Advertisement
ರವಿವಾರ ತಡರಾತ್ರಿ ಮಂಗಳೂರು, ಕಂಕನಾಡಿ, ಬಿ.ಸಿ. ರೋಡ್, ಮಾಣಿ, ಪುತ್ತೂರು, ಉಪ್ಪಿನಂಗಡಿ, ವೇಣೂರು, ಸಜಿಪಮೂಡ, ಮಣಿನಾಲ್ಕೂರು, ನಾವೂರು, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಕಕ್ಕೆಪದವು, ಗರಡಿ, ಪೂಂಜಾಲಕಟ್ಟೆ, ಮೂಡುಬಿದಿರೆ, ಕಾರ್ಕಳ, ಉಳ್ಳಾಲ, ಕೋಟೆಕಾರ್, ಬೀರಿ, ಸಿದ್ದಕಟ್ಟೆ, ಸುರತ್ಕಲ್, ಗಂಟಾಲ್‌ಕಟ್ಟೆ, ಪಡುಬಿದ್ರಿ, ವಿಟ್ಲ, ಕನ್ಯಾನ, ಸುಳ್ಯ, ಬೆಳ್ಳಾರೆ, ವೇಣೂರು, ಕಡಬ, ಕಾಪು, ಹಳೆಯಂಗಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಯಾಗಿದೆ. ಸೋಮವಾರ ಬೆಳಗ್ಗೆ ಕೂಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಮಳೆ ಯಾಗಿದ್ದು, ಸಂಜೆ ವೇಳೆಗೆ ವಿವಿಧೆಡೆ ಮೋಡ ಕವಿದ ವಾತಾವರಣ ಇತ್ತು.
ಸೋಮವಾರ ಮುಂಜಾನೆ ಸುರಿದ ಮಳೆಗೆ ಕಾಟಿಪಳ್ಳ ಎರಡನೇ ಬ್ಲಾಕ್‌ನ ಜೈಸನ್ ಎಂಬವರ ಮನೆ ಸಮೀಪದ ಕಾಂಕ್ರೀಟ್ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿ ಬಿರುಕು ಬಿಟ್ಟಿದೆ. ತಡಂಬೈಲ್ ಬಳಿಯ ನಿವಾಸಿ ಉಷಾ ಭಾಸ್ಕರ್ ಅವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿಯಾಗಿದೆ. ಇರಾ ಗ್ರಾಮದ ಕೆಂಜಿಲ ಬಂಡಶಾಲೆ ನಿವಾಸಿ ರಾಧಮ್ಮ ಅವರ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ. ಮನೆಯಲ್ಲಿದ್ದ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ 3 ದಿನಗಳ ಕಾಲ ಕರಾವಳಿ ಸಹಿತ ಮಲೆನಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಿದೆ. ರವಿವಾರ ವಾಡಿಕೆಯ ಗರಿಷ್ಠ ಉಷ್ಣಾಂಶಕ್ಕಿಂತ ಶೇ.3ರಷ್ಟು ಹೆಚ್ಚಿತ್ತು. ಆದರೆ ಮಳೆ ಬಂದ ಕಾರಣ ಜಿಲ್ಲೆಯಲ್ಲಿ ಉಷ್ಣಾಂಶ ಕಡಿಮೆಯಾಗಿದೆ. ಸೋಮ ವಾರ ಜಿಲ್ಲೆ ಯಲ್ಲಿ 34 ಡಿ.ಸೆ. ಗರಿಷ್ಠ ಉಷ್ಣಾಂಶ, 24 ಡಿ.ಸೆ. ಕನಿಷ್ಠ ಉಷ್ಣಾಂಶ ಇತ್ತು.
Related Articles
ಉಡುಪಿ: ಸೋಮವಾರ ಜಿಲ್ಲೆಯ ವಿವಿಧೆಡೆ ಮಳೆ ಬಂದಿದೆ. ತೆಕ್ಕಟ್ಟೆ, ಶಿರ್ವ, ಶಿರೂರು, ಬೈಂದೂರು, ಪಡುಬಿದ್ರಿ, ಕಟಪಾಡಿ, ಕಾಪು, ಕಾರ್ಕಳ, ಬ್ರಹ್ಮಾವರ, ಉಡುಪಿ ಮೊದಲಾದೆಡೆ ಸಾಮಾನ್ಯ ಮಳೆ ಯಾಗಿತ್ತು. ಸಿದ್ದಾಪುರ, ಹೆಬ್ರಿಯಲ್ಲಿ ಭಾರೀ ಪ್ರಮಾಣದ ಗುಡುಗಿನೊಂದಿಗೆ ಹನಿಹನಿ ಮಳೆ ಬಂದಿದೆ.
Advertisement
ಕಾಸರಗೋಡಿನಲ್ಲಿ ಮಳೆ; ಸಿಡಿಲಿನಿಂದ ಹಾನಿಕುಂಬಳೆ: ಕಾಸರಗೋಡು ಜಿಲ್ಲೆ ಯಲ್ಲಿ ಸೋಮವಾರ ಮುಂಜಾನೆ ಸುರಿದ ಬೇಸಗೆ ಮಳೆಯಿಂದ ಇಳೆ ಅಲ್ಪ ತಂಪಾಯಿತು. ಕೆಲವು ಕಡೆ ಗಳಲ್ಲಿ ಸಿಡಿಲಿನಿಂದ ಮನೆಗಳಿಗೆ ಹಾನಿಗೀಡಾದ ವರದಿಯಾಗಿದೆ. ಪೆರ್ಲದ ಬಜಕೂಡ್ಲು ಎಂಬಲ್ಲಿ ಲಕ್ಷ್ಮಣ ನಾಯ್ಕರ ಪತ್ನಿ ಕಮಲಾ (55) ಸಿಡಿಲಾಘಾತದಿಂದ ಪ್ರಜ್ಞಾಹೀನ ರಾದರು. ಅವರನ್ನು ಪೆರ್ಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರ ಮನೆ ಬಳಿಯ ಮರಕ್ಕೆ ಸಿಡಿಲು ಬಡಿದಿದ್ದು, ಬಾವಿಯ ಪಂಪು, ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಅಡೂರು ಕೊರತಿಮೂಲೆ ದುಗ್ಗಮ್ಮ ಎಂಬವರ ಮನೆಗೆ ಸಿಡಿಲು ಬಡಿದು
ಮನೆ ಗೋಡೆ ಬಿರುಕು ಬಿಟ್ಟಿರುವು ದಲ್ಲದೆ ಟಿವಿ ಮತ್ತು ವಿದ್ಯುತ್ ಉಪ ಕರಣಗಳಿಗೆ ಹಾನಿಯಾಗಿದೆ.