Advertisement

ಮಳೆಗೆ ನೆಲಕ್ಕುರುಳಿದ ಭತ್ತ; ರೈತ ಕಂಗಾಲು

05:58 PM Oct 21, 2020 | Suhan S |

ಸಿಂಧನೂರು: ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಚಿತ್ತಿ ಮಳೆಗೆ ಭತ್ತದ ಬೆಳೆ ಸಂಪೂರ್ಣ ನೆಲಕ್ಕುರುಳಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

Advertisement

ತಾಲೂಕಿನಲ್ಲಿ ಮಸ್ಕಿ ಭಾಗದ ನಾಲ್ಕು ಹೋಬಳಿ ಸೇರಿದಂತೆ ಒಟ್ಟು 72, 837 ಹೆಕ್ಟೇರ್‌ ಭತ್ತ ಬೆಳೆಯಲಾಗಿದೆ. ತೊಗರಿ 9464 ಹೆಕ್ಟೇರ್‌, ಹತ್ತಿ5276 ಹೆಕ್ಟೇರ್‌ನಷ್ಟು ಬಿತ್ತನೆ ಮಾಡಲಾಗಿದೆ. ಆದರೆವರುಣನ ಮುನಿಸು ರೈತರ ಮೇಲೆ ಹೆಚ್ಚಾಗಿದ್ದು, 350 ಹೆಕ್ಟೇರ್‌ ಭತ್ತ, 60 ಹೆಕ್ಟೇರ್‌ ಜೋಳ, 125ಹೆಕ್ಟೇರ್‌ ತೊಗರಿ ಹಾಗೂ 110 ಹೆಕ್ಟೇರ್‌ನಷ್ಟು ಹತ್ತಿಬೆಳೆ ನಷ್ಟವಾದ ಬಗ್ಗೆ ತಿಳಿದುಬಂದಿದೆ.ಬೆಳೆಗಳು ಸಂಪೂರ್ಣ ನೆಲಸಮ ಆಗಿರುವುದು ಕಂಡುಬರುತ್ತಿದೆ

ತಾಲೂಕಿನ ನೀರಾವರಿ ಆಶ್ರಿತ ಮಲ್ಲಾಪುರ, ಬೂತಲದಿನ್ನಿ, ಬಸ್ಸಾಪುರ, ಪಗಡದಿನ್ನಿ, ಜವಳಗೇರಾ,ಗಾಂಧಿ ನಗರ, ಹಂಚಿನಾಳಕ್ಯಾಂಪ್‌, ಧಡೆಸೂಗುರು, ಕೆಂಗಲ್‌, ಮುಕ್ಕುಂದಾ, ಸಾಲಗುಂದಾ,ಸೋಮಲಾಪುರ ಸೇರಿದಂತೆ ಇತರ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ನೂರಾರು ಎಕರೆ ಭತ್ತದ ಬೆಳೆ ಮಳೆಯಿಂದ ನೆಲಕಚ್ಚಿದೆ.

ಒಣ ಬೇಸಾಯದ ಹತ್ತಿಗುಡ್ಡ, ಹಿರೇಬೇರಗಿ, ಚಿಕ್ಕಬೇರಗಿ, ಕಲ್ಮಂಗಿ, ಬಪೂ³ರು, ಗುಡಗಲದಿನ್ನಿ, ಗುಂಡ, ಸಂಕನಾಳ, ರತ್ನಾಪುರ, ಬುಕ್ಕನಹಟ್ಟಿ, ಊಮಲೂಟಿ ಸೇರಿದಂತೆ ಇತರ ಗ್ರಾಮಗಳಲ್ಲಿ ತೊಗರಿ, ಹತ್ತಿ, ಕಡಲೆ, ಜೋಳ ಸೇರಿದಂತೆ ಇತರೆ ಬೆಳೆ ಬೆಳೆಯಲಾಗಿದೆ. ಕಳೆದ ವಾರ ಹಾಗೂ ಸೋಮವಾರ ರಾತ್ರಿ ಸುರಿದ ಮಳೆಯಿಂದ ಬೆಳೆಗಳೆಲ್ಲ ಸಂಪೂರ್ಣ ನೀರಿನಲ್ಲಿ ಮುಳುಗಿವೆ.

