Advertisement
ಬೃಹತ್ ಚರಂಡಿಗಳು ಹಾಗೂ ಇತರ ಚರಂಡಿಗಳ ಹೂಳೆತ್ತುವ 1.68 ಕೋ. ರೂ. ವೆಚ್ಚದ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಮೇ ಮೊದಲ ವಾರದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ತ್ವರಿತಗತಿಯಲ್ಲಿ ಪೂರ್ಣ ಗೊಳಿಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಮೇ ಅಂತ್ಯ ಅಥವಾ ಜೂನ್ ಪ್ರಥಮ ವಾರದಲ್ಲಿ ಮಳೆಗಾಲ ಆರಂಭವಾಗಲಿದ್ದು ಇದರೊಳಗೆ ತುರ್ತು ಕಾಮಗಾರಿಗಳನ್ನು ಪೂರ್ಣಗೊಳಿಸ ಬೇಕಾದ ಅನಿವಾರ್ಯವಿದೆ.
ಮಂಗಳೂರು ನಗರದಲ್ಲಿ ಅತ್ತಾವರ, ಕಂಕನಾಡಿ, ಕುದ್ರೋಳಿ, ಬಲ್ಲಾಳ್‌ಬಾಗ್, ಜಪ್ಪಿನಮೊಗರು, ಪಂಪ್‌ವೆಲ್, ಕೊಟ್ಟಾರಚೌಕಿ, ಕೋಡಿಕಲ್, ಮಾಲೆಮಾರ್, ಉಜ್ಯೋಡಿ, ಜಪ್ಪು ಮಹಾಕಾಳಿಪಡು³, ಕೊಂಚಾಡಿ, ಪಾಂಡೇಶ್ವರ ಸಹಿತ ನಗರದಲ್ಲಿರುವ ರಾಜ ಕಾಲುವೆಗಳು ಹಾಗೂ ಇತರ ಚರಂಡಿಗಳ ಹೂಳೆತ್ತುವಿಕೆ ಕಾಮಗಾರಿಗಳನ್ನು 36 ಪ್ಯಾಕೇಜ್‌ಗಳಾಗಿ ಮಾಡಲಾಗಿದೆ. ಮೇ 10ರೊಳಗೆ ಕಾಮಗಾರಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.
Related Articles
ಪಾಲಿಕೆಯ 60 ವಾರ್ಡ್‌ಗಳಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಗಳಲ್ಲಿ ತುಂಬಿರುವ ಹೂಳು ಹಾಗೂ ಮಣ್ಣು ತೆಗೆದು ಸ್ವತ್ಛಗೊಳಿಸುವ ಕಾರ್ಯಕ್ಕೆ ಗ್ಯಾಂಗ್‌ಗಳನ್ನು ರಚಿಸುವ ಕಾರ್ಯ ನಡೆಯುತ್ತಿದ್ದು ಪ್ರತಿವಾರ್ಡ್‌ಗೂ 2.12 ಲಕ್ಷ ರೂ. ಮೀಸಲಿರಿಸಲಾಗಿದೆ.
Advertisement
ತುರ್ತು ಕಾಮಗಾರಿಗೆ ಆದ್ಯತೆ ?ತೋಡು, ಚರಂಡಿಗಳ ಹೂಳೆತ್ತುವುದು, ಭೂಕುಸಿತ ತಡೆ ಸಹಿತ ತುರ್ತು ಕಾಮಗಾರಿಗಳನ್ನು ಮಾತ್ರ ಈ ಬಾರಿ ಕೈಗೆತ್ತಿಗೊಳ್ಳಲಾಗುತ್ತಿದೆ. ಉಳಿದಂತೆ ತೀರಾ ಅವಶ್ಯವಿರುವ ಕಾಮಗಾರಿಗಳಿಗೆ ಮಾತ್ರ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದಾಯ ಸಂಗ್ರಹದಲ್ಲಿ ಹಿನ್ನಡೆ
ಮನಪಾ ಆದಾಯ ಸಂಗ್ರಹದಲ್ಲೂ ಹಿನ್ನಡೆಯಾಗಿದೆ. ಮಾರ್ಚ್, ಎಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ಸಮಯ.ಲಾಕ್‌ಡೌನ್‌ನಿಂದಾಗಿ ತೆರಿಗೆ ಸಂಗ್ರ ಹಕ್ಕೆ ಹಿನ್ನಡೆಯಾಗಿದೆ. ಪಾಲಿಕೆ ನೀರಿನ ಶುಲ್ಕ ವಸೂಲಿ ಕೂಡ ಸ್ಥಗಿತ ಗೊಂಡಿದೆ. ರಾಜ್ಯ ಸರಕಾರದ ಎಸ್‌ಎಫ್‌ಸಿ ಅನುದಾನ ಲಭ್ಯತೆಯೂ ಅನಿಶ್ಚಿತತೆಯಲ್ಲಿದೆ. ಮುನ್ನೆಚ್ಚರಿಕೆ
ಮಳೆಗಾಲದ ತುರ್ತು ಕಾಮ ಗಾರಿಗಳು ಮೇ ತಿಂಗಳ ಮೊದಲ ವಾರದಿಂದ ಆರಂಭಗೊಳ್ಳಲಿದೆ. ಮಳೆಗಾಲದಲ್ಲಿ ಹೆಚ್ಚು ಕಂಡುಬರುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ಆರೋಗ್ಯ ವಿಭಾಗದಿಂದ ಪೂರಕ ಕ್ರಮಗಳು ಆರಂಭಗೊಂಡಿದ್ದು ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ಕ್ರಮಗಳನ್ನು ಕೈಗೊಳ್ಳಲು ನಗರ ಯೋಜನಾ ಇಲಾಖೆಯ ಅಧಿ ಕಾರಿಗಳಿಗೆ ಸೂಚನೆ ನೀಡಲಾಗಿದೆ
– ದಿವಾಕರ್ ಪಾಂಡೇಶ್ವರ, ಮೇಯರ್, ಮನಪಾ