ರಾಷ್ಟೀಯ ಹೆದ್ದಾರಿ 169 ಹಾದು ಹೋಗುವ ತೋಡಾರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಗಾಳಿಗೆ ಆಲದಮರವೊಂದು  ಬುಡಸಮೇತ ಧರೆಗುರುಳಿ ಅಡಿಯಲ್ಲಿದ್ದ ಹಣ್ಣಿನ ಅಂಗಡಿ ಸಂಪೂರ್ಣ ಜಖಂಗೊಂಡಿದೆ.

Advertisement

ಆಲದ ಮರದ ಬುಡದಲ್ಲಿಯೇ ತೋಡಾರಿನ ಅಬೂಬಕ್ಕರ್ ಎಂಬವರು ಹಣ್ಣಿನ ವ್ಯಾಪಾರ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ಬೀಸಿದ ಗಾಳಿಯ ರಭಸಕ್ಕೆ ಬುಡ ಸಮೇತ ಆಲದ ಮರದ ಬಿದ್ದಿದೆ.

ಘಟನೆಯಿಂದಾಗಿ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಕೂಡಲೇ ಸ್ಥಳೀಯರಿಂದ ಮಿಂಚಿನ ಕಾರ್ಯಾಚರಣೆ ನಡೆಸಿ ಮರದ ಗೆಲ್ಲುಗಳ ತೆರವಿಗೆ ಕಾರ್ಯಾರಂಭವಾಗಿದ್ದು, ಸುಗಮ ವಾಹನ ಸಂಚಾರಕ್ಕಾಗಿ ಪಕ್ಕದಲ್ಲೇ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:ನೇತ್ರಾವತಿ ನದಿ ಕುರಿತು ವಿವರಿಸಿದ ಮಂಗಳೂರು ನಗರ ಪೋಲಿಸ್ ಕಮಿಷನರ್ ಎನ್. ಶಶಿಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next