Advertisement
ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌವರ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಬೆಳೆ, ಜಾನುವಾರುಗಳು, ಮನೆ, ರಸ್ತೆ-ಸೇತುವೆಗಳು ಹಾನಿಯಾಗಿವೆ. ಆದ್ದರಿಂದ ಮತ್ತೂಮ್ಮೆ ಜಂಟಿ ಸಮೀಕ್ಷೆ ನಡೆಸಲಾಗುವುದು ಎಂದರು.
Related Articles
Advertisement
ಕಲ್ಯಾಣ ಎನ್ನುವ ಪದವೇ ಅಭಿವೃದ್ಧಿ ಮತ್ತು ಪ್ರಗತಿ ಸೂಚಕ. ಹೀಗಾಗಿ, ಈ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡ ನಾವುಗಳು ನಮ್ಮ ಚಿಂತನೆ ಸದಾಕಾಲ ಅಭಿವೃದ್ಧಿ ಮತ್ತು ಪ್ರಗತಿ ಪಥದತ್ತ ಹರಿಬಿಡೋಣ. ಈ ಕಲ್ಯಾಣ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಬೀದರ್ ಜಿಲ್ಲೆಯ ಪಾತ್ರ ಹಿರಿದಾಗಿದೆ. ಅನೇಕ ಹಿರಿಯರು ವಿಮೋಚನೆಗಾಗಿ ಹೋರಾಡಿದ್ದಾರೆ. ಅವರ ತ್ಯಾಗ-ಬಲಿದಾನ ಎಲ್ಲರೂ ಸ್ಮರಿಸಲೇಬೇಕು. ಜಿಲ್ಲೆಯ ಹೋರಾಟಗಾರರ ಸ್ಫೂರ್ತಿ ಇಂದಿನ ಪೀಳಿಗೆಗೆ ಪ್ರೇರಣಾದಾಯಕ ಎಂದರು.
ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಕೋವಿಡ್ ಹೋಂ ಕ್ವಾರಂಟೈನ್‌ನಲ್ಲಿ ಇರುವ ಹಿನ್ನೆಲೆ ಅವರ ಅನುಪಸ್ಥಿತಿಯಲ್ಲಿ ಡಿಸಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಗಳನ್ನು ಗೌರವಿಸಲಾಯಿತು.
ಈ ವೇಳೆ ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ,
ಶಾಸಕರಾದ ಬಂಡೆಪ್ಪ ಖಾಶಂಪುರ್, ರಹೀಮ್ ಖಾನ್, ಎಂಎಲ್ಸಿ ವಿಜಯಸಿಂಗ್, ಜಿಪಂ ಉಪಾಧ್ಯಕ್ಷ ಲಕ್ಷ್ಮಣ ಬುಳ್ಳಾ, ತಾಪಂ ಅಧ್ಯಕ್ಷ ವಿಜಯಕುಮಾರ ಬರೂರ, ಜಿಪಂ ಸಿಇಒಗ್ಯಾನೇಂದ್ರಕುಮಾರ ಗಂಗ್ವಾರ್, ಎಸ್ಪಿ ನಾಗೇಶ್ ಡಿ.ಎಲ್., ಎಡಿಸಿ ರುದ್ರೇಶ್ ಗಾಳಿ, ಸಹಾಯಕ ಆಯುಕ್ತೆ ಗರೀಮಾ ಪನ್ವಾರ್, ಎಎಸ್ಪಿ ಡಾ. ಗೋಪಾಲ್ ಬ್ಯಾಕೋಡ್ ಇದ್ದರು.
ದ್ವಿತೀಯ ಪಿಯುಸಿ-ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೀದರ ಜಿಲ್ಲ ಅತ್ಯುತ್ತಮ ಸಾಧನೆ ಮಾಡಿದೆ. ಪಿಯುಸಿಯಲ್ಲಿ ಶೇ. 64.61 ಫಲಿತಾಂಶದೊಂದಿಗೆ 18ನೇ ಸ್ಥಾನಕ್ಕೆ, ಎಸ್ಸೆಸ್ಸೆಲ್ಸಿಯಲ್ಲಿನಲ್ಲಿ 24ನೇ ಸ್ಥಾನ ಪಡೆದಿದೆ. ಮುಂದೆಯೂ ಉತ್ತಮ ಫಲಿತಾಂಶ ದಾಖಲಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಯ ವಿದ್ಯಾರ್ಥಿಗಳು ಯುಪಿಎಸ್ಸಿ ಪರೀಕ್ಷೆ ಕೂಡ ಪಾಸು ಮಾಡಲಿ ಎಂಬ ಸದುದ್ದೇಶದಿಂದ ಸೆ.26ಕ್ಕೆ ನಾಗರಿಕ ಸೇವಾ ಪರೀಕ್ಷೆ ಅರಿವು ಕಾರ್ಯಕ್ರಮ ರೂಪಿಸಲಾಗಿದೆ. ಆರ್. ರಾಮಚಂದ್ರನ್, ಜಿಲ್ಲಾಧಿಕಾರಿ, ಬೀದರ