Advertisement

ಶಾಲಾ-ಕಾಲೇಜುಗಳಲ್ಲಿ ಮಳೆಕೊಯ್ಲು ಮಾಹಿತಿ ಕಾರ್ಯಾಗಾರ

12:14 AM Aug 25, 2019 | Team Udayavani |

ನಿಡ್ಡೋಡಿ ಶ್ರೀ ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆ, ಹಳೆ ವಿದ್ಯಾರ್ಥಿ ಸಂಘ ಹಾಗೂ ನಿಡ್ಡೋಡಿ ಎಸ್‌.ಎನ್‌. ಪಬ್ಲಿಕ್‌ ಶಾಲೆ ಸಹಯೋಗದಲ್ಲಿ ಶುಕ್ರವಾರ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಮುದ್ದು ಕೃಷ್ಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಳೆಕೊಯ್ಲು ಬಗ್ಗೆ ಮಾಹಿತಿಯನ್ನು ನೀಡಲಾಯಿತು.

Advertisement

ಎಂಜಿನಿಯರ್‌ ಭರತ್‌ ಜೆ. ಮಳೆಕೊಯ್ಲು ಹಾಗೂ ನೀರಿನ ಮಿತವಾದ ಬಳಕೆ ವಿಷಯದ ಕುರಿತಂತೆ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಅರಿವು ಮೂಡಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಯದುನಾರಾಯಣ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಆರ್‌. ಪ್ರಸಾದ್‌, ನಿವೃತ್ತ ಅಧ್ಯಾಪಕ ಕರುಣಾಕರ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಶ್ಯಾಮ ಸುಂದರ್‌ ರಾವ್‌, ಉದ್ಯಮಿ ಎಂ.ಬಿ. ಕರ್ಕೇರ, ಸಮಾಜ ಸೇವಕಿ ಶಾಂಭವಿ ಎಸ್‌. ಶೆಟ್ಟಿ, ಚಂದ್ರಹಾಸ್‌ ಜೋಗಿ, ಶ್ರೀಪಾದ ಮಂಜನ್‌ಬೈಲ್, ಕಸ್ತೂರಿ ಸುಭಾಷ್‌, ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್‌ ಕೆ. ಸುವರ್ಣ, ಪಾರ್ವತಿ, ತೀರ್ಪುಗಾರರಾದ ಸಾವಿತ್ರಿ ಪ್ರಭು, ಸದಾನಂದ ಪೂಜಾರಿ, ಸತೀಶ್‌ ನೀರ್ಕೆರ್‌, ಶಾಲಾ ಮುಖ್ಯ ಶಿಕ್ಷಕಿ ಸೌಮ್ಯಾ ಎ.ಕೆ., ಸೌಮ್ಯಾ ಉಪಸ್ಥಿತರಿದ್ದರು.

ಕೊಡಿಯಾಲಬೈಲ್: ಮಾಹಿತಿ ಕಾರ್ಯಾಗಾರ
ಕೊಡಿಯಾಲಬೈಲ್ ಸೈಂಟ್ ಅಲೋಶಿಯಸ್‌ ಕಾಲೇಜಿನ ‘ಅಮರ್ಥ’ ಅರ್ಥಶಾಸ್ತ್ರ ಸಂಘದ ಉದ್ಘಾಟನ ಸಮಾರಂಭದಲ್ಲಿ ಮಳೆಕೊಯ್ಲು ಬಗ್ಗೆ ಮಾಹಿತಿ ಕಾರ್ಯಾಗಾರ ಶುಕ್ರವಾರ ನಡೆಯಿತು.

ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮಾಹಿತಿ ನೀಡಿದರು. ಮಳೆಕೊಯ್ಲು ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿವರಿಸಿದ ಅವರು, ಮಳೆಕೊಯ್ಲು ಅಗತ್ಯ, ಇದರಿಂದ ಭವಿಷ್ಯದಲ್ಲಾಗುವ ಪ್ರಯೋಜನಗಳು ಹಾಗೂ ಮಳೆಕೊಯ್ಲು ಅಳವಡಿಸಬೇಕಾದ ಸರಳ ವಿಧಾನಗಳ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸೇರಿ ಸುಮಾರು 50 ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ನೀರುಳಿತಾಯಕ್ಕೆ ದಾರಿ

ಉದಯವಾಣಿ ಸುದಿನದ ಮನೆ ಮನೆಗೆ ಮಳೆಕೊಯ್ಲು ಅಭಿಯಾನ ಯಶಸ್ಸು ಕಂಡಿದೆ. ನಗರದಲ್ಲಿ ಜಲಕ್ಷಾಮದಿಂದ ಕಂಗಲಾಗಿದ್ದ ಜನರಿಗೆ ನೀರುಳಿತಾಯಕ್ಕೆ ದಾರಿ ಹೇಗೆ ಎಂಬುದನ್ನು ಮತ್ತು ನೀರಿನ ಅರಿವು ಪ್ರತಿಯೊಬ್ಬರಿಗೂ ಇರಬೇಕೆಂಬ ಜಾಗೃತಿಯನ್ನು ಮನೆ ಮನೆಗೆ ಮಳೆಕೊಯ್ಲು ಅಭಿಯಾನದ ಮೂಲಕ ತಿಳಿಸಿಕೊಟ್ಟ ಉದಯವಾಣಿಗೆ ಧನ್ಯವಾದಗಳು.
– ಲತಾ ಎಸ್‌., ಅತ್ತಾವರ

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

Advertisement

ಆ. 28: ಮಳೆಕೊಯ್ಲು ಮಾಹಿತಿ ಕಾರ್ಯಾಗಾರ
ಲಯನ್ಸ್‌ ಕ್ಲಬ್‌ ಮಂಗಳೂರು ವತಿಯಿಂದ ಮಳೆಕೊಯ್ಲು ಕುರಿತಾದ ಮಾಹಿತಿ ಕಾರ್ಯಾಗಾರ ಆ. 28ರಂದು ಸಂಜೆ 7.30ಕ್ಕೆ ಮಲ್ಲಿಕಟ್ಟೆ ಲಯನ್ಸ್‌ ಸೇವಾ ಮಂದಿರದಲ್ಲಿ ನಡೆಯಲಿದೆ. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಲಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next