Advertisement

ನಗರದ ಹಲವೆಡೆ ವರ್ಷಧಾರೆ

06:03 AM Jun 12, 2020 | Lakshmi GovindaRaj |

ಬೆಂಗಳೂರು: ಬಂಗಾಳಕೊಲ್ಲಿ ಭಾಗದಲ್ಲಿ ವಾಯುಭಾರ ಕುಸಿತ ಹಾಗೂ ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ಧಾರಾಕಾರ ಮಳೆ ಸುರಿಯಿತು. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ನಗರದ  ವಿವಿಧೆಡೆ ಹತ್ತಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಜಯನಗರ 4ನೇ ಬ್ಲಾಕ್‌, ಸಂಜಯನಗರ, ಬಸವೇಶ್ವರನಗರದ ಶಂಕರ ಮಠ ವೃತ್ತ, ಮಲ್ಲೇಶ್ವರ 15ನೇ ಕ್ರಾಸ್‌ ಸೇರಿದಂತೆ ಎಂಟು ಕಡೆ ಮರ ಮತ್ತು ಮರ ಕೊಂಬೆ ಬಿದ್ದಿವೆ. ಆದರೆ,  ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ. ಎ

Advertisement

ಎಲ್ಲೆಲ್ಲಿ ಎಷ್ಟು ಮಳೆ?: ಹೆಮ್ಮಿಗೆಪುರ ಹಾಗೂ ವಿದ್ಯಾಪೀಠದಲ್ಲಿ 24ಮಿ.ಮೀ., ಜಕ್ಕೂರು 22 ಮಿ.ಮೀ., ಎಚ್‌ಎಂಟಿ ವಾರ್ಡ್‌, ನಾಯಂಡನಹಳ್ಳಿ, ಆರ್‌. ಆರ್‌.ನಗರದಲ್ಲಿ 22 ಮಿ.ಮೀ., ಚೊಕ್ಕ ಸಂದ್ರದಲ್ಲಿ 33 ಮಿ.ಮೀ., ಯಲಹಂಕ ದಲ್ಲಿ 30 ಮಿ.ಮೀ., ಕೆಂಗೇರಿ 29, ಅಟ್ಟೂರು ಹಾಗೂ ವಿದ್ಯಾರಣ್ಯಪುರದಲ್ಲಿ 28.5 ಮಿ.ಮೀ., ಕೋಣನಕುಂಟೆ 28 ಮಿ. ಮೀ., ಚೌಡೇಶ್ವರಿ ವಾರ್ಡ್‌ನಲ್ಲಿ 24.50 ಮಿ.ಮೀ., ಶೆಟ್ಟಿಹಳ್ಳಿ 21 ಮಿ.ಮೀ, ಕುಮಾರಸ್ವಾಮಿ ಲೇಔಟ್‌ ಹಾಗೂ ಬಸವನ ಗುಡಿ 20  ಮಿ.ಮೀ ಮಳೆಯಾಗಿದೆ.

ಇನ್ನೂ 3 ದಿನ ಮಳೆ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next