Advertisement
ಮಧ್ಯಾಹ್ನ 3ರ ಸುಮಾರಿಗೆ ಗುಡುಗು, ಮಿಂಚಿನಿಂದ ಆರಂಭವಾದ ಮಳೆ ಒಂದೂವರೆ ಗಂಟೆಗೂ ಅಧಿಕ ಕಾಲ ಸುರಿಯಿತು. ಕಾಫಿಯ ಹೂಮಳೆ ಎಂದೆ ಕರೆಯಲ್ಪಡುವ ರೇವತಿ ಮಳೆ ಸ್ವಾಭಾವಿಕವಾಗಿ ಮಾ.31ಕ್ಕೆ ಆರಂಭವಾಗುತ್ತದೆ.ಈ ವರ್ಷ ಎರಡು ದಿನ ಮುಂಚಿತವಾಗಿ ಆರಂಭವಾಗಿದೆ ಎಂಬುದು ಬೆಳೆಗಾರರ ಅಭಿಪ್ರಾಯ. ಮಳೆ ಸುರಿದಿದ್ದರಿಂದ ಕಾಫಿ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸುತ್ತಮುತ್ತಲ ಪ್ರದೇಶದಲ್ಲಿ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ಬಾಳೆಹೊನ್ನೂರಿನ ರೇಣುಕಾ ನಗರದಲ್ಲಿ ತೆಂಗಿನ ಮರವೊಂದು ಹೊತ್ತಿ ಉರಿದಿದೆ. ಹಾವೇರಿ ತಾಲೂಕಿನ ವಿವಿಧೆಡೆಯೂ ಸಂಜೆ ವೇಳೆ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದೆ. ಗದಗಿನಲ್ಲಿ 1 ಸೆಂ.ಮೀ.ನಷ್ಟು ಮಳೆ ಸುರಿದಿದೆ Advertisement
ಚಿಕ್ಕಮಗಳೂರು, ಹಾವೇರಿಯಲ್ಲಿ ಮಳೆ
08:55 AM Mar 30, 2019 | Team Udayavani |