ಇನ್ನು ಕೆಲ ಬೆಳೆಗಳಿಗೆ ಕೀಟಬಾಧೆ ತಗಲುವಂತಾಗಿದೆ. ಮಳೆಗೆ ತೊಗರಿ, ಹತ್ತಿ ಹೂಉದುರುತ್ತಿದ್ದು ಇಳುವರಿ ಕಡಿಮೆಯಾಗುವ ಆತಂಖ ಎದುರಾಗಿದೆ. ಇದೀಗ ಹಿಂಗಾರಿನಲ್ಲಿ ಬಿತ್ತಿದಕಡಲೆ ಹಾಗೂ ಜೋಳದ ಬೆಳೆಗಳು ನಷ್ಟವಾಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಳೆಇಲ್ಲದೇ ಹಾಗೂ ಕಾಲುವೆಗೆ ನೀರಿಲ್ಲದೇ ರೈತರು ಪರದಾಡುತ್ತಿದ್ದರು. ಈ ಬಾರಿ ಉತ್ತಮ ಮಳೆಯಾಗಿದೆ. ಜೊತೆಗೆ ಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ದೊಡ್ಡ ಆಘಾತವನ್ನುಂಟು ಮಾಡಿದೆ.

Advertisement

ಒತ್ತಾಯ: ಕೂಡಲೇ ಬೆಳೆ ನಷ್ಟಕ್ಕೀಡಾದ ರೈತರಿಗೆ ಸರ್ಕಾರ ಹಾಗೂ ಸಂಬಂ ಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.

ಸೋಮವಾರ ರಾತ್ರಿ ಸುರಿದ ಮಳೆಗೆ ಕಟಾವಿಗೆ ಬಂದಿದ್ದ 12 ಎಕರೆ ಭತ್ತದ ಬೆಳೆ ಸಂಪೂರ್ಣ ನೆಲಕ್ಕುರುಳಿದೆ. ಇದರಿಂದಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಭತ್ತದ ಬೆಳೆಗೆ ಪರಿಹಾರ ನೀಡಬೇಕು. -ಮಲ್ಲಣ್ಣ ಅಮರಪ್ಪ, ರೈತ, ಮಲ್ಲಾಪುರ

ತಾಲೂಕಿನಲ್ಲಿ ಇನ್ನು ಎರಡ್ಮೂರು ದಿನಗಳ ಕಾಲ ಮಳೆ ಹೆಚ್ಚಾಗುವ ಸಂಭವವಿದೆ. ರೈತರು ಸೇರಿದಂತೆ ಸಾರ್ವಜನಿಕರು ಮುನ್ನೆಚ್ಚರಿಕೆಯಿಂದ ಇರಬೇಕು. ಬೆಳೆ ನಷ್ಟ ಹೊಂದಿದ ಪ್ರದೇಶಗಳ ಸರ್ವೇ ಕಾರ್ಯನಡೆಸುತ್ತಿದ್ದೇವೆ. ನಂತರ ವರದಿ ಸರ್ಕಾರಕ್ಕೆ ಕಳುಹಿಸಲಾಗುವುದು. -ಡಾ| ಪ್ರಶಾಂತ್‌, ಕೃಷಿ ಇಲಾಖೆ ನಿರ್ದೇಶಕರು ಸಿಂಧನೂರು

 

ಚಂದ್ರಶೇಖರ್‌ ಯರದಿಹಾಳ

Advertisement

Udayavani is now on Telegram. Click here to join our channel and stay updated with the latest news.

Next