Advertisement
ಬಿರುಗಾಳಿಯಿಂದಾಗಿ ಅಡಿಕೆ ಮರ, ಬಾಳೆ ಗಿಡಗಳು ಉರುಳಿ ಬಿದ್ದು ಅಪಾರ ನಷ್ಟ ಸಂಭವಿಸಿದೆ.
ವರಂಗ ಮಾತಿಬೆಟ್ಟು ಸೇತುವೆ ಬಳಿ ಶನಿವಾರ ಸಂಜೆ ಭಾರೀ ಗಾಳಿ- ಮಳೆಯಿಂದಾಗಿ ಮರ ಬಿದ್ದು ವಿದ್ಯುತ್ ಕಂಬ ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿಗೆ ಉರುಳಿತು. ಸುಮಾರು ಒಂದು ಗಂಟೆ ಕಾಲ ರಸ್ತೆ ಸಂಚಾರ ಸ್ಥಗಿತಗೂಂಡಿತ್ತು.
Related Articles
ಮಂಗಳೂರು/ ವೇಣೂರು: ಶನಿವಾರ ಸಂಜೆ ವೇಣೂರು ಪರಿಸರದಲ್ಲಿ ಸಿಡಿಲು ಸಹಿತ ಅರ್ಧತಾಸು ಮಳೆ ಯಾಗಿದೆ. ಪುತ್ತೂರಿನ ಸರ್ವೆ, ಪುರುಷರ ಕಟ್ಟೆ, ಗಡಿಪಿಲ ಸುತ್ತಮುತ್ತ ಮಳೆಯಾಗಿದೆ.
Advertisement
ಬಜಿರೆ ಶಾಲೆಯ ಕಾಂಪೌಂಡ್‌ನಲ್ಲಿದ್ದ ಅಶೋಕ ಮರದ ಬುಡಕ್ಕೆ ಸಿಡಿಲು ಬಡಿದು ಇಂಟರ್‌ಲಾಕ್ ಅಳವಡಿಸಿದ ದಂಡೆಗೆ ಹಾನಿಯಾಗಿದೆ.
ಎ. 14ರಿಂದ ಎರಡು ದಿನ ಮಳೆಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಶನಿವಾರ ಪಣಂಬೂರಿನಲ್ಲಿ 36 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 3 ಡಿ.ಸೆ. ಉಷ್ಣಾಂಶ ಹೆಚ್ಚು ಇತ್ತು. 26.3 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 1 ಡಿ.ಸೆ. ಹೆಚ್ಚು ಇತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಎ. 14ರಿಂದ ಎರಡು ದಿನಗಳ ಕಾಲ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.