Advertisement

ರಾಜಸ್ಥಾನಕ್ಕೆ ಮಳೆ ಬ್ರೇಕ್‌

07:00 AM Apr 12, 2018 | Team Udayavani |

ಜೈಪುರ: ಬಹಳ ಸಮಯದ ಬಳಿಕ ತವರಿನ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ಐಪಿಎಲ್‌ ಪಂದ್ಯವನ್ನು ಆಡಲಿಳಿದ ರಾಜಸ್ಥಾನ್‌ ರಾಯಲ್ಸ್‌ಗೆ ಮಳೆಯಿಂದ ಅಡ್ಡಿಯಾಗಿದೆ. ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧದ ಈ ಪಂದ್ಯ 17.5 ಓವರ್‌ಗಳ ವೇಳೆ ಸ್ಥಗಿತಗೊಂಡಾಗ ರಹಾನೆ ಬಳಗ 5 ವಿಕೆಟಿಗೆ 153 ರನ್‌ ಮಾಡಿತ್ತು.

Advertisement

ಹೈದರಾಬಾದ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿ ಹೀನಾಯ ಸೋಲಿಗೆ ತುತ್ತಾಗಿದ್ದ ರಾಜಸ್ಥಾನ್‌ ಬುಧವಾರದ ಮುಖಾಮುಖೀಯಲ್ಲಿ ಸುಧಾರಿತ ಆಟವಾಡಿತು. ಆರಂಭಕಾರ ಡಿ’ಆರ್ಸಿ ಶಾರ್ಟ್‌ ಮತ್ತು ವನ್‌ಡೌನ್‌ ಆಟಗಾರ ಬೆನ್‌ ಸ್ಟೋಕ್ಸ್‌ ವಿಫ‌ಲರಾದರೂ ನಾಯಕ ಅಜಿಂಕ್ಯ ರಹಾನೆ 45 ರನ್‌ (40 ಎಸೆತ, 5 ಬೌಂಡರಿ) ಮಾಡಿ ತಂಡದ ನೆರವಿಗೆ ನಿಂತರು. ಅವರಿಗೆ ಸಂಜು ಸ್ಯಾಮ್ಸನ್‌ ಉತ್ತಮ ಬೆಂಬಲವಿತ್ತರು. ಸ್ಯಾಮ್ಸನ್‌ 22 ಎಸೆತಗಳಿಂದ 37 ರನ್‌ ಸಿಡಿಸಿದರು (2 ಬೌಂಡರಿ, 2 ಸಿಕ್ಸರ್‌). ರಹಾನೆ-ಸ್ಯಾಮ್ಸನ್‌ ಜೋಡಿಯಿಂದ 3ನೇ ವಿಕೆಟಿಗೆ 62 ರನ್‌ ಹರಿದು ಬಂತು. ಜಾಸ್‌ ಬಟ್ಲರ್‌ 18 ಎಸೆತಗಳಿಂದ 29 ರನ್‌ (2 ಬೌಂಡರಿ, 2 ಸಿಕ್ಸರ್‌) ಬಾರಿಸಿದರೆ, ರಾಹುಲ್‌ ತ್ರಿಪಾಠಿ ಅಜೇಯ 15 ರನ್‌ ಮಾಡಿದ್ದರು. ಡೆಲ್ಲಿ ಪರ ಶಾಬಾಜ್‌ ನದೀಂ 2 ವಿಕೆಟ್‌ ಉರುಳಿಸಿದರು. ಬೌಲ್ಟ್ ಮತ್ತು ಶಮಿಗೆ ಒಂದೊಂದು ವಿಕೆಟ್‌ ಲಭಿಸಿತು.

ಸ್ಕೋರ್‌ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌

ಅಜಿಂಕ್ಯ ರಹಾನೆ    ಸಿ ಮಾರಿಸ್‌ ಬಿ ನದೀಮ್‌    45
ಡಿ’ಆರ್ಸಿ ಶಾರ್ಟ್‌    ರನೌಟ್‌    6
ಬೆನ್‌ ಸ್ಟೋಕ್ಸ್‌    ಸಿ ಪಂತ್‌ ಬಿ ಬೌಲ್ಟ್    16
ಸಂಜು ಸ್ಯಾಮ್ಸನ್‌    ಬಿ ನದೀಮ್‌    37
ಜಾಸ್‌ ಬಟ್ಲರ್‌    ಬಿ ಶಮಿ    29
ರಾಹುಲ್‌ ತ್ರಿಪಾಠಿ    ಔಟಾಗದೆ    15
ಕೆ. ಗೌತಮ್‌    ಔಟಾಗದೆ    2

ಇತರ        3
ಒಟ್ಟು  (17.5 ಓವರ್‌ಗಳಲ್ಲಿ 5 ವಿಕೆಟಿಗೆ)    153
ವಿಕೆಟ್‌ ಪತನ: 1-11, 2-28, 3-90, 4-112, 5-150.

ಬೌಲಿಂಗ್‌:
ಟ್ರೆಂಟ್‌ ಬೌಲ್ಟ್        3-0-26-1
ಶಾಬಾಜ್‌ ನದೀಂ        4-0-34-2
ಕ್ರಿಸ್‌ ಮಾರಿಸ್‌        3-0-34-0
ಮೊಹಮ್ಮದ್‌ ಶಮಿ        3.5-0-29-1
ರಾಹುಲ್‌ ಟೆವಾಟಿಯ        4-0-29-0

Advertisement
Advertisement

Udayavani is now on Telegram. Click here to join our channel and stay updated with the latest news.

Next