Advertisement
ಬೆಳ್ತಂಗಡಿ, ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಸಂಪಾಜೆ, ಐನೆಕಿದು, ಕಡಬ, ಉಡುಪಿ ಜಿಲ್ಲೆಯ ಕಾರ್ಕಳ ಸಹಿತ ಹಲವು ಕಡೆಗಳಲ್ಲಿ ಮಧ್ಯಾಹ್ನ ಬಳಿಕ ಉತ್ತಮ ಮಳೆ ಸುರಿದಿದೆ.
ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಶನಿವಾರ ಕೂಡ ಮಳೆ ಸುರಿದಿದೆ. ದಿಡುಪೆ, ನಾರಾವಿ ಸಹಿತ ಸಂಸೆ ಗಡಿಭಾಗಗಳಲ್ಲಿ ಉತ್ತಮ ಗಾಳಿ ಮಳೆಯಾಗಿದ್ದು, ಬೆಳ್ತಂಗಡಿ, ಮಡಂತ್ಯಾರು, ಕಾಜೂರು, ಕೊಲ್ಲಿ ಸಹಿತ ನಡ, ಇಂದಬೆಟ್ಟು, ನಾವುರ, ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ. ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪರಿಸರದಲ್ಲಿಯೂ ಸಾಧಾರಣ ಮಳೆಯಾಗಿದೆ. ಮುರಿದು ಬಿದ್ದ ಕಂಬಗಳು
ಚಾರ್ಮಾಡಿ, ಮುಂಡಾಜೆ ಕಡೆ ಮಳೆ ಬೀಳದಿದ್ದರೂ ಭಾರೀ ಗಾಳಿ ಬೀಸಿತು. ಗಾಳಿಯ ಪರಿಣಾಮ 3 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮುಂಡಾಜೆ ಸೀಟು ಸಮೀಪ ಹೆದ್ದಾರಿ ಹಾಗೂ ವಿದ್ಯುತ್ ಲೈನ್ ಮೇಲೆ ಮರಬಿದ್ದು ಕೊಂಚಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.
Related Articles
ಮುಂದಿನ ಎರಡು ದಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸಾಧ್ಯತೆ ಇದೆ.
Advertisement