Advertisement

ನಗರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಳೆಕೊಯ್ಲು ಮಾಹಿತಿ ಕಾರ್ಯಾಗಾರ

12:36 AM Sep 05, 2019 | Team Udayavani |

ಕೆನರಾ ಕಾಲೇಜಿನ ಯೂತ್‌ ರೆಡ್‌ ಕ್ರಾಸ್‌ ಹಾಗೂ ರಾಷ್ಟ್ರೀಯ ಸೇವಾ ಯೋಜನ ಘಟಕಗಳ ಆಶ್ರಯದಲ್ಲಿ ಮಳೆಕೊಯ್ಲು ಮಾಹಿತಿ ಕಾರ್ಯಗಾರ ಇತ್ತೀಚೆಗೆ ನಡೆಯಿತು.

Advertisement

ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ಕಲ್ಬಾವಿ ರಾಜೇಂದ್ರ ರಾವ್‌, ಮಳೆ ಕೊಯ್ಲು ಕುರಿತು ಮಾಹಿತಿ ನೀಡಿದರು. ಕಾಲೇಜಿನ ಆವರಣದಲ್ಲಿ ಮಳೆಕೊಯ್ಲಿನ ಆವಶ್ಯಕತೆ ಮತ್ತು ಅಳವಡಿಕೆಯ ಬಗ್ಗೆ ಸೂಕ್ತ ಸಲಹೆ ನೀಡಿದರು. ನೀರಿನ ಅಭಾವದಿಂದಾಗಿ ತಲೆದೋರುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ| ಕೆ.ವಿ. ಮಾಲಿನಿ ಅಧ್ಯಕ್ಷತೆ ವಹಿಸಿದ್ದರು.

ಯೂತ್‌ ರೆಡ್‌ ಕ್ರಾಸ್‌ ಘಟಕದ ಸಂಯೋಜಕಿಯರಾದ ಸ್ಮಿತಾ ಎಂ., ರೂಪಾಶ್ರೀ ಕೆ.ಪಿ., ರಾಷ್ಟ್ರೀಯ ಯೋಜನಾಧಿಕಾರಿಗಳಾದ ಸೀಮಾ ಪ್ರಭು ಎಸ್‌., ವಿಂಧ್ಯಾ ಬಿ.ಬಿ. ಮೊದಲಾದವರು ಉಪಸ್ಥಿತರಿದ್ದರು.

ಭವ್ಯಾ ಆರ್‌. ಪೂಜಾರಿ ಸ್ವಾಗತಿಸಿದರು. ದೀಕ್ಷಾ ವಂದಿಸಿದರು. ಯೂತ್‌ ರೆಡ್‌ಕ್ರಾಸ್‌ ಘಟಕದ ವಿದ್ಯಾರ್ಥಿಗಳ ಕಾರ್ಯದರ್ಶಿ ನೇಹಾ ಕಾರ್ಯಕ್ರಮ ನಿರೂಪಿಸಿದರು.

Advertisement

ನಗರದ ಸಂತ ಅಲೋಶಿಯಸ್‌ ಸಂಧ್ಯಾ ಕಾಲೇಜಿನಲ್ಲಿ ಎನೆಸ್ಸೆಸ್‌ ಹಾಗೂ ಯೋಗದ ಆಶ್ರಯದಲ್ಲಿ ಮಳೆಕೊಯ್ಲು ಮಾಹಿತಿ ಕಾರ್ಯಾಗಾರ ನಡೆಯಿತು.

ಬಲ್ಮಠ ಮಹಿಳಾ ಪ್ರಥಮ ದರ್ಜೆಕಾಲೇಜಿನ ಪ್ರಾಂಶುಪಾಲ ಪ್ರೊ| ಜಗದೀಶ ಬಾಳ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಮಳೆಕೊಯ್ಲು ಅಳವಡಿಕೆಯ ಆವಶ್ಯಕತೆ ಮತ್ತು ನೀರಿನ ಅಭಾವದಿಂದಾಗಿ ತಲೆದೋರುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಸಹಿತ ಮಾಹಿತಿ ನೀಡಿದರು. ಸಂತ ಅಲೋಶಿಯಸ್‌ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ಮನೋಹರ್‌ ಸೆರಾವೊ, ಎನೆಸ್ಸೆಸ್‌ ಘಟಕದ ಅಧ್ಯಕ್ಷ ಕಿಶೋರ್‌ಚಂದ್ರ, ಯೋಗ ಅಸೋಸಿಯೇಶನ್‌ ಅಧ್ಯಕ್ಷೆ ಕವಿತಾ ಮೊದಲಾದವರು ಉಪಸ್ಥಿತರಿದ್ದರು.

ಪೂಜಾ ಸ್ವಾಗತಿಸಿದರು. ಯೋಗ ಸಂಘದ ಕಾರ್ಯದರ್ಶಿ ಕೌಶಿಕ್‌ ವಂದಿಸಿದರು. ಅಂಕಿತಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next