Advertisement

ಮಳೆಯಿಂದ ರಾಗಿಗೆ ಬಂತು ಕಳೆ !

01:53 PM Oct 18, 2018 | |

ಕಡೂರು: ತಾಲೂಕಿನಾದ್ಯಂತ ಸುರಿಯುತ್ತಿರುವ ಚಿತ್ತಾ ಮಳೆಯು ರಾಗಿ ಬೆಳೆಗೆ ಆಸರೆಯಾಗಿ ಜೀವ ನೀಡಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಬರಗಾಲಕ್ಕೆ ತುತ್ತಾಗುತ್ತಿದ್ದ ಕಡೂರು ತಾಲೂಕಿಗೆ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಬಂದಿದೆ. ಕೆಲವು ಭಾಗಗಳಲ್ಲಿ ಮುಂಗಾರಿನ ಬೆಳೆಗಳು ಕೈ ಕೊಟ್ಟರೂ ಹಿಂಗಾರು ಪೂರ್ವ ಬೆಳೆಗಳಿಗೆ ಬರುತ್ತಿರುವ ಮಳೆಯಿಂದ ಜೀವ ಬಂದಿದೆ.

Advertisement

ತಾಲೂಕಿನಾದ್ಯಂತ 29,705 ಹೆಕ್ಟೇರಿನಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಯಗಟಿ ಹೋಬಳಿಯಲ್ಲಿ 5 ಸಾವಿರ ಹೆಕ್ಟೇರಿಗೂ ಹೆಚ್ಚಿನ ಜಮೀನಿನಲ್ಲಿ ಚಿಜಿತ್ತನೆ ಮಾಡಲಾಗಿದೆ. ಕಡೂರು ಕಸಬಾ 4200, ಹೀರೆನಲ್ಲೂರು 4300, ಸಖರಾಯಪಟ್ಟಣ 4550, ಪಂಚನಹಳ್ಳಿ 4900,ಚೌಳಹಿರಿಯೂರು 3000 ಹೆಕ್ಟೇರಿನಲ್ಲಿ ಬಿತ್ತನೆಯಾಗಿ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಆಗಿದಾಂಗ್ಗೆ ಬರುತ್ತಿರುವ ಮಳೆಯಿಂದ ರಾಗಿ, ಮುಸುಕಿನ ಜೋಳ ಮತ್ತಿತರ ಬೆಳೆಗಳು ಉತ್ತಮ ಇಳುವರಿ ನೀಡಲಿವೆ.

ಕಳೆದ ಒಂದು ವಾರದಿಂದ ಸಂಜೆ ಆಥವಾ ರಾತ್ರಿ ಮಳೆ ಸುರಿಯುತ್ತಿದ್ದು ಕಡೂರು, ಬೀರೂರು ಪಟ್ಟಣಗಳು ಸೇರಿದಂತೆ, ಹಿರೇನಲ್ಲೂರು, ಗಿರಿಯಾಪುರ, ಬಿಳುವಾಲ, ಬಾಸೂರು, ನಾಗೇನಹಳ್ಳಿ ಮುಂತಾದೆಡೆ ಕೊಯ್ಲು ಮಾಡಿದ್ದ ಈರುಳ್ಳಿ ನೆನೆದು ರೈತರು ಅದನ್ನು ರಕ್ಷಿಸಲು ಹರಸಾಹಸ ಪಡುವಂತಹ ಸ್ಥಿತಿಗೆ ಬಂದಿದೆ. ಇನ್ನು ಕೆಲವು ಭಾಗಗಳಲ್ಲಿ ಈರುಳ್ಳಿಗೆ ಬೆಲೆ ಇಲ್ಲದೆ ಕೂಲಿ ನೀಡಲಾಗದೆ ಬೆಳೆಯನ್ನು ಹೊಲದಲ್ಲೇ ಬಿಟ್ಟುಬಿಟ್ಟಿದ್ದಾರೆ.
 
ಈ ಬಾರಿ ಮುಂಗಾರು ಪೂರ್ವ ಮಳೆ ಬಾರದೇ ರೈತರು ಆತಂಕಕ್ಕೊಳಗಾಗಿದ್ದರು. ಹಾಕಿದ ಬೆಳೆಗಳೆಲ್ಲ ಮಳೆ ಬಾರದೆ ಹಾಳಾಗಿತ್ತು. ಕಡೂರು ತಾಲೂಕನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ.

ವಾಣಿಜ್ಯ ಬೆಳೆಗಳಾದ ಈರುಳ್ಳಿ ಮತ್ತು ಹತ್ತಿ ಅತ್ಯಂತ ಕಡಿಮೆ ಇಳುವರಿ ಬಂದಿತ್ತು. ಮಿಕ್ಕಂತೆ ಇತರೆ ಬೆಳೆಗಳಾದ ಉದ್ದು, ಹೆಸರು, ಎಳ್ಳು, ಮೆಕ್ಕೆಜೋಳ, ಶೇಂಗಾ ಮುಂತಾದವುಗಳು ಶೇ.70 ರಷ್ಟು ಹಾನಿಗೊಳಗಾಗಿದ್ದವು. ಇದೀಗ ಚಿತ್ತಾ ಮಳೆ ಉತ್ತಮವಾಗಿ ಬಂದಿರುವುದು ಈಗಾಗಲೇ ಬಿತ್ತನೆ ಕಾರ್ಯ ಮುಗಿದಿದೆ ಎಂದು ತಾಲೂಕು ಪ್ರಭಾರ ಕೃಷಿ ಅಧಿಕಾರಿ ಚಂದ್ರು ಮಾಹಿತಿ ನೀಡಿದರು.

ಮೊದಲು ಕೈಕೊಟ್ಟ ಮಳೆ ಇದೀಗ ಬಿರುಸಾಗಿ ಸುರಿಯಲಾರಂಭಿಸಿರುವುದು ರೈತರಿಗೆ ಹರ್ಷ ತಂದರೂ ಯಾವುದೇ ಕೆರೆಗಳು ತುಂಬಿಲ್ಲದಿರುವುದು ಆತಂಕಕಾರಿಯಾಗಿದೆ. ಕೆರೆಗಳು ತುಂಬದಿದ್ದರೆ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಕೊರತೆಯಿಂದ ನೀರು ಕಡಿಮೆಯಾಗುವ ಸಂಭವವಿದೆ. ಅಲ್ಲದೆ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಕಾಡಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next